ಪುತ್ತೂರು:ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಂತೆ ವಿವೇಕಾನಂದ ಪಾಲಿಟೆಕ್ನಿಕ್‌ನ ವತಿಯಿಂದ ಪಡ್ಡಾಯೂರು ಗ್ರಾಮದೊಲ್ಲೊಂದು ಔಷಧೀಯ ವನ ನಿರ್ಮಾಣಕ್ಕೆ ದಿನಾಂಕ 13-07-2023 ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಉದ್ದೇಶವನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಗ್ರಾಮಸ್ಥರಲ್ಲಿ ಮನವಿ ಮಾಡುತ್ತಾ “ಇಲ್ಲಿ ನೆಡುವ ಹಣ್ಣು, ಔಷಧೀಯ ಗಿಡಮರಗಳಿಂದ ಗ್ರಾಮಸ್ಥರು, ಮುಂದಿನ ಪೀಳಿಗೆಯವರು ಹಾಗೂ ಪ್ರಾಣಿ ಪಕ್ಷಿಗಳು ಪ್ರಯೋಜನ ಪಡೆಯುವಂತಾಗಲಿ” ಎಂದು ಹಾರೈಸಿದರು.
ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿಮನೆ ಮಾತನಾಡುತ್ತಾ “ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಔಷಧೀಯ ವನದಲ್ಲಿ ನೆಟ್ಟು ಬೆಳೆಸುವ ಗಿಡಗಳಿಂದ ಪ್ರಕೃತಿಯ ಪ್ರಯೋಜನವನ್ನು ಪಡೆದು ಎಲ್ಲರಿಗೂ ಒಳಿತಾಗುವಂತಾಗಲಿ” ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ನಿರ್ದೇಶಕರಾದ ಶ್ರೀ ಅಚ್ಯುತ ಪ್ರಭು, ಸದಸ್ಯರಾದ ರವಿ ಮುಂಗ್ಲಿ ಮನೆ, ಊರ ಹಿರಿಯರು, ಗ್ರಾಮಸ್ಥರು, ಸಂಸ್ಥೆಯ ಅಧ್ಯಾಪಕ ವೃಂದದವರು ಹಲವಾರು ಹಣ್ಣಿನ ಹಾಗೂ ಔಷಧೀಯ ಸಸ್ಯಗಳನ್ನು ನೆಟ್ಟರು. ಗ್ರಾಮದ ಹಿರಿಯರಾದ ಶ್ರೀ ಆನಂದ ಗೌಡ ಇವರು ಈ ಕಾರ್ಯಕ್ರಮವನ್ನು ಶ್ಲಾಘಿಸಿ ಔಷಧೀಯ ವನದ ಪೋಷಣೆ ಹಾಗೂ ನಿರ್ವಹಣೆಯನ್ನು ಕೈಗೊಳ್ಳುವುದಾಗಿ ತಿಳಿಸಿ ಎಲ್ಲರನ್ನು ಅಭಿನಂದಿಸಿದರು.