ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2023-2024 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 09-09-2023 ರಂದು ನಡೆಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಅದ್ಯಕ್ಷರು ಪ್ರೋ. ಶ್ರೀಪತಿ ಕಲ್ಲೂರಾಯ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ತಿಳಿದುಕೊಂಡು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಹೊಸತನವನ್ನು ತರುವ ಆಸಕ್ತಿಯನ್ನು ಹೊಂದಬೇಕು. ವೈಯುಕ್ತಿಕವಾಗಿ, ಕೌಟುಂಬಿಕವಾಗಿ, ಸಾರ್ವಜನಿಕವಾಗಿ ಜವಾಬ್ದಾರಿಗಳನ್ನ ಅರಿತುಕೊಂಡು ಬದುಕಿನಲ್ಲಿ ಗುರುತಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಅಭಿವೃದ್ಧಿಗೆ ನಾಂದಿಯಾಗಲಿ” ಎಂದು ಶುಭ ಹಾರೈಸಿದರು.
ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಾತನಾಡುತ್ತಾ “ಜೊತೆ ಜೊತೆಯಾಗಿ ಕೆಲಸವನ್ನು ಮಾಡಿದಲ್ಲಿ ಜೀವನದಲ್ಲಿ ಗೆಲುವನ್ನು ಸಾಧಿಸಬಹುದು. ಸಂಘಟಿತರಾಗಿ ಕೆಲಸವನ್ನು ಮಾಡಿ” ಎಂದು ಹಾರೈಸಿದರು.
ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮುಖೇಶ್ ಪೆರ್ವೋಡಿ, ಕೀರ್ತನ್, ದಿಗಂತ್ ಶೆಟ್ಟಿ, ಧಿರೇನ್, ಚರಣ್ ಆಚಾರ್ಯ ಹಾಗೂ ಶೃತಿ ಇವರಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳಿಧರ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ಸಂಸ್ಥೆಯ ಗೌರವಕ್ಕೆ ಚ್ಯುತಿಬಾರದಂತೆ ನಡೆಯುತ್ತೇವೆ ಎಂದು ಮಾತು ಕೊಟ್ಟಂತೆ ನಡೆದು ಸಂಸ್ಥೆಯ ಅಭಿವೃಧ್ದಿಗೆ ಶ್ರಮಿಸುವವರಾಗಿ” ಎಂದು ನುಡಿದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಜಿಯಾದ ನರಸಿಂಹ ಪೈ, ಸದಸ್ಯರುಗಳಾದ ಈಶ್ವರಚಂದ್ರ, ರವಿ ಮುಂಗ್ಲಿಮನೆ, ಜಯಂತಿ ನಾಯಕ್, ಉಷಾ ಮುಳಿಯ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಶೀಮತಿ ಪುಷ್ಪಾ ಬಿ. ಎನ್. ವಂದನಾರ್ಪಣೆ ಗೈದರು. ವಿದ್ಯಾರ್ಥಿಗಳಾದ ಶೃತಿ ತಂಡದವರು ಪ್ರಾರ್ಥಿಸಿದರು,ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ನಿರೂಪಣೆಯನ್ನು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ಇವರು ನೆರವೇರಿಸಿದರು.