• 08251 231197
  • vptputtur@yahoo.co.in

ಭಾನ್ಕುಳಿ ಮಠದ ಗೋಶಾಲೆಗೆ ಗೋವುಗಳ ಮೇಲೆತ್ತುವ ನೂತನ ಸಾಧನ ’ಜೀವಾಧಾರ’ದ ಸಮರ್ಪಣೆ

ಪುತ್ತೂರು: ಕುಸಿದು ಬಿದ್ದ ದನ, ಎತ್ತುಗಳನ್ನು ಆದರಿಸಿ ನಿಲ್ಲಿಸಿ ಚಿಕಿತ್ಸೆ ಮಾಡಲು ಅನುಕೂಲ ಮಾಡುವ ಯಂತ್ರವನ್ನು ಅಭಿವೃದ್ಧಿ ಪಡಿಸಿ ಭಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ನಡೆದ ಸರ್ವ ಸೇವಕ ಸಮಾವೇಶದಲ್ಲಿ ಗೋಶಾಲೆಗೆ ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಸಮರ್ಪಿಸಲಾಯಿತು. ಶ್ರೀರಾಮಚಂದ್ರಾಪುರಮಠದ ಜಗದ್ಗರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಕಾಲೇಜಿನ ತಂಡಕ್ಕೆ ಶಾಲು ಟಂಕೆ ಮಂತ್ರಾಕ್ಷತೆ ನೀಡಿ, ಗೋ ಲೋಕಕ್ಕೆ ನೀಡಿದ ಮಹಾ ಪುಣ್ಯಪ್ರದ ಕೆಲಸ ಎಂದು ಭಾವನಾತ್ಮಕವಾಗಿ ನುಡಿದು ಈ ಸಾಧನಕ್ಕೆ ‘ಜೀವಾಧಾರ’ ಎಂದು ನಾಮಕರಣ ಮಾಡಿದರು.

1
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕೃಷಿ ಪೂರಕ ಅವಿಷ್ಕಾರಗಳ ರಾಜ್ಯ ಮಟ್ಟದ ಅನ್ವೇಷಣ 2019 ರಲ್ಲಿ ಕಬಕ ಸವೀಪದ ರಮೇಶ್ ಅಡ್ಯಾಲು ನಿರ್ಮಿಸಿದ್ದ 78 ಕೆ.ಜಿ. ತೂಕದ ದನ ಎತ್ತಬಲ್ಲ ಸಾಧನವನ್ನು ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾರ್ಗದರ್ಶನದಂತೆ ಕಾಲೇಜಿನ ಸಿಬಂದಿಗಳು ಅಭಿವೃದ್ಧಿ ಪಡಿಸಿದ್ದರು. ಈ ಸಾಧನವನ್ನು ಅವಶ್ಯಕತೆಗೆ ತಕ್ಕಂತೆ ಬಿಡಿಸಿ ಜೋಡಣೆ ಮಾಡಬಹುದಾಗಿದ್ದು ಇದರ ಮಧ್ಯ ಭಾಗದಲ್ಲಿ ಬೆಲ್ಟ್ ಇದ್ದು ಇದನ್ನು ದನದ ಹೊಟ್ಟೆಯ ಕೆಳಭಾಗದಲ್ಲಿ ಜೋಡಣೆ ಮಾಡಿ ಚೌಕಟ್ಟಿಗೆ ಸೇರಿಸಿದ ಬಳಿಕ ಗೇರ್‌ಬಾಕ್ಸ್ ಮೂಲಕ ಮಕ್ಕಳಿಗೆ ಕೂಡ ದನವನ್ನು ಮೇಲೆತ್ತುವ ರೀತಿಯಲ್ಲಿ ಯಂತ್ರವನ್ನು ರೂಪಿಸಲಾಗಿದೆ. ಚೌಕಟ್ಟಿಗೆ ವೀಲ್ ಅಳವಡಿಸುವ ಮೂಲಕ ಅಶಕ್ತ ಗೋವುಗಳ ಸ್ಥಳಾಂತರವನ್ನೂ ಇದರಲ್ಲಿ ಮಾಡಬಹುದಾಗಿದೆ. ಈಗಾಗಲೇ ಐದಾರು ಕಡೆ ಏಳಲಾಗದೆ ಬಿದ್ದಂತಹ ದನಗಳನ್ನು ಈ ಯಂತ್ರದ ಮೂಲಕ ಎಬ್ಬಿಸಿ ನಿಲ್ಲಿಸುವ ಮೂಲಕ ಯಶಸ್ಸು ಪಡೆಯಲಾಗಿದೆ.

ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ| ವೈ.ವಿ.ಕೃಷ್ಣಮೂರ್ತಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್ ಕೊಂಕೋಡಿ, ಪಾಲಿಟೆಕ್ನಿಕ್ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ, ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಎಂ., ಆಡಳಿತ ಮಂಡಳಿಯ ಎಂ.ಟಿ. ಜಯರಾಮ್, ಮೋಹನ ಉರಿಮಜಲು, ಮೂಲ ಯಂತ್ರ ತಯಾರಿಸಿದ ರಮೇಶ್ ಅಡ್ಯಾಲು ಕಬಕ, ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ ಎಸ್, ಅನ್ವೇಷಣಾ ತಂಡದ ಸತೀಶ್ ರೈ, ಮುರಳೀಧರ್, ರಾಜಶೇಖರ, ಯಂತ್ರ ತಯಾರಿಕೆಗೆ ಶ್ರಮಿಸಿದ ಮೆಕ್ಯಾನಿಕಲ್ ವಿಭಾಗದ ವಿನ್ಯಾಸ್ ಪಿ.ಕೆ., ಕಿಶೋರ್ ಕುಮಾರ್, ನಟೇಶ್ ಮಾವೆ, ಅನಿಲ್ ಕುಮಾರ್ ಮುಂತಾದವರು ಯಂತ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Highslide for Wordpress Plugin