News and Events
ವಿದ್ಯಾರ್ಥಿಗಳಿಂದ ನೂತನ ಆವಿಷ್ಕಾರಗಳ ಪ್ರದರ್ಶನ
ವಿವೇಕಾನಂದ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಿಂದ ವಿನೂತನ ತಾಂತ್ರಿಕ ಆವಿಷ್ಕಾರಗಳ ಪ್ರೆಯೋಗ ಹಾಗೂ ಪ್ರದರ್ಶನ ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ಈ ಕಾರ್‍ಯಕ್ರಮದಲ್ಲಿ ಸುಮಾರು ೫ಕ್ಕೂ ಮಿಕ್ಕಿ ಹೊಸ ಬಗೆಯ ತಾಂತ್ರಿಕ ಆವಿಷ್ಕಾರಗಳ ಪ್ರದರ್ಶನ ಮಾಡಲಾಯಿತು. ಇವುಗಳಲ್ಲಿ ಪ್ರಮುಖವಾಗಿ- 1. ’ಸೆಲ್ಫ್ ಬ್ಯಾಲೆನ್ಸಿಂಗ್ ರೋಬೋಟ್’: ಹೆಚ್ಚಿನ ರೋಬೋಟ್ ಸರ್ಕ್ಯೂಟ್‌ಗಳು 4 ಚಕ್ರದಿಂದ ಚಲಿಸುತ್ತವೆ. ಆದರೆ ಇದರಲ್ಲಿ ೨ ಚಕ್ರಗಳು ಮಾತ್ರ ಇವೆ. ಇದನ್ನು ಇಂಡಸ್ಟ್ರಿಗಳಲ್ಲಿ ಸಾಮಾಗ್ರಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಲು
ಗ್ರೀಸ್ ಮಂಕಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳ ಸಾಧನೆ
ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 26-05-2022 ರಂದು ನಡೆದ ಗ್ರೀಸ್ ಮಂಕಿ ಎಂಬ ವಿಷಯದಲ್ಲಿ ಆಟೋಮೋಬೈಲ್ ಇಂಡಸ್ಟ್ರಿಯವರು ಒಂದು ಟಿಕ್ನಿಕಲ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದರು. ಕರ್ನಾಟಕದ ವಿವಿಧ ಪಾಲಿಟೆಕ್ನಿಕ್‌ಗಳ ಸುಮಾರು 33 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಸ್ಪರ್ಧೆಯನ್ನು ಮೆಕ್ಯಾನಿಕಲ್ ಹಾಗೂ ಆಟೋಮೋಬೈಲ್ ವಿದ್ಯಾರ್ಥಿಗಳಿಗೆ ಮಾತ್ರ ಆಯೋಜಿಸಲಾಗಿತ್ತು. ಒಂದು ತಂಡದಲ್ಲಿ ಕೇವಲ 2 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿತ್ತು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನ 5 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ದ್ವೀತಿಯ
ನೂತನ ಪ್ರಾಂಶುಪಾಲರಾಗಿ ಶ್ರೀ ಚಂದ್ರಕುಮಾರ್
ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಪ್ರಾಂಶುಪಾಲರಾಗಿದ್ದ ಗೋಪಿನಾಥ ಶೆಟ್ಟಿಯವು ನಿವೃತ್ತಿಗೊಂಡ ಹಿನ್ನಲೆಯಲ್ಲಿ ನೂತನ ಪ್ರಭಾರ ಪ್ರಾಂಶುಪಾಲರಾಗಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಶ್ರೀ ಚಂದ್ರಕುಮಾರ್ ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯ್ಕೆ ಮಾಡಿರುತ್ತದೆ. ಇವರು ತಾರೀಕು 1-6-2022 ರಂದು ಪಾಚಾರ್ಯರಾಗಿ ನಿಯುಕ್ತಿಗೊಂಡರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿಗಳಾದ ಕೃಷ್ಣ ಭಟ್ ಕೊಂಕೋಡಿ, ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರುಗಳಾದ ರವಿ ಮುಂಗ್ಲಿಮನೆ, ನವೀನ ಕೈಕಾರ
ಸೇವಾ ನಿವೃತ್ತಿ
ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1987 ಆಗಸ್ಟ್ 13 ರಂದು ಉಪನ್ಯಾಸಕರಾಗಿ ಸೇರಿ 1990 ನೇ ಜನವರಿಯಲ್ಲಿ ಪ್ರಾಚಾರ್ಯರಾಗಿ ಬಡ್ತಿ ಹೊಂದಿ 32 ವರ್ಷಗಳ ದಕ್ಷ ಆಡಳಿತ ಮತ್ತು ಸುದೀರ್ಘ ಸೇವೆಯನ್ನು ಸಲ್ಲಿಸಿ ವಿವೇಕಾನಂದ ಪಾಲಿಟೆಕ್ನಿಕ್‌ನ್ನು ರಾಜ್ಯದ ಮಾದರಿ ಪಾಲಿಟೆಕ್ನಿಕ್ ಆಗಿ ರೂಪುಗೊಳ್ಳುವಲ್ಲಿ ಶ್ರಮಿಸಿರುವ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿಯವರು ದಿನಾಂಕ 31-5-2022 ರಂದು ತಮ್ಮ ವೃತ್ತಿ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. ಇವರ ಮುಂದಿನ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು
ಉದ್ಯೋಗ ನೈಪುಣ್ಯ ತರಬೇತಿ
ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಅಮೃತ ಸಿಂಚನ ರೈತ ಸೇವಾ ಒಕ್ಕೂಟ, ಇಡ್ಕಿದು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ತಾರೀಕು 26-5-2022 ರಿಂದ 31-5-2022 ರ ವರೆಗೆ ಆರು ದಿನಗಳ ಕಾಲ ನಡೆಯಿತು. ಕಾರ್‍ಯಕ್ರಮದ ಉದ್ಘಾಟಣೆಯನ್ನು ಎಸ್.ಆರ್ ರಂಗಮೂರ್ತಿ, ಮಾಜಿ ಸದಸ್ಯರು ಕರ್ನಾಟಕ ಲೋಕ ಸೇವಾ ಆಯೋಗ ಬೆಂಗಳೂರು ಇವರು ನಡೆಸಿಕೊಟ್ಟರು. ಈ ಕಾರ್‍ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕರಾದ ಮಹಾದೇವ ಶಾಸ್ತ್ರಿ
ರೆಡ್‌ಕ್ರಾಸ್ ಸಂಸ್ಥೆಯ ತರಬೇತಿ ಶಿಬಿರ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕದ ವತಿಯಿಂದ ಮತ್ತು ವಾರಣಾಸಿ ಡೆವಲಪ್‌ಮೆಂಟ್ ಎಂಡ್ ರಿಸರ್ಚ್ ಪೌಂಡೇಶನ್ ಸಹಯೋಗದಲ್ಲಿ ವಿಶ್ವ ರೆಡ್‌ಕ್ರಾಸ್ ದಿನದ ಪ್ರಯುಕ್ತ ಯುವ ರೆಡ್‌ಕ್ರಾಸ್ ಸದಸ್ಯರಿಗೆ ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಗಾರ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಗಿರೀಶ್ ನಂದನ್ ಸಹಾಯಕ ಕಮಿಷನರ್ ಪುತ್ತೂರು, ದೀಪ ಬೆಳಗಿಸುವುದರ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸುತ್ತಾ, ರೆಡ್‌ಕ್ರಾಸ್ ಸಂಸ್ಥೆ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾಲೇಜಿನಲ್ಲಿ ಕಲಿಯುವ ವಿಷಯಗಳಿಗಿಂತ ಇಂತಹ ಮಾಹಿತಿ
ಸದ್ವಿಚಾರಧಾರಾ ಸರಣಿಯ ಎರಡನೆ ಕಾರ್ಯಕ್ರಮ
ಕರ್ಮಣ್ಯೇವಾಧಿಕಾರದಸ್ಥೇ ಮಾಪಲೇಚು ಕದಾಚನಾ – ವಿದ್ಯೆಯನ್ನು ಪಡೆಯಲು ಚಿಂತನಾಶೀಲ ಮನಸ್ಸು ಹಾಗೂ ಸೇವಾ ಮನೋಭಾವ ಇರಬೇಕು. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಶ್ರದ್ಧೆಯಿಂದ ಕೆಲಸ ಮಾಡಬೇಕು – ಸುಬ್ರಾಯ ನಂದೋಡಿ. ಪುತ್ತೂರು: ರಾಷ್ಟ್ರೀಯತೆಯನ್ನು ಮೈಗೂಡಿಸಿ ಸ್ವಾವಲಂಬಿ ಹಾಗೂ ಸ್ವಾಭಿಮಾನಿ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಹೊಂಗನಸು ಹೊತ್ತು ವಿವೇಕಾನಂದ ಪಾಲಿಟೆಕ್ನಿಕ್ ಆಯೋಜಿಸಿದ ಆದ್ಯಾತ್ಮಿಕ ಉಪನ್ಯಾಸ ಮಾಲಿಕೆಯ ಸರಣಿ ಕಾರ್ಯಕ್ರಮದ ಎರಡನೇ ಕಾರ್ಯಕ್ರಮವನ್ನು ಶ್ರೀಯುತ ಸುಬ್ರಾಯ ನಂದೋಡಿಯವರು ನಡೆಸಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ, ಸೇವಾ ಪ್ರಮುಖರಾದ ಶ್ರೀಯುತ ಸುಬ್ರಾಯ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಪುತ್ತೂರು: 73 ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಧ್ವಜಾರೋಹಣಗೈದು ಮಾತನಾಡುತ್ತಾ, 1947 ರ ಸ್ವಾತಂತ್ರ್ಯಾನಂತರವೂ ಭಾರತದಲ್ಲಿ ಬ್ರಿಟಿಷ್ ಆಡಳಿತ ಮುಂದುವರಿದಿತ್ತು. ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿದಂತಹ ಸಂವಿಧಾನ 1950 ಜನವರಿ 26 ರಂದು ಜ್ಯಾರಿಗೆ ಬಂತು. ಅದರಂತೆ ಮುಂದೆ ಪ್ರಜಾತಂತ್ರ ರೀತ್ಯಾ ಕಾನೂನು ದೇಶದಲ್ಲಿ ಜ್ಯಾರಿಗೆ ಬಂತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲೇ ಸ್ವಾತಂತ್ರ್ಯ ಪಡಕೊಂಡ ಹಲವಾರು
ಸದ್ವಿಚಾರಧಾರಾ ಸರಣಿಯ ಮೊದಲ ಕಾರ್ಯಕ್ರಮ
ವಿದ್ಯಾರ್ಥಿಗಳು ಎಡರು ತೊಡರುಗಳನ್ನು ಲೆಕ್ಕಿಸದೆ ಏಕಾಗ್ರತೆಯಿಂದ ಶಿಕ್ಷಣ ಪಡೆದು ಸ್ಪಚ್ಛ ಸಂಪನ್ನ ಜೀವನದ ಗುರಿ ತಲುಪಿ- ಕೃಷ್ಣಪ್ರಸಾದ್ ಕಾಯರ್‌ಕಟ್ಟೆ. ಪುತ್ತೂರು: ರಾಷ್ಟ್ರೀಯತೆಯನ್ನು ಮೈಗೂಡಿಸಿ, ಸ್ವಾವಲಂಬೀ ಹಾಗೂ ಸ್ವಾಭಿಮಾನಿ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಹೊಂಗನಸು ಹೊತ್ತು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ನೈತಿಕ, ಬೌದ್ಧಿಕ, ಮತ್ತು ಆಧ್ಯಾತ್ಮಿಕ ಉಪನ್ಯಾಸಗಳ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಸರಣಿಯ ಮೊದಲ ಕಾರ್ಯಕ್ರಮವು ಇತ್ತೀಚೆಗೆ ಪಾಲಿಟೆಕ್ನಿಕ್‌ನಲ್ಲಿ ಜರಗಿತು. ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಇವರು ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡುತ್ತಾ, ಹಲವು ದೃಷ್ಠಾಂತಗಳೊಂದಿಗೆ ವಿದ್ಯಾರ್ಥಿಗಳ
ಪ್ರೇರಣಾ ಶಿಬಿರ
ಶಿಕ್ಷಕನಿಗೆ ಸಂವೇದನೆಗಳು ಬಹಳ ಮುಖ್ಯ – ಶ್ರೀ ಕೊಂಕೋಡಿ ಕೃಷ್ಣ ಭಟ್ ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ಒಂದು ದಿನದ ಪುನಶ್ಚೇತನಾ ಶಿಬಿರವನ್ನು ಆಡಳಿತ ಮಂಡಳಿ ವತಿಯಿಂದ ಆಯೋಜಿಸಲಾಗಿತ್ತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೆ.ಎಂ. ಕೃಷ್ಣ ಭಟ್ ಕೊಂಕೋಡಿಯವರು ಪುನಶ್ಚೇತನಾ ಶಿಬಿರದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ಒಬ್ಬ ಶಿಕ್ಷಕ, ತನ್ನ ವೃತ್ತಿ ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಆ ಸಂಸ್ಥೆಯು ಪ್ರಬಲವಾಗಿ ಬೆಳೆಯುತ್ತದೆ ಎಂದರು. ಒಬ್ಬ ಉತ್ತಮ ಶಿಕ್ಷಕರ ಕಾರ್‍ಯ,