News and Events
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕರ‍್ಯಕ್ರಮವು ದಿನಾಂಕ 19-11-2022 ರಂದು ನಡೆಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕರ‍್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ಮಾತನಾಡುತ್ತಾ “ನಾಯಕತ್ವದ ಗುಣ ವಿದ್ಯಾರ್ಥಿ ದೆಸೆಯಲ್ಲಿಯೇ ರೂಪುಗೊಳ್ಳುತ್ತದೆ.ವಿದ್ಯಾ ಸಂಸ್ಸ್ಥೆಯ ಹುಟ್ಟು ಹಾಗು ಬೆಳವಣಿಗೆಗೆ ವಿದ್ಯಾರ್ಥಿಗಳು ಆದರ್ಶರಾಗಬೇಕು, ಸಾಮಾಜಿಕ ಮೌಲ್ಯಗಳ ಕಲ್ಪನೆ,ಕಾರ‍್ಯಕ್ರಮಗಳನ್ನು ಓದಿನ ಜೊತೆಗೆ ಜೋಡಿಸಿಕೊಂಡು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು” ಎಂದು ಶುಭಹಾರೈಸಿದರು. ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದಅಸ್ಮಿತ್ ಆಚಾರ್ಯ,ಮಹೇಶ್ ಬಾಬು,ವಿಖ್ಯಾತ್
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಮಾಹಿತಿ ಕರ‍್ಯಾಗಾರ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ “ಸಂದರ್ಶನವನ್ನು ಎದುರಿಸುವ ಬಗ್ಗೆ ಮಾಹಿತಿ ಹಾಗೂ ಉದ್ಯಮಶೀಲತೆಯಲ್ಲಿ ಹಣಕಾಸಿನ ಹೊಂದಾಣಿಕೆ ಮತ್ತು ಯೋಜನೆ” ಗಳ ಬಗ್ಗೆ ಒಂದು ದಿನದ ಮಾಹಿತಿ ಕರ‍್ಯಾಗಾರವನ್ನು ನಡೆಸಲಾಯಿತು.ಈ ಕರ‍್ಯಕ್ರಮದಲ್ಲಿ ಮಂಗಳೂರಿನ “ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್”ನ ಮಾಲಕರಾದ ಶ್ರೀಶ.ಕೆ. ಇವರು ಸಂಪನ್ಮೂಲ ವ್ಯಕ್ತಿಯಾಗಿ ಬಂದು ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿಯನ್ನು ನೀಡಿದರು. ಈ ಕರ‍್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು,ಶಿಕ್ಷಕವೃಂದ ಹಾಗೂ ಅಂತಿಮವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉದ್ಯೋಗ ಮಾಹಿತಿಕೇಂದ್ರದ ನಿಯೋಜನ ಅಧಿಕಾರಿಯಾದ ಶೀಮತಿ ಉಷಾಕಿರಣ್.ಎಸ್.ಎಂ. ಕಾರ‍್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗೆ ಪ್ರಥಮ ರ‍್ಯಾಂಕ್
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನೆಹರು ನಗರ ಪುತ್ತೂರು,ಇದರಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಅಂತಿಮ ವರ್ಷದ ಹೆಮ್ಮೆಯ ವಿದ್ಯಾರ್ಥಿ ಅಂಕಿತ್ ಶೆಟ್ಟಿ ಇವರು ಕರ್ನಾಟಕ ರಾಜ್ಯದ ತಾಂತ್ರಿಕ ವಿದ್ಯಾಲಯ ಬೆಂಗಳೂರು ನಡೆಸಿದ 2021-2022ನೇ ಸಾಲಿನ ಸೆಮಿಸ್ಟರ್ ಪರೀಕ್ಷೆಯಲಿ 94.11% ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕನ್ನು ಗಳಿಸಿ ವಿವೇಕಾನಂದ ಪಾಲಿಟೆಕ್ನಿಕ್‌ನ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ್ದಾರೆ. ಇವರು ಮಾಣಿಯ ಪುರಂದರ ಶೆಟ್ಟಿ ಮತ್ತು ಶರ್ಮಿಳ ಶೆಟ್ಟಿ ಇವರ ಪುತ್ರ. ಹಾಗೆಯೇ ಇದೇ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಯುಧ ಪೂಜೆ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ವರ್ಷಂಪ್ರತಿ ನಡೆಯುವಂತೆ ಆಯುಧಪೂಜಾ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು. ಸರಸ್ವತಿ ಪೂಜೆ, ಪ್ರಯೋಗಾಲಯಗಳ ಪೂಜೆ ಹಾಗೂ ವಾಹನ ಪೂಜೆ ಈ ಸಂದರ್ಭದಲಿ ನಡೆಯಿತು. ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯರಾದ ರವಿ ಮುಂಗ್ಲಿಮನೆ, ಅಚ್ಯುತ ಪ್ರಭು, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕರ‍್ಯಕ್ರಮದಲ್ಲಿ ಭಾಗವಹಿಸಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ತಾಂತ್ರಿಕ ವಿಚಾರಗೋಷ್ಠಿ
ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಶ್ರೀ ನರಸಿಂಹ ನಾಯಕ್, ಕಾರ್ಯನಿರ್ವಾಹಕ ಇಂಜಿನಿಯರ್, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಇವರಿಂದ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳ ವಿಚಾರಗೋಷ್ಠಿ ನಡೆಯಿತು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ದಿನಾಂಕ 11-09-2022 ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್‍ಯಕ್ರಮದಲ್ಲಿ ಸುಮಾರು 200 ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೀಪ ಬೆಳಗಿಸಿ ಕಾರ್‍ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಹಿರಿಯ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ಇದೊಂದು ಸೌಹಾರ್ದ ಬೆಸೆಯುವ ಕಾರ್‍ಯಕ್ರಮ. ನಾವೆಲ್ಲರೂ ಒಟ್ಟಾಗಿ ಈ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಶುಭ ನುಡಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ದೇವಿಪ್ರಸಾದ್ ಇವರು ದೇಣಿಗೆಯಾಗಿ
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ (2021-22) ವಿದಾಯಕೂಟ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ವಿದಾಯ ಕಾರ್ಯಕ್ರಮವನ್ನು ನಡೆಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಗೈಯುವ ಮೂಲಕ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಭಟ್ ಕೊಂಕೋಡಿ ಮಾತನಾಡುತ್ತಾ, ಮೊಟ್ಟೆಯಿಂದ ಹೊರಬಂದ ಮರಿ ಹೇಗೆ ತನ್ನಷ್ಟಕ್ಕೆ ತಾನೇ ಬದುಕಲು ಕಲಿಯುತ್ತದೋ ಹಾಗೆ ಜೀವನದ ಸವಾಲುಗಳನ್ನು ಎದುರಿಸಿ ಯಶಸ್ಸಿನ ಮೆಟ್ಟಲುಗಳನ್ನು ಏರುವುದು ಹೇಗೆ ಎಂಬುದನ್ನು ನೀವು ಕಲಿಯಬೇಕಾಗಿದೆ. ಸೋಲಿನಿಂದ ಗೆಲುವಿನ ಮೆಟ್ಟಲುಗಳನ್ನು ಕಟ್ಟಿಕೊಳ್ಳಬೇಕು ಎನ್ನುವ ಪೇರಣೆ
Flag Hoisting and Independence day celebrations
Flag Hoisting and Independence day celebrations at Vivekananda Polytechnic, Puttur.
75 ವರ್ಷದ ಸ್ವಾತಂತ್ರ್ಯ ಸಂಭ್ರಮ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 75 ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಧ್ವಜಾರೋಹಣವನ್ನು ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿಯವರು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ವಾತಂತ್ರ್ಯ ಸಂಭ್ರಮದ ಹಿಂದಿನ ಕಷ್ಟ ನಷ್ಟಗಳನ್ನು, ಬಲಿದಾನಗಳನ್ನು ನೆನಪಿಸಿದರು. ಹಾಗೂ ಮುಂದಿನ ಪೀಳಿಗೆಯವರಾದ ವಿದ್ಯಾರ್ಥಿಗಳು ಅವರ ಶ್ರಮವನ್ನು ಸಾರ್ಥಕಗೊಳಿಸಿ ಎಂದರು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸದಸ್ಯರಾದ ರವಿ ಮುಂಗ್ಲಿಮನೆ, ಈಶ್ವರಚಂದ್ರ, ಪ್ರಾಚರ್ಯರು, ಶಿಕ್ಷಕ, ಶಿಕ್ಷಕೇತರ ವರ್ಗದವರು ಮತ್ತು
ಅಮೃತ ಮಹೋತ್ಸವದ ಸಂದೇಶ ಹಾಗೂ ರಕ್ಷಾ ಬಂಧನ ಕಾರ್‍ಯಕ್ರಮ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಮೃತ ಮಹೋತ್ಸವದ ಸಂದೇಶ ಹಾಗೂ ರಕ್ಷಾ ಬಂಧನ ಕಾರ್‍ಯಕ್ರಮ ಆಚರಿಸಲಾಯಿತು. ದಿಕ್ಸೂಚಿ ಭಾಷಣವನ್ನು ಮಾಡಿದ ಶ್ರೀರಂಗ ಶಾಸ್ತ್ರಿ, ನಿವೃತ್ತ ಸೈನಿಕರು, ಭಾರತೀಯ ನೌಕದಳ ಇವರು ಮಾತನಾಡುತ್ತಾ, ಉತ್ತಮ ನಾಗರಿಕನಾಗಿ ರೂಪುಗೊಳ್ಳುವಲ್ಲಿ ಶಿಸ್ತು ಮುಖ್ಯ. ಸಂಯಮ, ಬದ್ಧತೆ, ಸಮಯಪರಿಪಾಲನೆ, ಜವಾಬ್ದಾರಿಯನ್ನು ಪೂರ್ಣಗೊಳಿಸುವುದು. ಸಹಾಯಹಸ್ತ ನೀಡುವುದು, ಪ್ರಾಮಾಣಿಕ ಶುದ್ಧ ಹಸ್ತರಾಗಿರುವುದು ನಮ್ಮ ಜವಾಬ್ದಾರಿ. ರಾಷ್ಟ್ರಪ್ರೇಮ ಹಾಗೂ ಸ್ವಚ್ಛ ಭಾರತಕ್ಕೆ ನಮ್ಮ ಕೊಡುಗೆ ಸದಾ ಇರಬೇಕು ಎಂದು ಯುವ ಪೀಳಗೆಯಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸುವ