ರಾಮಾಯಣ ಬರಿ ಕಾವ್ಯವಲ್ಲ, ಅದು ನಮ್ಮ ಜೇವನದ ಭಾಗವಾಗಬೇಕು – ಲಕ್ಷ್ಮೀಶ ತೋಳ್ಪಾಡಿ.
ಪುತ್ತೂರು, ಜ. ೧೯: ರಾಮಾಯಣ ಎಂಬುದು ಬರಿ ಕಥೆಯಲ್ಲ, ಅದೊಂದು ಆದಿ ಕಾವ್ಯ. ಆದಿ ಕಾವ್ಯ ಮೂಡಿ ಬರುವ ಮೊದಲು ವೈದಿಕ ಪರಂಪರೆ ಇತ್ತು. ಈ ಪರಂಪರೆಯ ವಿಶೇಷ ಎಂದರೆ ಜ್ಞಾನ. ಇದು ಯಾರ ಸ್ವತ್ತೂ ಅಲ್ಲ ಬದಲಿಗೆ ಲೋಕಕ್ಕೆ ಸೀಮಿತವಾದದ್ದು ಎಂದು ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣದಲ್ಲಿ ನಡೆದ ಹನುಮಂತನ ಪಾತ್ರದ ವೈಶಿಷ್ತ್ಯದ ಕುರಿತು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ನಮ್ಮ ಜೀವನವು ಅನುಕರಣೆಯ ಮೇಲೆ ನಿಂತಿದೆ. ಇದು ನಮ್ಮ ಜೀವನದ ಅನುದಿನದ ವಸ್ತುನಿಷ್ಠ ಸತ್ಯ. ನಮ್ಮನ್ನು ನಾವು ಯಾವಾಗ ಮರೆಯುತ್ತೇವೋ ಆಗ ನಿಜವಾದ ಜೀವಂತಿಕೆಯ ಅರಿವು ನಮಗಾಗುತ್ತದೆ. ಪ್ರತಿಯೊಂದು ಯೋಜನೆಗಳು ಸೇರಿ ರಾಮಾಯಣ ಎಂಬ ಮಹಾಕಾವ್ಯವಾಗಿದೆ ಎಂದು ನುಡಿದರು.
ರಾಮಾಯಣದ ಮೂಲ ರಸವನ್ನು ತಿಳಿದುಕೊಂಡರೆ ಮಾತ್ರ ಅದರ ಶ್ರೇಷ್ಠತೆ ನಮಗೆ ಅರಿವಾಗುತ್ತದೆ. ಜನರಿಗೆ ಸುಲಭ ರೀತಿಯಲ್ಲಿ ತಿಳಿಯಬೇಕಾದರೆ ರಾಮಾಯಣವನ್ನು ಕಾವ್ಯದ ರೂಪದಲ್ಲಿ ವ್ಯಕ್ತಪಡಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ. ವಿಶ್ವೇಶ್ವರ ಭಟ್ ಅಧ್ಯಕ್ಷೀಯ ಮಾತನಾಡಿದರು. ವೇದಿಕೆಯಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಕುಮಾರ್ ಉಪಸ್ಥಿತರಿದ್ದರು.
ಅತಿಥಿಗಳು ಭಾರತಾಂಬೆ ಮತ್ತು ಶ್ರೀ ರಾಮನ ಭಾವಚಿತ್ರಕ್ಕೆ ಪುಶ್ಪಾರ್ಚನೆ ಮಾಡುವುದರ ಮೂಲಕ ವೇದಿಕೆಗೆ ಆಗಮಿಸಿದರು. ಇಂಜಿನಿಯರಿಂಗ್ ಕಾಲೆಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಬಲರಾಮ ಆಚಾರ್ಯ ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರಾದ ಶ್ರೀ ಈಶ್ವರಚಂದ್ರ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿರಾಮ್ ಎಸ್ ಸ್ವಾಗತಿಸಿ ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಶ್ರೀ ವಂದಿಸಿ, ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಸ್ಮಿ ಪ್ರಾರ್ಥಿಸಿ, ಶ್ರೀಮತಿ ಉಷಾಕಿರಣ್ ನಿರೂಪಿಸಿದರು.