News and Events
ಆತ್ಮನಿರ್ಭರ ಭಾರತ ಕಲ್ಪನೆಯ ಸ್ವಾವಲಂಬಿಗಳು ತಯಾರಿಸಿದ ಉತ್ಪನ್ನ ಪ್ರದರ್ಶನದ ಉದ್ಭಾಟನಾ ಸಮಾರಂಭ
ಕೊರೋನಾ ಪಿಡುಗಿನ ಮೊದಲನೇ ಅಲೆ ದೇಶದಾದ್ಯಂತ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜನತೆ ಇದ್ದ ಕೆಲಸಗಳನ್ನು ಕಳೆದು ಕೊಂಡು ಮತ್ತೆ ತಾಯಿನಾಡಿನತ್ತ ಮುಖ ಮಾಡಿರುವ ಸಂದರ್ಭದಲ್ಲಿ ಅಂತಹವರ ಬಾಳಿನಲ್ಲಿ ಆಶಾಕಿರಣವನ್ನು ತುಂಬುವ ದೃಷ್ಠಿಯಿಂದ ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಗ್ರಾಮವಿಕಾಸ ಸಮಿತಿ, ಮಂಗಳೂರು ಮತ್ತು ಸಹಕಾರ ಭಾರತಿ, ದಕ್ಷಿಣ ಕನ್ನಡ ಇವುಗಳ ಸಹಕಾರದಿಂದ ಕಾಸರಗೋಡು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡದ 20 ಪ್ರಮುಖ ಕೇಂದ್ರಗಳಲ್ಲಿ ಸಂಯೋಜಿಸಿದ ಉದ್ಯೋಗ ನೈಪುಣ್ಯ ತರಬೇತಿಯಲ್ಲಿ 4536 ಜನರು
ಎರಡನೇ ಸುತ್ತಿನ ಲಸಿಕಾ ಅಭಿಯಾನ
ವಿವೇಕಾನಂದ ಪಾಲಿಟೆಕ್ನಿಕ್ ನೆಹರುನಗರದಲ್ಲಿ ಎರಡನೇ ಸುತ್ತಿನ ಕೋವಿಡ್ ಲಸಿಕಾ ಅಭಿಯಾನ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯಗಳ ಜಂಟಿ ಸಹಯೋಗದೊಂದಿಗೆ ನಡೆಯಿತು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ೪೦೦ ಲಸಿಕೆಗಳನ್ನು ನೀಡಲಾಯಿತು.
ಬೃಹತ್ ಲಸಿಕಾ ಅಭಿಯಾನ
ಲಸಿಕಾ ಅಭಿಯಾನದ ಮೂಲಕ ಕೋವಿಡ್ ಮುಕ್ತ ಸಮಾಜ ನಿರ್ಮಿಸೋಣ – ಸಂಜೀವ ಮಠಂದೂರು ಪುತ್ತೂರು: ಈಗಾಗಲೇ ಪುತ್ತೂರು ತಾಲೂಕಿನಲ್ಲಿರುವ ಎಲ್ಲಾ 18+ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಉಳಿದವರಿಗೆ ಶೀಘ್ರವಾಗಿ ಲಸಿಕೆ ವಿತರಣೆ ಆಗಲಿದೆ. ಈ ಅಭಿಯಾನದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ನಗರ ಸಭೆಯವರು ಹಾಗೂ ಇತರ ಇಲಾಖೆಗಳು ಕೈಜೋಡಿಸಿವೆ. ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ಬೇಕಾಗಿರುವ ಕಟ್ಟಡವನ್ನು ಮಂಜೂರಾತಿಗಾಗಿ ಕಳುಹಿಸಿಕೊಡಲಾಗಿದೆ. ಈಗಾಗಲೇ ಮೂಲಭೂತ ಸೌಕರ್ಯವನ್ನು ಸಾಕಷ್ಟು ವೈದ್ಯರನ್ನು ನೇಮಕಮಾಡಿಕೊಳ್ಳುವ
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ’ಖಿಂಈಇ – ಇPಆ’ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್‌ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ, ಬ್ಯಾರಿಸ್ ಪಾಲಿಟೆಕ್ನಿಕ್ ಮಂಗಳೂರು ಮೊದಲಾದ ಪಾಲಿಟೆಕ್ನಿಕ್‌ಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 125 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ’ಟಫೇ
ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರ
ಪುತ್ತೂರು: ಯಾವಾಗಲೂ ರಸ್ತೆ ನಿಯಮಗಳನ್ನು ಪಾಲಿಸಿ, ಎಲ್ಲಿಯಾದರೂ ರಸ್ತೆ ಅವಘಡ ಕಂಡು ಬಂದರೆ ತಕ್ಷಣ ಸ್ಪಂದಿಸಿ, ತುರ್ತು ಚಿಕಿತ್ಸೆ ನೀಡಲು ಸಹಕರಿಸಿ, ದಯವಿಟ್ಟು ಮೊಬೈಲ್ ನಲ್ಲಿ ಪೋಟೋ ತೆಗೆಯಬೇಡಿ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಆನಂದ ಗೌಡ ಅವರು ವಿವೇಕಾನಂದ ಪಾಲಿಟೆಕ್ನಿಕ್‌ನ ತೃತೀಯ ಅಟೋಮೋಬೈಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ವಾಹನ ಚಾಲನೆಯ ಹೊಸ ಕಾಯಿದೆಗಳು, ನಿಯಮಗಳು, ವಾಹನ ನೋಂದಣಿ, ವಾಹನ ಪರವಾನಿಗೆ ಹಾಗೂ ಅದರ ನವೀಕರಣ, ರಸ್ತೆ ಸುರಕ್ಷತೆ, ವೇಗದ ಮಿತಿ, ಸಿಗ್ನಲ್‌ಗಳು,
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ‘TAFE – Tractor Division’ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್‌ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಪ್ರಸನ್ನ ಪಾಲಿಟೆಕ್ನಿಕ್ ಬೆಳ್ತಂಗಡಿ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ ಮೊದಲಾದ ಪಾಲಿಟೆಕ್ನಿಕ್‌ಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 200 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿವೃತ್ತ ಉದ್ಯೋಗಿಗಳಿಗೆ ಬೀಳ್ಕೊಡುಗೆ ಸಮಾರಂಭ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 33 ವರ್ಷ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀಮತಿ ಸರವಣ ಮುತ್ತು ಹಾಗೂ 28 ವರ್ಷಗಳ ಕಾಲ ಕಛೇರಿ ವ್ಯವಸ್ಥಾಪಕರಾಗಿದ್ದ ಶ್ರೀಯುತ ಬಾಲಕೃಷ್ಣ ನಾಯಕ್ ಇವರಿಗೆ ಪಾಲಿಟೆಕ್ನಿಕ್ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಅಯೋಜಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಇಬ್ಬರು ನಮ್ಮ ಸಂಸ್ಥೆಯ ಆಸ್ತಿಯಾಗಿದ್ದಾರೆ, ನಮ್ಮ ಪಾಲಿಟೆಕ್ನಿಕ್ ಇಂದು ರಾಜ್ಯದಲ್ಲೇ ಉತ್ತಮ
ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ
ಪುತ್ತೂರು: ದಿನಾಂಕ 22-12-20 ರಂದು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಪ್ರವೇಶ ಪ್ರಕ್ರಿಯೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಅವರು ತಾಂತ್ರಿಕ ಶಿಕ್ಷಣ ಮಂಡಳಿ ಅಳವಡಿಸಿರುವ ಹೊಸ ಶಿಕ್ಷಣ ನೀತಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಎಸ್ ಇವರು ಕಾಲೇಜಿನಲ್ಲಿ ಲಭ್ಯವಿರುವ ಪಠ್ಯೇತರ ಚಟುವಟಿಕೆಗಳಾದ ಎನ್‌ಸಿಸಿ, ಎನ್‌ಎಸ್‌ಎಸ್, ಹಾಗೂ ಯೋಗ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಇದರ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಮಾಹಿತಿ
ವೆಂಕಟರಮಣ ಹೊಳ್ಳರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಪುತ್ತೂರು: ಪೋಳ್ಯ ಸಮೀಪ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು, ಮಂಗಳೂರು ಗ್ರಾಮ ವಿಕಾಸ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬರಿಗಾಲಿನ ಸಂತ, ದಣಿವಿರದ ಸಂಘಟಕರಾದ ವೆಂಕಟರಮಣ ಹೊಳ್ಳ ಇವರಿಗೆ ವಿವೇಕಾನಂದ ಪಾಲಿಟೆಕ್ನಿಕ್‌ನ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇವರು ಕಳೆದ 6-7 ತಿಂಗಳುಗಳಿಂದ ವಿವೇಕಾನಂದ ಪಾಲಿಟೆಕ್ನಿಕ್ ಪ್ರವರ್ತಿತ ಉದ್ಯೋಗ ನೈಪುಣ್ಯ ಶಿಬಿರದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಉತ್ತಮ ಸಂಘಟಕ ಹಾಗೂ ಸರಳ ವ್ಯಕ್ತಿತ್ವದ ಇವರು ಜನಾನುರಾಗಿಯಾಗಿದ್ದರು. ಈ ಸಂತಾಪ ಸೂಚಕ ಸಭೆಯಲ್ಲಿ ವಿವೇಕಾನಂದ
ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ
ಶಿಕ್ಷಣವೆಂದರೆ ಬರೇ ಉದ್ಯೋಗಕ್ಕಾಗಿ ಇರುವ ವ್ಯವಸ್ಥೆ ಅಲ್ಲ, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸುವ ಕೆಲಸವನ್ನು ಶಿಕ್ಷಣ ಮಾಡಬೇಕು. – ಪ್ರಸನ್ನ ಭಟ್. ಪುತ್ತೂರು: ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವವು ದಿನಾಂಕ 7-12-2020 ರಂದು ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡಿತು. ಪೂಜಾ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಮಾತನಾಡುತ್ತಾ, ಶಿಸ್ತು, ಸಹನೆ ಹಾಗೂ