• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ.

 

ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾದ ರಾಮ ಮಂದಿರದ ಶ್ರೀ ಬಾಲರಾಮನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸರಣಿ ವಿಚಾರ ಸಂಕಿರಣದ ಮೊದಲ ಕಾರ್ಯಕ್ರಮವನ್ನು ದಿನಾಂಕ 16-01-2024ರಂದು ನಡೆಸಲಾಯಿತು.
ಮೊದಲಿಗೆ ಕಾರ್ಯಕ್ರಮವನ್ನು ಭಾರತಮಾತೆ ಹಾಗೂ ಶ್ರೀರಾಮನ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಉದ್ಘಾಟಿಸಲಾಯಿತು.
ಅಯೋಧ್ಯಾ ಕಾರ್ಯಾಚರಣೆಯಲ್ಲಿ ಕರಸೇವಕರಾಗಿ ಪಾಲ್ಗೊಂಡ ಶ್ರೀ ಜಯಶ್ಯಾಮ ನೀರ್ಕಜೆ ಇವರು ಮಾತನಾಡುತ್ತಾ ತಮ್ಮ ರೋಮಾಂಚನಕಾರಿ ಅನುಭವಗಳನ್ನು ಹಂಚಿಕೊಂಡರು. ಸುಮಾರು ಒಂದು ಗಂಟೆ ಹದಿನೈದು ನಿಮಿಷ ಅಯೋಧ್ಯೆಯ ಕರಸೇವಾ ಕಾರ್ಯಾಚರಣೆಯಲ್ಲಿ 1990 ಹಾಗೂ 1992 ರಲ್ಲಿ ಭಾಗವಹಿಸಿದ ಸಂಪೂರ್ಣ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ “ದೇಶದ ಗೌರವದ ಅಸ್ಮಿತೆಯಾದ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಂದರ್ಭದಲ್ಲಿ ಕರಸೇವೆಯಲ್ಲಿ ಭಾಗವಹಿಸಿದ ತೃಪ್ತಿ ನನಗಿದೆ. ದೇಶದ ಮಾನಾಪಮಾನದ ಸಮಯ ಬಂದಾಗ ನಾವೆಲ್ಲರೂ ಒಗ್ಗೂಡಿ ಕೆಲಸವನ್ನು ಮಾಡುವ” ಎಂಬ ಕರೆಯನ್ನು ಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ಕೃಷ್ಣಕುಮಾರ್ ಶೆಟ್ಟಿ “ಮುಂದಿನ 22ನೇ ತಾರೀಖು ಈ ದೇಶದ ಸಂಹಿತೆಯಾದ ಶ್ರೀ ರಾಮನ ಪ್ರತಿಷ್ಠೆಯ ಹಿಂದಿರುವ ಹೋರಾಟದ ಬಗ್ಗೆ ನೆನಪಿಸಿಕೊಂಡು ಯುವ ಪೀಳಿಗೆಯಾದ ನಾವೆಲ್ಲರೂ ಒಗ್ಗೂಡೋಣ” ಎಂದು ತಿಳಿಸಿದರು.

ಪ್ರಾಸ್ತಾವಿಕ ಭಾಷಣವನ್ನು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಇವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ ಹಾಗೂ ಸಂಚಾಲಕರದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯರಾದ ಶ್ರೀ ಈಶ್ವರಚಂದ್ರ ಇವರು ಉಪಸ್ಥಿತರಿದ್ದರು.

ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ . ಎಸ್. ಪ್ರಾರ್ಥಿಸಿದರು. ಸಿವಿಲ್ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀ ಕಿರಣ್ ಪಾಲ್ ಗಣ್ಯರನ್ನು ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀ ಪ್ರಮೋದ್ ಯಂ.ಎಸ್. ಇವರು ವಂದಿಸಿದರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಆಟೋಮೊಬೈಲ್ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀ ಗುರುರಾಜ್ ಪಿ. ನೆರವೇರಿಸಿದರು. ಹಾಗೂ ಸಿವಿಲ್ ವಿಭಾಗ ಮುಖ್ಯಸ್ಥರಾದ ರವಿರಾಮ್ ಸಿದ್ದಮೂಲೆ ಕರ‍್ಯಕ್ರಮವನ್ನು ಸಂಯೋಜಿಸಿದರು.

Highslide for Wordpress Plugin