• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2ನೇ ವಿಚಾರ ಸಂಕಿರಣ.

 

ಪುತ್ತೂರು: ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹದ ಅಂಗವಾಗಿ ಎರಡನೇ ವಿಚಾರ ಸಂಕಿರಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಆದರ್ಶ ಪುರುಷ ಶ್ರೀರಾಮ” ಎಂಬ ವಿಚಾರಗೋಷ್ಠಿಯನ್ನು ದಿನಾಂಕ 17-01-2024ನೇ ಬುಧವಾರದಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಭಾರತ ಮಾತೆಗೆ ಹಾಗೂ ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಗಂಗಮ್ಮ ಶಾಸ್ತ್ರಿ ಮಣಿಲ ಇವರು “ಜೀವನದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಸಲು ಶ್ರೀಹರಿಯು ರಾಮನ ಜನ್ಮವೆತ್ತಿದ. ರಾಮನು ನುಡಿಗಿಂತ ಹೆಚ್ಚು ನಡೆದು ತೋರಿಸಿದ. ರಾಮನ ಪ್ರತಿ ಹೆಜ್ಜೆಯೂ ನಮಗೆ ಆದರ್ಶ. ರಾಮನ ನಡೆಯನ್ನು ನೋಡಿ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ರಾಮಾಯಣ ನಮಗೆ ಒಂದು ಕನ್ನಡಿ ಇದ್ದಂತೆ” ಎಂದರು. ರಾಮನ ಆದರ್ಶ ಗುಣಗಳನ್ನು ರಾಮಾಯಣದ ಅನೇಕ ಸಂದರ್ಭಗಳ ಮೂಲಕ ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ ಇವರು ಆಯೋದ್ಯೆಗೆ ತೆರಳುವವರಿಗೆ ಸೂಕ್ತ ಮಾಹಿತಿ ನೀಡಿ ಶುಭ ಹಾರೈಸಿದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಕೋಶಾಧಿಕಾರಿ ಶ್ರೀ ನರಸಿಂಹ ಪೈ ಯವರು ವಿಚಾರಗೋಷ್ಠಿ ನಡೆಸಿಕೊಟ್ಟ ಶ್ರೀಮತಿ ಗಂಗಮ್ಮ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸದಸ್ಯರಾದ ಶ್ರೀ ಈಶ್ವರಚಂದ್ರ, ಪ್ರಾಚಾರ್ಯರಾದ ಶ್ರೀ ಚಂದ್ರಕುಮಾರ್, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿರಾಮ್ ಯಸ್ ಆಯೋಜಿಸಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಯಸ್. ಪ್ರಾರ್ಥಿಸಿದರು. ಅಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಸಿವಿಲ್ ವಿಭಾಗದ ಉಪನ್ಯಾಸಕಿ ಶ್ರೀಮತಿ ವೀಣಾ.ಸಿ. ಧನ್ಯವಾದ ಸಮರ್ಪಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪುಷ್ಪಾ ಬಿ. ಎನ್ ಕಾರ್ಯಕ್ರಮ ನಿರೂಪಿಸಿದರು

Highslide for Wordpress Plugin