News and Events
ಓಣಂ ಆಚರಣೆ
ಕೇರಳದ ಜನಪ್ರಿಯ ಹಬ್ಬ ಓಣಂನ್ನು 10-09-2014 ರಂದು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿ, ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಓಣಂ ಹಬ್ಬವು ಹೊಸ ತಿರುವು ತರಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ., ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಶ್ರೀ ಚಂದ್ರಕುಮಾರ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಶಿಕ್ಷಕ – ರಕ್ಷಕ ಸಮಾವೇಶ
ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ 2014-15 ರ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಕೇಶವ ಸಂಕಲ್ಪದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯರಾದ ಸ್ಥಾಪಕ ಸಂಚಾಲಕ ಉರಿಮಜಲು ಶ್ರೀ ಕೆ. ರಾಮ ಭಟ್ ಇವರು ದೀಪ ಪ್ರಜ್ವಲಿಸುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ನುಡಿಮುತ್ತನ್ನು ಹೇಳುತ್ತಾ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಉತ್ತಮ ಮೌಲ್ಯಗಳನ್ನು ಕಲಿಯುತ್ತಾ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಲಿ ಎಂದು ಹಾರೈಸಿದರು. ಸಮಾರಂಭದ
ಪಾಲಿಟೆಕ್ನಿಕ್‌ನ ವಾರ್ಷಿಕೋತ್ಸವ
ಪುತ್ತೂರು: ಯಶಸ್ವಿಗೆ ಕಠಿಣ ದುಡಿಮೆ ಅನಿವಾರ್ಯ, ನೀವು ದೃಢವಾಗಿರುವಾಗ ಅಶಕ್ತರಿಗೆ ಸಹಾಯ ಮಾಡಿ ಎಂದು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಘಟಕದ ಡಿ.ಜಿ.ಎಂ. ಶ್ರೀ ಹೆಚ್. ಎಸ್. ಕೃಷ್ಣಕುಮಾರ್ ಇವರು ವಿದ್ಯಾರ್ಥಿಗಳಿಗೆ ಕರೆನೀಡಿದರು. ಅವರು ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ದಿನಾಂಕ 29-3-2014 ರಂದು ಜರಗಿದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಶ್ರೀ ಎಸ್.ಆರ್.ರಂಗಮೂರ್ತಿ ಇವರು ಸಮಾರಂಭದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಒಳ್ಳೆಯ ಮನಸ್ಸಿನಿಂದ ಉತ್ಕೃಷ್ಟ ಕೆಲಸ ಮಾಡಿದರೆ ಉನ್ನತಿ
ವಾರ್ಷಿಕ ಕ್ರೀಡಾಕೂಟ-2014
ವಿವೇಕಾನಂದ ತಾಂತ್ರಿಕ ವಿದ್ಯಾಲಯದ 2013-14 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ದಿನಾಂಕ 8-3-2014 ರ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಚಾರ್ಯ ಪ್ರೊಫೆಸರ್ ಯಂ. ಯು. ಪ್ರಭಾಕರ್ ಉದ್ಘಾಟಿಸಿದರು. ಈ ಸಂದರ್ಭ ಅವರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯವೇ ಹೊರತು ಸೋಲು, ಗೆಲುವು ಮುಖ್ಯವಲ್ಲ. ವಿದ್ಯಾರ್ಥಿಗಳು ಅವರ ಸಾಮರ್ಥ್ಯದಂತೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಎಂದು ಶುಭ ಹಾರೈಸಿದರು. ಕಾಲೇಜಿನ ಪ್ರ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಕಾರ್ಯಾಗಾರ
ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದಿಂದ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕರಿಗೆ 8-3-2014 ರಂದು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಣಿಲ ಮಹಾದೇವ ಶಾಸ್ತ್ರಿಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಥಮ ಅವಧಿಯಲ್ಲಿ ಮಾನಸಿಕ ಸಂಘರ್ಷ ನಿವಾರಣ ತಜ್ಞ ಡಾ. ಮಸ್ಕರೇನಸ್ ಪಿ.ಸಿ. ವಿದ್ಯಾರ್ಥಿಗಳಲ್ಲಿ ಕಂಡುಬರುವ ಮಾನಸಿಕ ಸಂಘರ್ಷದ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಭೋದನೆ ಮಾಡಿದರು. ಅವರು ಅಪ್ತ ಸಮಾಲೋಚಕರಾಗಿ ಶಿಕ್ಷಕರು ಯಾವ ತರಹದ
ಸಾಂಪ್ರದಾಯಿಕ ದಿನಾಚರಣೆ
ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ವಿ ನಾರಯಣರವರು ದೀಪಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಯಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಗೋಪಿನಾಥ್ ಶೆಟ್ಟಿ ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ ಹಾಗು ವಿದ್ಯಾರ್ಥಿ ಕ್ಷೇಮಪಾಲಕರಾದ ಶ್ರೀ ಚಂದ್ರಕುಮಾರ್ ಹಾಗು ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗು
ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಕೈತೋಟ
ವಿವೇಕಾನಂದ ಪಾಲಿಟೆಕ್ನಿಕ್ ತನ್ನ ಎರಡೂವರೆ ದಶಕಗಳ ಸಾರ್ಥಕ ಸೇವೆಯ ಸವಿನೆನಪಿನಲ್ಲಿ, ಇಲ್ಲಿನ ಹಿರಿಯರ ಬಹುದಿನಗಳ ಕನಸಿನಂತೆ, ಇಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಿರ್ಮಿಸಿರುವ ತ್ಯಾಜ್ಯ ಜಲ ಸಂಸ್ಕರಣ ಘಟಕದಲ್ಲಿ (Sewage Treatment Plant) ಇದೀಗ ಇಡೀಯ ವಿವೇಕಾನಂದ ವಿದ್ಯಾಲಯಗಳಿಂದ ಮತ್ತು ವಸತಿ ನಿಲಯಗಳಿಂದ ದಿನವೊಂದಕ್ಕೆ ಸುಮಾರು 2,50,000 ಲೀಟರ್ ಕೊಳಚೆ ನೀರು ಹರಿದು ಬರುತ್ತಿದ್ದು, ಅದು ಈ ಘಟಕದಲ್ಲಿ ಸಂಸ್ಕರಣೆಗೊಂಡು ಬಳಸಲು ಯೋಗ್ಯವಾದ ನೀರಾಗಿ ಪರಿವರ್ತಿತವಾಗುತ್ತಿದೆ. ಕಳೆದ ಸುಮಾರು 50 ವರ್ಷಗಳ ಕಾಲ ಈ ಕೊಳಚೆ
ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಕರಸೇವೆ.
ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ದಿನಾಂಕ: 05-01-2014ರಂದು ನವೀಕೃತಗೊಳ್ಳುತ್ತಿರುವ ಸವಣೂರಿನ ಮೊಗೇರು ಶ್ರೀವಿಷ್ಣುಮೂರ್ತಿ ದೇವಾಲಯದಲ್ಲಿ ಒಂದು ದಿನದ ಶ್ರಮದಾನವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್‌ನ ಉಪಪ್ರಚಾರ್ಯ ಶ್ರೀ ಹರೇಕೃಷ್ಣ ಬಿ., ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕ ಶ್ರೀ ಚಂದ್ರಕುಮಾರ್, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಶ್ರೀ ಮುರಳೀಧರ ಎಸ್, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪುಷ್ಪಾ ಬಿ.ಎನ್, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಶ್ರೀ ಅಭಿಲಾಷ್ ವಾಲ್ತಾಜೆ, ಪುತ್ತೂರಿನ ಪ್ರಸಾದ್ ಇಂಡಸ್ಟ್ರೀಸ್‌ನ ಮಾಲಕ
ಯಕ್ಷಗಾನ ಬಯಲಾಟ
ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಸರ್ವ ಸಿಬ್ಬಂದಿಗಳ ವತಿಯಿಂದ ದಿನಾಂಕ: 29-12-2013ರಂದು ಪಾಲಿಟೆಕ್ನಿಕ್‌ನ ವಠಾರದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಸಂಪೂರ್ಣ ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್‌ನ ಆರಂಭದ ಹಂತದಲ್ಲಿ ಪ್ರಾಚಾರ್ಯರಾಗಿದ್ದ ಶ್ರೀಯುತ ಎಕ್ಕಡ್ಕ ವಿಷ್ಣು ಭಟ್, ಶ್ರೀಕ್ಷೇತ್ರ ಕಟೀಲು ಇಲ್ಲಿನ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ, ಕಟೀಲು ಮೇಳದ ವ್ಯವಸ್ಥಾಪಕರಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರುಗಳನ್ನು ಶಾಲು ಹೊದಿಸಿ,
2013-14ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ
28-09-2013 ನಡೆದ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತೃತೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ವಿವೇಕ ಎಸ್ ಇವರು ಅಧ್ಯಕ್ಷರಾಗಿ, ತೃತೀಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆಶಿತ್ ಶೆಟ್ಟಿ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿಯಾಗಿ ತೃತೀಯ ಕಂಪ್ಯೂಟರ್ ಸೈನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕು. ಶಿಲ್ಪಾ ಹೆಗ್ಡೆ ಆಯ್ಕೆಯಾದರು. ಈ ಚುನಾವಣೆಯನ್ನು ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ಭಟ್, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳೀಧರ ಎಸ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ