ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ’ಖಿಂಈಇ – ಇPಆ’ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್‌ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ, ಬ್ಯಾರಿಸ್ ಪಾಲಿಟೆಕ್ನಿಕ್ ಮಂಗಳೂರು ಮೊದಲಾದ ಪಾಲಿಟೆಕ್ನಿಕ್‌ಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 125 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
’ಟಫೇ – ಇಪಿಡಿ’ಯ ಹೆಚ್ ಆರ್ ಅಡ್ಮಿನ್ ವಿಭಾಗದ ಡೆಪ್ಯೂಟಿ ಮೆನೇಜರ್, ಶ್ರೀಯುತ ಸದಾಶಿವ್‌ರವರು ಟಫೇ ಕಂಪೆನಿಯ ಬಗ್ಗೆ ಹಾಗೂ ಉದ್ಯೋಗಿಗಳಿಗೆ ನೀಡಲಾಗುವ ವಿವಿಧ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಂತರ ನೇಮಕಾತಿ ಸಂದರ್ಶನ ನಡೆಸಿದರು. ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಸಂಸ್ಥೆಯ ಉದ್ಯೋಗ ಮಾಹಿತಿ ಹಾಗೂ ತರಬೇತಿ ವಿಭಾಗದ ನಿಯೋಜನ ಅಧಿಕಾರಿಗಳಾದ ಶ್ರೀಮತಿ ಉಷಾಕಿರಣ್ ಮತ್ತು ಶ್ರೀ ಕಿರಣ್‌ಪಾಲ್ ಸಂಯೋಜಿಸಿದರು. ಕಾಲೇಜಿನ ಉಪನ್ಯಾಸಕರುಗಳು ಸಹಕರಿಸಿದರು.