ವಿವೇಕಾನಂದ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಿಂದ ವಿನೂತನ ತಾಂತ್ರಿಕ ಆವಿಷ್ಕಾರಗಳ ಪ್ರೆಯೋಗ ಹಾಗೂ ಪ್ರದರ್ಶನ ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ಈ ಕಾರ್‍ಯಕ್ರಮದಲ್ಲಿ ಸುಮಾರು ೫ಕ್ಕೂ ಮಿಕ್ಕಿ ಹೊಸ ಬಗೆಯ ತಾಂತ್ರಿಕ ಆವಿಷ್ಕಾರಗಳ ಪ್ರದರ್ಶನ ಮಾಡಲಾಯಿತು. ಇವುಗಳಲ್ಲಿ ಪ್ರಮುಖವಾಗಿ-
1. ’ಸೆಲ್ಫ್ ಬ್ಯಾಲೆನ್ಸಿಂಗ್ ರೋಬೋಟ್’:
ಹೆಚ್ಚಿನ ರೋಬೋಟ್ ಸರ್ಕ್ಯೂಟ್‌ಗಳು 4 ಚಕ್ರದಿಂದ ಚಲಿಸುತ್ತವೆ. ಆದರೆ ಇದರಲ್ಲಿ ೨ ಚಕ್ರಗಳು ಮಾತ್ರ ಇವೆ. ಇದನ್ನು ಇಂಡಸ್ಟ್ರಿಗಳಲ್ಲಿ ಸಾಮಾಗ್ರಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಲು ಉಪಯೋಗಿಸಬಹುದು. ವಸ್ತುಗಳು ಕೆಳಕ್ಕೆ ಬೀಳದಂತೆ ಚಲಿಸುವಾಗ ಭಾರವನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತದೆ. ಇದನ್ನು ಸಮತಟ್ಟಲ್ಲದ ಪ್ರದೇಶಗಳಲ್ಲೂ ಬಳಸಬಹುದು. ಸೆನ್ಸರ್‍ಸ್‌ಗಳನ್ನು ಬಳಸಿ ಮಾಡಿದ ಈ ಸಾಧನವನ್ನು ಪ್ರಯಾಣಕ್ಕೂ ಬಳಸಬಹುದಾಗಿದೆ. ವಸ್ತುಗಳನ್ನು ಸಾಗಿಸುವಾಗ ಭಾರವನ್ನು ಬ್ಯಾಲೆನ್ಸ್ ಮಾಡಿಕೊಳ್ಳಲು ಅದರ ಸ್ಪೀಡ್ ಹಾಗೂ ದಿಕ್ಕಿನ ಚಲನೆಯನ್ನು ಹೊಂದಿಸಿಕೊಳ್ಳಲಾಗುತ್ತದೆ. ಇದನ್ನು ಇಂಡಸ್ಟ್ರಿಗಳಲ್ಲಿ, ಮಿಲಿಟರಿ ಕ್ಯಾಂಪ್‌ಗಳಲ್ಲಿ ಹಾಗೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಲು ಉಪಯೋಗಸಿಕೊಳ್ಳಬಹುದು.
ವಿದ್ಯಾರ್ಥಿಗಳು: ಚೇತನ್ ಕುಮಾರ್, ಹರ್ಷಿತ್, ರಚನ್, ಪದ್ಮಪ್ರಸಾದ್ ಹಾಗೂ ಕಾರ್ತಿಕ್ ಬಿ.ವಿ.
2. ’ಬಯೋನಿಕ್ ಆರ್ಮ್’:
ಇದರಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಬೆರಳುಗಳ ಚಲನೆಯನ್ನು ಮಾಡಲಾಗುತ್ತದೆ. ನಮ್ಮ ಬೆರಳುಗಳ ಚಲನೆಯನ್ನು ಕ್ಯಾಮರಾದಲ್ಲಿ ಚಿತ್ರಿಕರಿಸಿ ಅದರಂತೆ ಚಲನೆಯನ್ನು ಮಾಡಲು ಇದು ಉಪಯುಕ್ತವಾಗಿದೆ. ಇದನ್ನು ಕೆಮಿಕಲ್, ಮೆಡಿಕಲ್ ಇಂಡಸ್ಟ್ರಿಗಳಲ್ಲಿ ವ್ಯಕ್ತಿಗಳನ್ನು ನಿಯೋಜಿಸುವ ಬದಲು ಬಳಸಬಹುದು. ಇದರ ಉಪಯೋಗವನ್ನು ಅಂಗವಿಕಲ ಕ್ಷೇತ್ರದಲ್ಲೂ ಬಳಕೆ ಮಾಡಹುದು. ಇದರಲ್ಲಿ ಸರ್ವೋಮೋಟಾರ್ ಬಳಸಿ ಬೆರಳುಗಳ ಚಲನೆಯನ್ನು ಮಾಡಲಾಗಿದೆ.
ವಿದ್ಯಾರ್ಥಿಗಳು: ಸಾತ್ವಿಕ್ ರೈ, ತ್ರಿಶೂಲ್ ಕೆ. ಪಿ., ದ್ವಿತಮ್, ಧನುಶ್, ಲವೀಶ್.
3. ಸ್ವಯಂ ಚಾಲಿತ ತ್ಯಾಜ್ಯ ವಿಭಜಕ:
ಈ ಪ್ರಾಜೆಕ್ಟ್‌ನ್ನು ದೈನಂದಿನ ಬಳಕೆಯ ಅನುಪಯುಕ್ತ ವಸ್ತುಗಳನ್ನು ವಿಂಗಡನೆ ಮಾಡಲು ಬಳಸಿಕೊಳ್ಳಬಹುದು. ಇದರಲ್ಲಿ ೩ ರೀತಿಯ ತ್ಯಾಜ್ಯಗಳನ್ನು ವಿಂಗಡನೆ ಮಾಡಲಾಗುತ್ತದೆ. ಒಣಕಸ, ಹಸಿಕಸ ಹಾಗೂ ಕಬ್ಬಿಣದ ಚೂರುಗಳು ಇತ್ಯಾದಿ ಎಲ್ಲಾ ರೀತಿಯ ಕಸಗಳನ್ನು ಕನ್‌ವೇಯರ್‌ನಲ್ಲಿ ಕಳಿಸಿದಾಗ ಅದು ಎಲ್ಲವನ್ನೂ ಪ್ರತ್ಯೇಕವಾಗಿ ವಿಂಗಡನೆ ಮಾಡಿ ಆಯಾ ಕಸದ ಬುಟ್ಟಿಯಲ್ಲಿ ಕಸವನ್ನು ಶೇಖರಣೆ ಮಾಡುತ್ತದೆ. ಇದನ್ನು ಸ್ವಚ್ಫ ಭಾರತವನ್ನು ನಿರ್ಮಾಣ ಮಾಡುವ ಸದುದ್ದೇಶದಿಂದ ಆವಿಷ್ಕರಿಸಲಾಗಿದೆ.
ವಿದ್ಯಾರ್ಥಿಗಳು: ದೀಕ್ಷಿತ್ ಕುಮಾರ್, ಲಿಶಾ ಡಿ. ಎಸ್., ಅಭಿಷೇಕ್ ಪಿ.ಬಿ., ಅನೀಶ್ ಶೆಣೈ.
4. ’ಆರ್‌ಎಫ್‌ಐಡಿ ಬೇಸ್‌ಡ್ ಬಸ್ ಬಿಲ್ಲಿಂಗ್ ಸಿಸ್ಟಂ’:
ಇದನ್ನು ನಿರ್ವಾಹಕ ರಹಿತ ಪ್ರಯಾಣದಲ್ಲಿ ಬಳಸಬಹುದಾಗಿದೆ. ಪ್ರಯಾಣಿಕರು ಖಈIಆ ಕಾರ್ಡ್‌ನ್ನು ಹೊಂದಿದಲ್ಲಿ ನಿರ್ವಾಹಕ ರಹಿತ ವಾಹನಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಬಹುದು. ನಿಗದಿ ಪಡಿಸಿದ ಪ್ರಯಾಣದ ದರವನ್ನು ಪ್ರಯಾಣಿಕನು ಹತ್ತುವಾಗ ಮತ್ತು ಇಳಿಯುವಾಗ ಕಾರ್ಡ್‌ನಲ್ಲಿ ಸ್ಕಾನ್ ಮಾಡಿಕೊಂಡು ಅಟೋಮ್ಯಾಟಿಕ್ ಆಗಿ ದರವನ್ನು ಕಡಿತಗೊಳ್ಳುವಂತೆ ಮಾಡಲಾಗಿದೆ. ಇದರಿಂದ ಸಮಯ ಹಾಗೂ ಹಣದ ದುರ್ಬಳಕೆಯನ್ನು ಕಡಿತಗೊಳಿಸಬಹುದು. ಕಾರ್ಡ್‌ಗಳಲ್ಲಿ ರೀಚಾರ್ಜ ಮಾಡಿಕೊಡು ಪುನ: ಅದರ ಉಪಯೋಗವನ್ನು ಮಾಡಿಕೊಳ್ಳಲಾಗುತ್ತದೆ. ಇದರಿಂದ ಕ್ಯಾಶ್‌ಲೆಸ್ ಪ್ರಯಾಣ, ಪೇಪರ್ ಬಳಕೆ, ನಿರ್ವಾಹಕ ರಹಿತ ಪ್ರಯಾಣ ಮುಂತಾದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳು: ಜಿತೇಶ್, ಅಭಿಷೇಕ್, ಶ್ರೇಯಸ್ ಕೆ.ವಿ., ನಿತೇಶ್.
5. ’ಸ್ಮಾರ್ಟ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್’:
ಈ ಆವಿಷ್ಕಾರದಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ಪೀಳಿಗೆಯಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಪರಿಸರ ಮಾಲಿನ್ಯ ರಹಿತ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ಈಗ ಬೇಕಾದಷ್ಟು ಪೆಟ್ರೋಲ್ ಅಥವಾ ಡೀಸೆಲ್‌ನ್ನು ವಾಹನಗಳಿಗೆ ತುಂಬಿಸಿ ಪ್ರಯಾಣಿಸುವಂತೆ, ಇಲೆಕ್ಟ್ರಿಕ್ ವಾಹನಗಳಿಗೆ ಯುನಿಟ್ ಚಾರ್ಜ್‌ಗಳ ರೂಪದಲ್ಲಿ ಚಾರ್ಜ್ ಮಾಡಿಕೊಂಡು ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ಈ ತರಹದ ಚಾರ್ಜಿಂಗ್ ಸ್ಟೇಷನ್ಸ್‌ಗಳ ಬೇಡಿಕೆ ಬಹಳವಾಗಿರುತ್ತದೆ. ಇಂತಹ ಸ್ಟೇಷನ್‌ಗಳನ್ನು ತೆರೆದು ನಮಗೆ ಬೇಕಾದಷ್ಟು ಯುನಿಟ್‌ಗಳನ್ನು ಚಾರ್ಜ್ ಮಾಡಿಕೊಡಲು ಈ ಘಟಕದಲ್ಲಿ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳು: ಅಭಯ್ ವೈ., ಬಿ. ಮಹೇಶ್, ವಿನುತ್ ಪಿ, ಶ್ರೇಯಸ್ ನಾಯ್ಕ್, ಲಕ್ಷೀನರಸಿಂಹ.