News and Events
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ
ಪುತ್ತೂರು, ಜ. 19: ಶ್ರೀ ರಾಮ ಪ್ರಾಣ ಪ್ರತಿಷ್ಠಾ ಸಪ್ತಾಹದ ಅಂಗವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಪಾದುಕ ಪ್ರದಾನ” ಎಂಬ ಗಮಕ ಕಾರ್ಯಕ್ರಮ ನಡೆಯಿತು. ಭಾರತಾಂಬೆ ಮತ್ತು ಶ್ರೀ ರಾಮನ ಭಾವಚಿತ್ರಕ್ಕೆ ಪುಶ್ಪಾರ್ಚನೆ ಮಾಡುವುದರ ಮೂಲಕ ಅತಿಥಿಗಳು ವೇದಿಕೆಗೆ ಆಗಮಿಸಿದರು. ರಾಮಾಯಣದ ಒಂದು ಭಾಗವಾದ ಪಾದುಕ ಪ್ರದಾನ ಎಂಬ ವಿಷಯದ ಬಗ್ಗೆ ಗಮಕ ಕಾರ್ಯಕ್ರಮವನ್ನು ಶ್ರೀ. ಪ್ರೊ. ಮಧೂರು ಮೋಹನ ಕಲ್ಲೂರಾಯ ಹಾಗೂ ಶ್ರೀ. ವಿಷ್ಣುಪ್ರಸಾದ ಕಲ್ಲೂರಾಯ ಇವರು
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 3ನೇ ವಿಚಾರ ಸಂಕಿರಣ
ರಾಮಾಯಣ ಬರಿ ಕಾವ್ಯವಲ್ಲ, ಅದು ನಮ್ಮ ಜೇವನದ ಭಾಗವಾಗಬೇಕು – ಲಕ್ಷ್ಮೀಶ ತೋಳ್ಪಾಡಿ. ಪುತ್ತೂರು, ಜ. ೧೯: ರಾಮಾಯಣ ಎಂಬುದು ಬರಿ ಕಥೆಯಲ್ಲ, ಅದೊಂದು ಆದಿ ಕಾವ್ಯ. ಆದಿ ಕಾವ್ಯ ಮೂಡಿ ಬರುವ ಮೊದಲು ವೈದಿಕ ಪರಂಪರೆ ಇತ್ತು. ಈ ಪರಂಪರೆಯ ವಿಶೇಷ ಎಂದರೆ ಜ್ಞಾನ. ಇದು ಯಾರ ಸ್ವತ್ತೂ ಅಲ್ಲ ಬದಲಿಗೆ ಲೋಕಕ್ಕೆ ಸೀಮಿತವಾದದ್ದು ಎಂದು ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಶ್ರೀ ರಾಮ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2ನೇ ವಿಚಾರ ಸಂಕಿರಣ.
ಪುತ್ತೂರು: ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹದ ಅಂಗವಾಗಿ ಎರಡನೇ ವಿಚಾರ ಸಂಕಿರಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಆದರ್ಶ ಪುರುಷ ಶ್ರೀರಾಮ” ಎಂಬ ವಿಚಾರಗೋಷ್ಠಿಯನ್ನು ದಿನಾಂಕ 17-01-2024ನೇ ಬುಧವಾರದಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಭಾರತ ಮಾತೆಗೆ ಹಾಗೂ ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಗಂಗಮ್ಮ ಶಾಸ್ತ್ರಿ ಮಣಿಲ ಇವರು “ಜೀವನದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಸಲು ಶ್ರೀಹರಿಯು ರಾಮನ ಜನ್ಮವೆತ್ತಿದ. ರಾಮನು
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ.
ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾದ ರಾಮ ಮಂದಿರದ ಶ್ರೀ ಬಾಲರಾಮನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸರಣಿ ವಿಚಾರ ಸಂಕಿರಣದ ಮೊದಲ ಕಾರ್ಯಕ್ರಮವನ್ನು ದಿನಾಂಕ 16-01-2024ರಂದು ನಡೆಸಲಾಯಿತು. ಮೊದಲಿಗೆ ಕಾರ್ಯಕ್ರಮವನ್ನು ಭಾರತಮಾತೆ ಹಾಗೂ ಶ್ರೀರಾಮನ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಉದ್ಘಾಟಿಸಲಾಯಿತು. ಅಯೋಧ್ಯಾ ಕಾರ್ಯಾಚರಣೆಯಲ್ಲಿ ಕರಸೇವಕರಾಗಿ ಪಾಲ್ಗೊಂಡ ಶ್ರೀ ಜಯಶ್ಯಾಮ ನೀರ್ಕಜೆ ಇವರು ಮಾತನಾಡುತ್ತಾ ತಮ್ಮ ರೋಮಾಂಚನಕಾರಿ ಅನುಭವಗಳನ್ನು ಹಂಚಿಕೊಂಡರು. ಸುಮಾರು ಒಂದು ಗಂಟೆ ಹದಿನೈದು ನಿಮಿಷ ಅಯೋಧ್ಯೆಯ ಕರಸೇವಾ ಕಾರ್ಯಾಚರಣೆಯಲ್ಲಿ
ಸ್ಟಾರ್ಟ್ ಅಪ್ ಚಾಲೆಂಜಸ್ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ಗೆ ಬಹುಮಾನ
ಪುತ್ತೂರು: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸಗಾರರ ಕೊರತೆಗಳಿಗೆ ಹಾಗೂ ವಿದ್ಯುಚ್ಛಕ್ತಿಯ ಪೂರೈಕೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತೇವಾಂಶಕ್ಕನುಗುಣವಾಗಿ ನೀರಿನ ಹರಿವನ್ನು ನಮ್ಮ ಮೊಬೈಲ್‌ನಿಂದಲೇ ನಿಯಂತ್ರಣ ಮಾಡುವಂತಹ ಮೂಲಮಾದರಿಯನ್ನು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳ ತಂಡವು ತಯಾರಿಸಿ ಮಂಡಿಸಿದ ಹೊಸ ಆವಿಷ್ಕಾರಕ್ಕೆ “ಸ್ಟಾರ್ಟ್ ಅಪ್ ಚಾಲೆಂಜಸ್” ಸ್ಪರ್ಧೆಯಲ್ಲಿ ಒಂದು ಲಕ್ಷ ರೂ.ಗಳ ನಗದು ಬಹುಮಾನ ಲಭಿಸಿದೆ. ಕೆಎಸ್‌ಡಿಸಿ ಕರ್ನಾಟಕ ಸರಕಾರ ಯುಎನ್‌ಡಿಪಿ, ಕೌಶಲ್ಯ ಕರ್ನಾಟಕ, ಸೆವೆನ್ತ್ ಸೆನ್ಸ್, ಎಸ್‌ಎಪಿ
ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ.
“ಒಬ್ಬ ವ್ಯಕ್ತಿ ನಾಯಕತ್ವದ ಗುಣವನ್ನು ತೋರಿಸಬೇಕಾದರೆ ವಿಷಯದ ಬಗ್ಗೆ ಅರಿವು ಮತ್ತು ಧೈರ್ಯ ಬೆಳೆಸಿಕೊಳ್ಳಬೇಕು”-ಕ್ಯಾಪ್ಟನ್ ಬ್ರಿಜೇಶ್ ಚೌಟ. ಪುತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪ್ರತಿವರ್ಷದಂತೆ ದಿನಾಂಕ 24-11-2023 ರಂದು ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ “ಪ್ರಸ್ತುತ ಕೌಶಲ್ಯ ಅಭಿವೃದ್ದಿ ಪ್ರತಿಯೊಬ್ಬನಿಗೂ ಬೇಕಾದ ವಿಷಯ. ಯಾವುದೇ ವ್ಯಕ್ತಿಗೆ ಜೀವನದಲ್ಲಿ ದೃಷ್ಟಿಕೋನ, ನಿರಂತರತೆ, ಉತ್ಸಾಹ ಇವು ಮೂರೂ ಇದ್ದಾಗ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ಆದ್ದರಿಂದ ನೀವು ಕೀಳರಿಮೆಯನ್ನು ಬಿಟ್ಟು ಉತ್ಸಾಹದಿಂದ ಕೆಲಸವನ್ನು ಮಾಡಿ” ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ವಾರ್ಷಿಕ ಕ್ರೀಡಾಕೂಟ.
ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟವು ದಿನಾಂಕ. 27-10-2023 ರಂದು ನಡೆಯಿತು. ವಿದ್ಯಾರ್ಥಿಗಳ ಪಥಸಂಚಲನದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸನತ್ ಕುಮಾರ್ ಕ್ರೀಡಾಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಇವರು“ವಿದ್ಯೆ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯೂ ಮುಖ್ಯ“. ಇಂದು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸುವಂತಾಗಲಿ” ಎಂದು ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವರ್ಷಂಪ್ರತಿ ನಡೆಯುವಂತೆ ಆಯುಧ ಪೂಜಾ ಕಾರ್ಯಕ್ರಮವು ವೇದಮೂರ್ತಿ ನೂಜಿಮನೆ ರಾಮಕೃಷ್ಣ ಭಟ್ ಮಿತ್ತೂರು ಇವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ದೇವಿ ಆರಾಧನೆ, ದೇವಿಸ್ತೋತ್ರ ಪಠಣ, ಪ್ರಯೋಗಾಲಯಗಳ ಪೂಜೆ, ವಾಹನ ಪೂಜೆ ನಡೆದವು. ವಿದ್ಯಾರ್ಥಿಗಳ ನೇತೃತ್ವದಲ್ಲಿ “ಪಿಲಿಗೊಬ್ಬು” ಹಾಗೂ “ಚೆಂಡೆವಾದನ” ನಡೆದವು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರಾದ ಶ್ರೀ ರವಿಮುಂಗ್ಲಿಮನೆ, ಅಗರ್ತಬೈಲು ಕೃಷ್ಣನಾಯ್ಕ ಉಪಸ್ಥಿತರಿದ್ದರು. ಕಾಲೇಜಿನ
Swach Bharath Abhiyan
As part of “Swach Bharath Abhiyan”, staff and students of Vivekananda Polytechnic, Puttur on 02/10/2023 cleaned the campus surroundings and the Medicinal Plants garden Maintained by the College and the Management.
National Health Mission Exam
ಆರೋಗ್ಯ ಇಲಾಖೆಯ ವತಿಯಿಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ NHM(National Health Mision) ಸ್ಪರ್ಧೆ ಇಂದು ನಡೆಯಿತು.