ಪುತ್ತೂರು: ಇತ್ತೀಚೆಗೆ ಸ್ವರ್ಗಸ್ಥರಾದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಸದಸ್ಯರು, ಪುತ್ತೂರಿನ ಖ್ಯಾತ ಉದ್ಯಮಿಗಳು ಆದ ವಿಪಿನ್ ಕುಮಾರ್ ಕೆ ಅವರಿಗೆ ವಿವೇಕಾನಂದ ಪಾಲಿಟೆಕ್ನಿಕ್ನ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾತಾ ಅಮೃತಾನಂದಮಯಿಯವರ ಪರಮ ಭಕ್ತರು, ಕೊಡುಗೈ ದಾನಿಯೂ, ವಿವೇಕಾನಂದ ಪಾಲಿಟೆಕ್ನಿಕ್ಗೆ ಎಲ್ಲಾ ವಿಧಗಳಲ್ಲೂ ಸಹಾಯ ಹಸ್ತ ಚಾಚಿದ್ದ ವಿಪಿನ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮಗೆಲ್ಲ ಅಪಾರ ದು:ಖದ ಸಂಗತಿ. ಅವರು ಜೀವನದ ಪ್ರತಿಯೊಂದು ಘಟ್ಟದಲ್ಲೂ ಯಾವ ರೀತಿ ಇರಬೇಕು ಎಂದು ತಿಳಿದುಕೊಂಡವರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ನೀಡಲಿ ಎಂದು ವಿವೇಕಾನಂದ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿಯವರು ನುಡಿದರು.
ಈ ಸಂತಾಪ ಸೂಚಕ ಸಭೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಎನ್. ಭಟ್, ಸಂಚಾಲಕರಾದ ಮಣಿಲ ಮಹಾದೇವ ಶಾಸ್ತ್ರಿ, ಸದಸ್ಯರುಗಳಾದ ಕೆ.ಟಿ.ಮುರಳಿ, ಸೂರ್ಯನಾಥ ಆಳ್ವ, ಪಾಲಿಟೆಕ್ನಿಕ್ನ ವಿವಿಧ ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.