• 08251 231197
  • vptputtur@yahoo.co.in

ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರ

ಪುತ್ತೂರು: ಯಾವಾಗಲೂ ರಸ್ತೆ ನಿಯಮಗಳನ್ನು ಪಾಲಿಸಿ, ಎಲ್ಲಿಯಾದರೂ ರಸ್ತೆ ಅವಘಡ ಕಂಡು ಬಂದರೆ ತಕ್ಷಣ ಸ್ಪಂದಿಸಿ, ತುರ್ತು ಚಿಕಿತ್ಸೆ ನೀಡಲು ಸಹಕರಿಸಿ, ದಯವಿಟ್ಟು ಮೊಬೈಲ್ ನಲ್ಲಿ ಪೋಟೋ ತೆಗೆಯಬೇಡಿ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಆನಂದ ಗೌಡ ಅವರು ವಿವೇಕಾನಂದ ಪಾಲಿಟೆಕ್ನಿಕ್‌ನ ತೃತೀಯ ಅಟೋಮೋಬೈಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ವಾಹನ ಚಾಲನೆಯ ಹೊಸ ಕಾಯಿದೆಗಳು, ನಿಯಮಗಳು, ವಾಹನ ನೋಂದಣಿ, ವಾಹನ ಪರವಾನಿಗೆ ಹಾಗೂ ಅದರ ನವೀಕರಣ, ರಸ್ತೆ ಸುರಕ್ಷತೆ, ವೇಗದ ಮಿತಿ, ಸಿಗ್ನಲ್‌ಗಳು, ವಾಹನ ಚಲಾವಣೆ ಸಮಯದಲ್ಲಿ ನಾವು ಮಾಡಬೇಕಾದ ಜಾಗರೂಕತೆ, ಮುಂಜಾಗ್ರತೆಗಳ ಬಗ್ಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ತಾವು ಕಂಡ ಅನುಭವಗಳೊಂದಿಗೆ ವಿವರವಾದ ಮಾಹಿತಿ ನೀಡಿದರು.

ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ಕಾಂiiಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್, ಅಟೋಮೋಬೈಲ್ ಮತ್ತು ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥರು, ಉಪನ್ಯಾಸಕರುಗಳು ಹಾಗೂ ತೃತೀಯ ಅಟೋಮೋಬೈಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಟೋಮೋಬೈಲ್ ವಿಭಾಗದ ಉಪನ್ಯಾಸಕರಾದ ವಿನ್ಯಾಸ್ ಪಿ.ಕೆ. ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಪ್ರಶಾಂತ್ ಕೆ. ಧನ್ಯವಾದ ಸಮರ್ಪಿಸಿದರು.

Highslide for Wordpress Plugin