ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಸರ್ವ ಸಿಬ್ಬಂದಿಗಳ ವತಿಯಿಂದ ದಿನಾಂಕ: 29-12-2013ರಂದು ಪಾಲಿಟೆಕ್ನಿಕ್‌ನ ವಠಾರದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಸಂಪೂರ್ಣ ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್‌ನ ಆರಂಭದ ಹಂತದಲ್ಲಿ ಪ್ರಾಚಾರ್ಯರಾಗಿದ್ದ ಶ್ರೀಯುತ ಎಕ್ಕಡ್ಕ ವಿಷ್ಣು ಭಟ್, ಶ್ರೀಕ್ಷೇತ್ರ ಕಟೀಲು ಇಲ್ಲಿನ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ, ಕಟೀಲು ಮೇಳದ ವ್ಯವಸ್ಥಾಪಕರಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರುಗಳನ್ನು ಶಾಲು ಹೊದಿಸಿ, ಫಲತಾಂಬೂಲವನ್ನಿತ್ತು ಸನ್ಮಾನಿಸಲಾಯಿತು. ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಉಷಾಕಿರಣ್ ನಿರ್ವಹಿಸಿದ್ದ ಈ ಕಾರ್ಯಕ್ರಮದ ಆಧ್ಯಕ್ಷತೆಯನ್ನು ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅದ್ಯಕ್ಷರಾದ ಶ್ರೀ ಎ.ವಿ.ನಾರಾಯಣ ಇವರು ವಹಿಸಿದ್ದು, ಆರಂಭದಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಅವರಿಂದ ಪ್ರಾರ್ಥನೆ ನೆರವೇರಿತು.
ಚಾರ್ಯರಾದ ಶ್ರೀಗೋಪಿನಾಥ್ ಶೆಟ್ಟಿ ಇವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸದಸ್ಯ ಶ್ರೀ ಗುಣಪಾಲ ಜೈನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಪಾಲಿಟೆಕ್ನಿಕ್‌ನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಹರೀಶ್ ಭಟ್ ಇವರು ವಂದಿಸಿದರು. ಈ ಸಂದರ್ಭದಲ್ಲಿ ಕಟೀಲು ಯಕ್ಷಗಾನ ಮೇಳಗಳ ಸಂಚಾಲಕರಾದ ಕೆ. ದೇವಿಪ್ರಸಾದ್ ಶೆಟ್ಟಿ, ಪುತ್ತೂರು ಪುರಸಭಾ ಉಪಾಧ್ಯಕ್ಷರಾದ ಶ್ರೀ ಜೀವಂಧರ್ ಜೈನ್, ಪುರಸಭಾ ಸದಸ್ಯರಾದ ಶ್ರೀ ರಾಜೇಶ್ ಬನ್ನೂರು, ಶ್ರೀ ಹರೀಶ್ ನಾಕ್ ಮಾಲ್ತೊಟ್ಟು, ಚೆಲುವಮ್ಮನ ಕಟ್ಟೆಯ ಶ್ರೀಮತಿ ಸುಮಲೇಖ ಜೈನ್ ಪಡ್ನೂರು, ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಿ.ಎಂ. ಹರೀಶ್ಚಂದ್ರ ರೈ ಮುಗೆರೋಡಿ, ಶ್ರೀ ಅಗರ್ತಬೈಲ್ ಕೃಷ್ಣ ನಾಯ್ಕ, ಶ್ರೀ ಸುರೇಶ್ ಕೆ.ಎಸ್. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಆರ್. ರಂಗಮೂರ್ತಿ, ಕಾರ್ಯದರ್ಶಿಗಳಾದ ಶ್ರೀ ಶಿವಪ್ರಸಾದ್ ಇ, ಕೋಶಾಧಿಕಾರಿ ಶ್ರೀ ರವೀಂದ್ರ ರೈ, ಪರಿಯಾಲು, ನಿರ್ದೇಶಕರಾದ ಶ್ರೀ ರಾಧಾಕೃಷ್ಣ ಭಕ್ತ, ಶ್ರೀಮತಿ ವತ್ಸಲಾ ರಾಜ್ಞಿ, ಇ.ಪಿ.ಕೆ. ಕನ್ಸ್‌ಟ್ರಕ್ಷನ್‌ನ ಸೂರಜ್ ನಾಯರ್, ಪುತ್ತೂರು ಪ್ರಸಾದ್ ಇಂಡಸ್ಟ್ರೀಸ್‌ನ ಮಾಲಕ ಶ್ರೀ ಎಂ. ಶಿವಪ್ರಸಾದ್ ಶೆಟ್ಟಿ, ನವೀನ್ ಪ್ರಸಾದ್ ರೈ ಕೈಕಾರ, ಶ್ರೀ ಗಂಗಾಧರ ಶೆಟ್ಟಿ ಕೈಕಾರ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜೀವನ್‌ದಾಸ್, ಶ್ರೀ ವಿ.ಜಿ.ಭಟ್, ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ರೈ, ಇವರುಗಳು ಉಪಸ್ಥಿತರಿದ್ದರು.
ಯಕ್ಷಗಾನ ಸಂದರ್ಭದಲ್ಲಿ ಬ್ಯಾಂಡ್ ವಾದ್ಯ ಹಾಗೂ ವಿಶೇಷ ಸುಡುಮದ್ದುಗಳ ಪ್ರದರ್ಶನ, ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಪ್ರಸಾದ ಭೋಜನ ಮತ್ತು ಪಾನೀಯ ಹಾಗೂ ತಿಂಡಿಗಳ ವ್ಯಸ್ಥೆಗಳನ್ನು ಮಾಡಲಾಗಿತ್ತು.