News and Events
ಪೌರ ರಕ್ಷಣಾ ದಳದ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣಾ ತರಬೇತಿ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೌರ ರಕ್ಷಣಾ ಪಡೆ ಪುತ್ತೂರು ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಸಹಯೋಗದೊಂದಿಗೆ ಇಲ್ಲಿನ ಪೌರ ರಕ್ಷಣಾ ದಳದ ಸದಸ್ಯರಿಗೆ ವಿಪತ್ತು ನಿರ್ವಹಣಾ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗೋಪಾಲ್ ಮೀನಾ, ಕಮಾಂಡೆಂಟ್ NDRF ಗುಂಟೂರು ಇವರು “ಯಾವುದೇ ಪ್ರಕೃತಿ ವಿಕೋಪಗಳು ನಮಗೆ ಮುನ್ಸೂಚನೆ ಕೊಟ್ಟು ಬರುವುದಿಲ್ಲ ಹಾಗೂ ಇವುಗಳನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲ, ಆದರೆ ನಮಗೆ ಸರಿಯಾದ ಮಾಹಿತಿ
ವಿಶ್ವ ಯೋಗ ದಿನಾಚರಣೆ 2020
ಆತ್ಮ ಮತ್ತು ಪರಮಾತ್ಮನನ್ನು ಒಂದುಗೂಡಿಸುವುದೇ ಯೋಗ – ಪ್ರಸನ್ನ ಎನ್. ಭಟ್ ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪುತ್ತೂರು ನಗರ ಕಾರ್ಯವಾಹ ಶ್ರೀ ಚಂದ್ರಶೇಖರ್ ನಡೆಸಿಕೊಟ್ಟರು. ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಯೋಗದಿಂದ ಆರೋಗ್ಯ, ಪ್ರಧಾನಿ ಮೋದೀಜಿಯವರ ಆಶಯದಂತೆ ಯೋಗವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಮತ್ತು ಸದೃಢ ಭಾರತವನ್ನು ನಿರ್ಮಿಸೋಣ ಎಂದರು.
ಪೌರ ರಕ್ಷಣಾ ದಳದ ರಚನೆ ಹಾಗೂ ತರಬೇತಿ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಡಿಪೆನ್ಸ್ ಪೋರ್ಸ್, ಪುತ್ತೂರು ಘಟಕ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವಜನರ ಒಂದು ಪೌರ ರಕ್ಷಣಾ ದಳವನ್ನು ರಚಿಸಿ ಅವರಿಗೆ ಪ್ರಥಮ ಚಿಕಿತ್ಸೆ, ಆಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣಾ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ದಿನಕರ ಶೆಟ್ಟಿ, ಉಪ ಪೋಲಿಸ್ ಅಧೀಕ್ಷಕರು, ಪುತ್ತೂರು ಇವರು 2009 ರಲ್ಲಿ ಅತಿವೃಷ್ಠಿ ಸಮಯದಲ್ಲಿ ಮಂತ್ರಾಲಯದ ಸಮೀಪ ತುಂಗಭದ್ರಾ ಮತ್ತು ಅಘನೀ ನದಿ ತೀರದ ಹಳ್ಳಿಯ ಒಂದು ಶಾಲೆಯಲ್ಲಿ ಸಿಲುಕಿಕೊಂಡಿದ್ದ ಶಿಕ್ಷಕಿಯರನ್ನು ಕರೆತರಲು
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕಾರ್ಯಗಾರ
ಪುತ್ತೂರು: ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರದ ವತಿಯಿಂದ ತೃತೀಯ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ಎದುರಿಸಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು. ಈ ಕಾರ್ಯಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರುವ ಪ್ರಶ್ನೆಗಳಿಗೆ ಹೇಗೆ ಸುಲಭವಾಗಿ ಉತ್ತರಿಸಬಹುದು ಹಾಗೂ ಉದ್ಯೋಗಕ್ಕೆ ಸೇರುವ ಮುನ್ನ ತಮ್ಮ ಜ್ಞಾನವನ್ನು ವೃದ್ಧಿಸುವುದು ಹೇಗೆ ಎಂಬುದರ ಬಗ್ಗೆ ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಜೆ.ಸಿ.ಐ. ತರಬೇತುದಾರರಾದ ಶ್ರೀ ಸತೀಶ್ ಭಟ್, ಬಿಳಿನೆಲೆ ಅವರು
ಭಾನ್ಕುಳಿ ಮಠದ ಗೋಶಾಲೆಗೆ ಗೋವುಗಳ ಮೇಲೆತ್ತುವ ನೂತನ ಸಾಧನ ’ಜೀವಾಧಾರ’ದ ಸಮರ್ಪಣೆ
ಪುತ್ತೂರು: ಕುಸಿದು ಬಿದ್ದ ದನ, ಎತ್ತುಗಳನ್ನು ಆದರಿಸಿ ನಿಲ್ಲಿಸಿ ಚಿಕಿತ್ಸೆ ಮಾಡಲು ಅನುಕೂಲ ಮಾಡುವ ಯಂತ್ರವನ್ನು ಅಭಿವೃದ್ಧಿ ಪಡಿಸಿ ಭಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ನಡೆದ ಸರ್ವ ಸೇವಕ ಸಮಾವೇಶದಲ್ಲಿ ಗೋಶಾಲೆಗೆ ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಸಮರ್ಪಿಸಲಾಯಿತು. ಶ್ರೀರಾಮಚಂದ್ರಾಪುರಮಠದ ಜಗದ್ಗರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಕಾಲೇಜಿನ ತಂಡಕ್ಕೆ ಶಾಲು ಟಂಕೆ ಮಂತ್ರಾಕ್ಷತೆ ನೀಡಿ, ಗೋ ಲೋಕಕ್ಕೆ ನೀಡಿದ ಮಹಾ ಪುಣ್ಯಪ್ರದ ಕೆಲಸ ಎಂದು ಭಾವನಾತ್ಮಕವಾಗಿ ನುಡಿದು ಈ ಸಾಧನಕ್ಕೆ ‘ಜೀವಾಧಾರ’ ಎಂದು ನಾಮಕರಣ ಮಾಡಿದರು. ವಿವೇಕಾನಂದ
ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಮಾಹಿತಿ ಕಾರ್ಯಾಗಾರ
ಪುತ್ತೂರು: ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಬಗ್ಗೆ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಜನೌಷಧಿ ಕರ್ನಾಟಕ ಪ್ರಾಂತೀಯ ವಿಭಾಗಾಧಿಕಾರಿಯಾದ ಡಾ| ಅನಿಲ ದೀಪಕ್ ರೈ ನಡೆಸಿಕೊಟ್ಟರು. ಮುಖ್ಯವಾಗಿ ಮಾರ್ಚ್ 01 ರಿಂದ ಮಾರ್ಚ್ 07 ರವರೆಗೆ ಒಂದು ವಾರವನ್ನು ಜನೌಷಧಿ ವಾರವಾಗಿ ದೇಶಾದ್ಯಂತ ಆಚರಿಸಲಾಗುತ್ತಿದ್ದು ಈ ಬಗ್ಗೆ ಯುವ ಜನರಲ್ಲಿ ಅರಿವನ್ನು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಾ| ಅನಿಲ ದೀಪಕ್ ರೈ ಮಾತನಾಡುತ್ತಾ, ಜನೌಷಧಿಯ ಔಷಧಾಲಯಗಳಲ್ಲಿ ದೊರಕುವ ಎಲ್ಲಾ ವಿಧವಾದ ಔಷಧಿಗಳು ಉತ್ತಮ ಗುಣಮಟ್ಟದಾಗಿದ್ದು
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ’ಟಫೇ – ಇ.ಪಿ.ಡಿ. ಲಿಮಿಟೆಡ್’ ಸಂಸ್ಥೆಯು ಭೇಟಿ ನೀಡಿ ಪೂಲ್ ಕ್ಯಾಂಪಸ್ ನೇಮಕಾತಿ ನಡೆಸಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್‌ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಪಿ.ಎ. ಪಾಲಿಟೆಕ್ನಿಕ್ ಮಂಗಳೂರು, ಪ್ರಸನ್ನ ಪಾಲಿಟೆಕ್ನಿಕ್ ಬೆಳ್ತಂಗಡಿ, ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ ಮೊದಲಾದ ಪಾಲಿಟೆಕ್ನಿಕ್‌ಗಳಿಂದ ಬಂದ ಇಲೆಕ್ಟ್ರೋನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಅರ್ಹ ೨೨೫ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಟಫೇ ಸಂಸ್ಥೆಯ
ವಿದ್ಯಾರ್ಥಿಗಳಿಗೆ ಭಾರತೀಯ ಜೀವ ವಿಮಾ ನಿಗಮದ ಬಗ್ಗೆ ಮಾಹಿತಿ
ಪುತ್ತೂರು: ಭಾರತೀಯ ಜೀವ ವಿಮಾ ನಿಗಮ, ಪುತ್ತೂರು ಶಾಖೆ ಇದರ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭಾರತೀಯ ಜೀವ ವಿಮಾ ನಿಗಮ, ಪುತ್ತೂರು ಶಾಖೆ ಇದರ ವ್ಯವಸ್ಥಾಪಕರಾದ ಶ್ರೀ ಚಂದ್ರಶೇಖರ್ ಹಾಗೂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಕೆ. ಪರಮೇಶ್ವರಿ ಇವರು ಭಾರತೀಯ ಜೀವ ವಿಮಾ ನಿಗಮದಲ್ಲಿರುವ ವಿವಿಧ ಉದ್ಯೋಗಾವಕಾಶಗಳು ಹಾಗೂ ಎಲ್.ಐ.ಸಿ ಪ್ರತಿನಿಧಿಗಳಿಗೆ ಇರುವ ಪ್ರಯೋಜನಗಳು ಹಾಗೂ ಅನುಕೂಲತೆಗಳು ಮತ್ತು ಭಾರತೀಯ ಜೀವ ವಿಮಾ ನಿಗಮದಲ್ಲಿ ವಿವಿಧ ಉದ್ಯೋಗ ಪಡೆಯಲು ಬೇಕಾಗುವ ಅರ್ಹತೆಗಳ ಬಗ್ಗೆ
ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ
ಪುತ್ತೂರು: ವಿದ್ಯಾರ್ಥಿಗಳು ಸರಕಾರಿ ಪಾಲಿಟೆಕ್ನಿಕ್, ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 43ನೇ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಎರಡನೇ ಬಾರಿ ಅಮೋಘ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದಲ್ಲಿ ತೃತೀಯ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾದ ಲೋಹಿತ್ 100 ಮೀ ಓಟದ ಸ್ಪರ್ಧೆ, 200 ಮೀ ಓಟದ ಸ್ಪರ್ಧೆ ಹಾಗೂ 4×100 ಮೀ ರಿಲೇಯಲ್ಲಿ ಚಿನ್ನದ ಪದಕ ಮತ್ತು 4×400 ಮೀ ರಿಲೇಯಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ
ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ
ಸದೃಡ ಸಮಾಜಕ್ಕಾಗಿ ಆರೋಗ್ಯವಂತ ಜೀವನ – ಡಾ| ರಾಮಚಂದ್ರ ಭಟ್ ಪುತ್ತೂರು: ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಆಯ್ದ ಸ್ವಯಂಸೇವಕರಿಗೆ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಎಂಬ ವಿಷಯದಲ್ಲಿ ತರಬೇತಿ ಶಿಬಿರವು ವಿವೇಕಾನಂದ ಪಾಲಿಟೆಕ್ನಿಕ್‌ನ ಎ.ವಿ.ಹಾಲ್‌ನಲ್ಲಿ ನಡೆಯಿತು. ಈ ಕಾರ್ಯಕ್ರವವನ್ನು ಸೈಂಟ್ ಜಾನ್ ಅಂಬ್ಯುಲೆನ್ಸ್ ಅಸೋಸಿಯೆಷನ್ ನ್ಯೂ ಡೆಲ್ಲಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಇದರ ಹಿರಿಯ ತರಬೇತುದಾರರಾದ ಡಾ| ರಾಮಚಂದ್ರ ಭಟ್ ನೆರವೇರಿಸಿ ಕೊಟ್ಟರು. ಇವರು ಮಾತನಾಡುತ್ತಾ ಸದೃಡ ಸಮಾಜವನ್ನು ನಿರ್ಮಾಣ ಮಾಡುವಂತಹ ಕಾಳಜಿ ಪ್ರತಿಯೊಬ್ಬ