News and Events
ತಾಂತ್ರಿಕ ಮಾಹಿತಿ ಕಾರ್ಯಗಾರ
ಪುತ್ತೂರು: ಅಸೋಸಿಯೇಷನ್ ಆಪ್ ಕನ್ಸಲ್‌ಟಿಂಗ್ ಸಿವಿಲ್ ಇಂಜಿನಿಯರ್‍ಸ್ (ಇಂಡಿಯಾ), ಮಂಗಳೂರು ವಿಭಾಗ ಮತ್ತು ರ್‍ಯಾಮ್ಕೋ ಸಿಮೆಂಟ್ ಇದರ ಸಹಕಾರದೊಂದಿಗೆ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಮಳೆ ನೀರು ಕೊಯ್ಲು ಹಾಗೂ ಮಾರ್ವೆಲ್ ಇನ್ ಸಿವಿಲ್ ಇಂಜಿನಿಯರಿಂಗ್ ಎಂಬ ವಿಷಯದ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಖ್ಯಾತ ಸಿವಿಲ್ ಇಂಜಿನಿಯರ್ ಅನಿಲ್ ಬಾಳಿಗ ಮತ್ತು ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ರಕ್ಷಿತ್ ಆರ್ ಶೆಟ್ಟಿ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ರ್‍ಯಾಮ್ಕೋ ಸಿಮೆಂಟ್ ಇಂಜಿನಿಯರ್ ಶಿವರಾಜ್
ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭೆ ಸರ್ ಎಂ. ವಿಶ್ವೇಶ್ವರಯ್ಯ – ಪ್ರಸನ್ನ ಎನ್ ಭಟ್
ಪುತ್ತೂರು: ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಯಿತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭೆ. ಕಠಿಣ ಪರಿಶ್ರಮ ಮತ್ತು ಶಿಸ್ತು ಅವರ ದ್ಯೇಯವಾಗಿತ್ತು, ಔದ್ಯೋಗಿಕರಣವೇ ದೇಶದ ಆಭಿವೃದ್ದಿಗೆ ಕಾರಣ ಎಂಬ ನಿಲುವು ಅವರಲ್ಲಿತ್ತು. ಆತ್ಮಗೌರವಕ್ಕೆ ಚ್ಯುತಿ ಬಾರದಂತೆ ಗೌರವದಿಂದ ಶಿಸ್ತಿನಿಂದ ಅವರು ಬಾಳಿದರು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ
ಪುತ್ತೂರಿನಲ್ಲಿ ಓಣಂ ಆಚರಣೆ
ಪುತ್ತೂರು: ‘ಓಣಂ’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಚಂದ್ರಕುಮಾರ್ ಅವರು ದೀಪ ಬೆಳಗಿಸಿ ಓಣಂ ಆಚರಣೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಸಿವಿಲ್ ಗುತ್ತಿಗೆದಾರರಾದ ಗೋಪಾಲ್ ಸೂರಿಕುಮೇರು ಉಪಸ್ಥಿತರಿದ್ದರು. ಈ ಹಬ್ಬವನ್ನು ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ಕಾಲೇಜಿನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರುಗಳು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.
ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ಕೆಡೆನ್ಸ್ ಡಿಸೈನ್ ಸಿಸ್ಟಮ್ ಸಂಸ್ಥೆಯು 07/09/2019 ರಂದು ಭೇಟಿ ನೀಡಿ ಕ್ಯಾಂಪಸ್ ನೇಮಕಾತಿ ನಡೆಸಿತು. ಇದರಲ್ಲಿ ಸುತ್ತಮುತ್ತಲಿನ 11 ಪಾಲಿಟೆಕ್ನಿಕ್‌ಗಳಿಂದ ಬಂದ ಇಲೆಕ್ಟ್ರೋನಿಕ್ಸ್ & ಕಮ್ಯುನಿಕೇಷನ್ ಮತ್ತು ಇಲೆಕ್ಟ್ರಿಕಲ್ & ಇಲೆಕ್ಟ್ರೋನಿಕ್ಸ್ ವಿಭಾಗದ ಅರ್ಹ 160 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಕೆಡೆನ್ಸ್ ಸಂಸ್ಥೆಯ ಅಧಿಕಾರಿ ಶ್ರೀ ವೆಂಕಟೇಶ್ ಅವರು ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟರು. ಎರಡು ಸುತ್ತಿನ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಂತರ ಮೌಖಿಕ ಸಂದರ್ಶನ ನಡೆಸಲಾಯಿತು. ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ
ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಈ ಕೆಳಗಿನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ತೃತೀಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಆಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ತೃತೀಯ ಮೆಕ್ಯಾನಿಕಲ್ ವಿಭಾಗದ ಆನಂದ ರಾಜ್, ಸಹಕಾರ್ಯದರ್ಶಿಯಾಗಿ ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ರಂಜಿತ್ ಪಿ.ವಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಸಿವಿಲ್ ಇಂಜಿನಿಯರಿಂಗ್‌ನ ನವನೀತ್ ಕೆ, ಆಯುಧ ಪೂಜಾ ಕಾರ್ಯದರ್ಶಿಯಾಗಿ ತೃತೀಯ ಅಟೋಮೊಬೈಲ್ ಇಂಜಿನಿಯರಿಂಗ್‌ನ ಅಕ್ಷಯ್ ಕುಮಾರ್, ವಿದ್ಯಾರ್ಥಿನಿಯರ ಪ್ರತಿನಿಧಿಯಾಗಿ ತೃತೀಯ ಕಂಪ್ಯೂಟರ್ ಸೈನ್ಸ್‌ನ ಪಲ್ಲವಿ ಬಿ. ಜೆ. ಮತ್ತು ಕ್ರೀಡಾ
ರಕ್ಷಾ ಬಂಧನ ಕಾರ್ಯಕ್ರಮ
ಪುತ್ತೂರು: ರಕ್ಷಾ ಬಂಧನ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಕಾರ್ಯವಾಹ ಶ್ರೀ ಚಂದ್ರಶೇಖರ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡುತ್ತಾ ರಕ್ಷಾ ಬಂಧನ ಉತ್ಸವವನ್ನು ಆಚರಣೆ ಮಾಡುವುದು ಕೇವಲ ರಕ್ಷೆಯನ್ನು ಕಟ್ಟಲು ಮಾತ್ರವಲ್ಲ, ರಕ್ಷೆ ಕಟ್ಟುವುದರೊಂದಿಗೆ ಪರಸ್ಪರ ಪರಿಚಯ ವಿನಿಮಯವನ್ನು ಮಾಡಿಕೊಳ್ಳುವುದು ಬಹುಮುಖ್ಯ. ಹಿಂದುತ್ವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗಳನ್ನು ಒಳಗೊಂಡಿರುವ ಜೀವನ ಶೈಲಿಯಾಗಿದೆ ಹಾಗಾಗಿ ವಿದ್ಯಾರ್ಥಿಗಳು ಭೇದ ಭಾವ ಮರೆತು ಎಲ್ಲರೂ ಒಂದು ಎಂಬ ಭಾವನೆಯೊಂದಿಗೆ
ಪ್ರಯೋಗಾಲಯ ಸಿಬ್ಬಂದಿಗಳ ಪುನಶ್ಚೇತನ ಕಾರ್ಯಾಗಾರ
ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಸಾರವನ್ನು ಕಲಿಸುವ ಸಾಧಕರು ನಾವಾಗಬೇಕು ಅಚ್ಚ್ಯುತನಾಯಕ್ ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪ್ರಶಿಕ್ಷಣ ಘಟಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದೊಂದಿಗೆ ಸಂಸ್ಥೆಯ ಪ್ರಯೋಗಾಲಯ ನಿರ್ವಾಹಕರು ಹಾಗೂ ಸಹಾಯಕರ ಪುನಶ್ಚೇತನ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿಗಳಾದ ಎಂ. ಕೃಷ್ಣ ಭಟ್ ಮಾತನಾಡಿ, ವಿವೇಕಾನಂದ ವಿದ್ಯಾವರ್ದಕ ಸಂಘ ಒಂದು ಪ್ರಯೋಗಶಾಲೆ. ಈ ಪ್ರಯೋಗಶಾಲೆಯ ಪ್ರಯೋಗಾಲಯಗಳ ಸಿಬ್ಬಂದಿಗಳು ನೀವೆಲ್ಲಾ, ವಿದ್ಯಾರ್ಥಿಗಳ ವಿದ್ಯಾರ್ಜನೆಯ
ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ವೃಕ್ಷಾರೋಪಣ 2019
ಪುತ್ತೂರು: ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ವೃಕ್ಷಾರೋಪಣ 2019 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪಡ್ಡಾಯೂರು ಹಾಗೂ ಪಡ್ನೂರು ಗ್ರಾಮಗಳಲ್ಲಿ ಗಿಡನೆಡುವ ಮೂಲಕ ಉದ್ಘಾಟಿಸಲಾಯಿತು. ಪಡ್ಡಾಯೂರು ಭಜನಾ ಮಂದಿರದಲ್ಲಿ ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಮಣಿ ಡಿ ಗಾಣಿಗ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಪಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮವಿಕಾಸ ಯೋಜನೆಯ ಸಂಚಾಲಕರಾದ ಶ್ರೀಯುತ ಶ್ರೀನಿವಾಸ್ ಪೆರೋಡಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ಪಡ್ಡಾಯೂರು
ಕಾರ್ಗಿಲ್ ವಿಜಯ ದಿವಸ್
ಕಾರ್ಗಿಲ್ ವಿಜಯ ದಿವಸ್ ಒಂದು ದಿನದ ಸಂಭ್ರಮವಲ್ಲ – ಆದರ್ಶ ಗೋಖಲೆ ಪುತ್ತೂರು: ಕಾರ್ಗಿಲ್ ವಿಜಯ ದಿವಸ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಆದರ್ಶ ಗೋಖಲೆ ನಡೆಸಿಕೊಟ್ಟರು. ಇವರು ಮಾತನಾಡುತ್ತಾ, 1999 ರ ಜುಲೈ 26 ರಂದು ಕಾರ್ಗಿಲ್ ಯುದ್ಧ ಗೆದ್ದ ದಿನ. ಈ ದಿನ ನಮ್ಮೆಲ್ಲಾ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಒಂದೆಡೆ ಶಾಂತಿ ಮಂತ್ರ ಜಪಿಸುತ್ತಲೇ ಮತ್ತೊಂದೆಡೆ ಪಾಕಿಸ್ತಾನ ಸೇನೆ ತನ್ನ ಸೈನಿಕರನ್ನು ದೇಶದ ಗಡಿಯೊಳಗೆ ನುಗ್ಗಿಸಿತ್ತು. ನಮ್ಮ ವೀರ ಸೈನಿಕರು ತಮ್ಮ ಪ್ರಾಣವನ್ನೇ ಪಣಕಿಟ್ಟು ಕಾರ್ಗಿಲ್
ಶಾಲಾ ವಾಹನ ಚಾಲಕರ ತರಬೇತಿ ಕಾರ್ಯಾಗಾರ
ಸಾರಿಗೆ ನಿಯಮಗಳು ಇರುವುದು ನಮ್ಮ ಸುರಕ್ಷತೆಗಾಗಿ – ಪ್ರಸನ್ನ ಎನ್ ಭಟ್ ಪುತ್ತೂರು: ಪ್ರಶಿಕ್ಷಣ ಘಟಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಆಶ್ರಯದಲ್ಲಿ ವಾಹನ ಚಾಲಕರ ತರಬೇತಿ ಕಾರ್ಯಾಗಾರ ವಿವೇಕಾನಂದ ಪಾಲಿಟೆಕ್ನಿಕ್ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಭಟ್ ಮಾತನಾಡಿ ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ ಸಹಕರಿಸಿದ ಶ್ರೀಕೃಷ್ಣನಂತೆ ಈ ಸಂಸ್ಥೆಯ ಸಾರಥಿಗಳು ನಮ್ಮೆಲ್ಲ ಚಾಲಕರು. ಚಾಲಕರ ಕೆಲಸ ತುಂಬಾ ಜವಾಬ್ದಾರಿಯುತವಾದದ್ದು. ಸಾರಿಗೆ