News and Events
ಆಟಿ ಉತ್ಸವ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಟಿ ಉತ್ಸವವನ್ನು ವಿದ್ಯಾರ್ಥಿಗಳು ಸಂಭ್ರಮದಿಂದ ಆಚರಿಸಿದರು. ಈ ಕಾರ್ಯಕ್ರಮವನ್ನು ಸಂಪ್ರಾದಾಯಿಕ ರೀತಿಯಲ್ಲಿ ಉದ್ಘಾಟಿಸಿದ ತುಳು ಅಕಾಡಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್‌ಸಾರ್ ಮಾತನಾಡುತ್ತಾ, ಆಟಿ ತಿಂಗಳ ಪದ್ಧತಿಗಳನ್ನು ವಿವರಿಸುತ್ತಾ ಕಷ್ಟದ ತಿಂಗಳಾದ ಆಟಿ ತಿಂಗಳನ್ನು ಉತ್ಸವವೆಂಬಂತೆ ಆಚರಿಸಲಾಗುತ್ತಿದೆ. ಓಂಕಾರದ ಮೂಲಕ ಜಗತ್ತಿಗೆ ತಾಕತ್ತನ್ನು ತೋರಿಸಿಕೊಟ್ಟು ಭಾರತ ಎಂಬ ಹೆಸರಿನಿಂದ ಕರೆಯಲ್ಪಡುವ ನಮ್ಮ ದೇಶದಲ್ಲಿ ಸ್ವಾಸ್ಥ್ಯ ಸಮಾಜ, ಸ್ವಸ್ಥ ಮನಸ್ಸು ನಿರ್ಮಾಣವಾಗಬೇಕಾದರೆ ದುಶ್ಚಟಮುಕ್ತವಾದ ದುಕು ನಮ್ಮದಾಗಬೇಕು. ನಿಮ್ಮನ್ನು ನೀವು ಶಚಿ ಮಾಡಿಕೊಂಡಾಗ ಇಡೀ ದೇಶವೇ
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಸಂಸ್ಥೆಯಾದ ’TAFE-EPD’ ವತಿಯಿಂದ ವಿವೇಕಾನಂದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್‌ಗಳಾದ ಕೆವಿಜಿ ಪಾಲಿಟೆಕ್ನಿಕ್ ಸುಳ್ಯ, PA ಪಾಲಿಟೆಕ್ನಿಕ್, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ವಿವೇಕಾನಂದ ಪದವಿ ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜುಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 100 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ’TAFE-EPD’ ಯ ಹೆಚ್.ಆರ್. ಅಡ್ಮಿನ್
ಸ್ವಯಂಪ್ರೇರಿತ ರಕ್ತದಾನ ಶಿಬಿರ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಯುವ ರೆಡ್‌ಕ್ರಾಸ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಇದರ ಸಹಯೋಗದಲ್ಲಿ ದಿನಾಂಕ 15-7-2022 ರಂದು ಸುಮಾರು 70 ವಿದ್ಯಾರ್ಥಿಗಳಿಂದ ಸ್ವಯಂಪ್ರೇರಿತ ರಕ್ತದಾನ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ನಿರ್ದೇಶಕರಾದ ಉಷಾ ಭಟ್ ಮುಳಿಯ ಮಾತನಾಡುತ್ತಾ, ರಕ್ತದಾನ ಅತೀ ದೊಡ್ಡ ದಾನ ಹಾಗೂ ಅತೀ ಶ್ರೇಷ್ಠ ದಾನ. ರಕ್ತದಾನ ಮಾಡಿದ ಎಲ್ಲರಿಗೂ ಶುಭವಾಗಲಿ
ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವ
ಆಡಳಿತ ಮಂಡಳಿ, ಶಿಕ್ಷಕ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಯ 4 ಸ್ಥಂಭಗಳಿದ್ದಂತೆ -ಪ್ರೊ. ವಿ.ಜಿ.ಭಟ್ ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಗಣಪತಿ ಹೋಮ ಹಾಗೂ ಸರಸ್ವತಿ ಆರಾಧನ ಕಾರ್ಯಕ್ರಮದೊಂದಿಗೆ ಜುಲೈ 11 ರಂದು ನಡೆಸಲಾಯಿತು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೇಶವಸಂಕಲ್ಪ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಭಾರತಮಾತೆಗೆ ಪುಷ್ಪಾರ್ಚನೆ ಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ
ವಿಶ್ವ ಯೋಗ ದಿನಾಚರಣೆ
ವಿಶ್ವಯೋಗ ದಿನದಂದು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿಯವರು ಭಾಗವಹಿಸುತ್ತಾ ಯೋಗದಿಂದ ಆರೋಗ್ಯ. ಯೋಗವು ನಮ್ಮನ್ನು ನಾವೇ ತಿಳಿದುಕೊಳ್ಳುವ ಸಾಧನ. ಆದ್ದರಿಂದ ಎಲ್ಲರೂ ಯೋಗಾಭ್ಯಾಸವನ್ನು ನಿತ್ಯವೂ ಮಾಡಿ ಸದೃಢರಾಗಿ ಎಂದು ಹಿತವಚನ ನುಡಿದರು. ಈ ಕಾರ್‍ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಈಶ್ವರಚಂದ್ರ ಭಾಗವಹಿಸಿದ್ದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ ಎಸ್. ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಯೋಗ ದಿನದ ಮಹತ್ವವನ್ನು ತಿಳಿಸಿ
ವಿವೇಕ ವಿಚಾರ ವಿನಿಮಯ : 3ನೇ ಸರಣಿ – ವ್ಯಕ್ತಿತ್ವ ವಿಕಸನದಲ್ಲಿ ಭಾರತೀಯ ಕಲೆಯ ಪಾತ್ರ
ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ, ಕರ್ನಾಟಕ ಪ್ರಾಂತ ಇದರ ಆಶ್ರಯದಲ್ಲಿ, ಭಾರತೀಯ ಜ್ಞಾನ ಪರಂಪರೆಯ ಕುರಿತು ’ವಿವೇಕ ವಿಕಾಸ ಉಪನ್ಯಾಸ ಮಾಲಿಕೆ’ ಸರಣಿಯ ಮೂರನೇ ಕಾರ್ಯಕ್ರಮ ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಶೋಭಿತಾ ಸತೀಶ್ ಅವರು ವ್ಯಕ್ತಿತ್ವ ವಿಕಸನದಲ್ಲಿ ಭಾರತೀಯ ಕಲೆಯ ಪಾತ್ರ ಎಂಬ ವಿಷಯದಲ್ಲಿ ಮಾತನಾಡುತ್ತಾ, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಶಿಕ್ಷಣದ ಬಹು ಮುಖ್ಯ ಉದ್ದೇಶ. ವ್ಯಕ್ತಿತ್ವ ಎಂದರೆ ಒಬ್ಬ ವ್ಯಕ್ತಿಯನ್ನು ಅವನ ಗುಣ ವಿಶೇಷಗಳಿಂದ
ವಿದ್ಯಾರ್ಥಿಗಳಿಂದ ನೂತನ ಆವಿಷ್ಕಾರಗಳ ಪ್ರದರ್ಶನ
ವಿವೇಕಾನಂದ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಿಂದ ವಿನೂತನ ತಾಂತ್ರಿಕ ಆವಿಷ್ಕಾರಗಳ ಪ್ರೆಯೋಗ ಹಾಗೂ ಪ್ರದರ್ಶನ ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ಈ ಕಾರ್‍ಯಕ್ರಮದಲ್ಲಿ ಸುಮಾರು ೫ಕ್ಕೂ ಮಿಕ್ಕಿ ಹೊಸ ಬಗೆಯ ತಾಂತ್ರಿಕ ಆವಿಷ್ಕಾರಗಳ ಪ್ರದರ್ಶನ ಮಾಡಲಾಯಿತು. ಇವುಗಳಲ್ಲಿ ಪ್ರಮುಖವಾಗಿ- 1. ’ಸೆಲ್ಫ್ ಬ್ಯಾಲೆನ್ಸಿಂಗ್ ರೋಬೋಟ್’: ಹೆಚ್ಚಿನ ರೋಬೋಟ್ ಸರ್ಕ್ಯೂಟ್‌ಗಳು 4 ಚಕ್ರದಿಂದ ಚಲಿಸುತ್ತವೆ. ಆದರೆ ಇದರಲ್ಲಿ ೨ ಚಕ್ರಗಳು ಮಾತ್ರ ಇವೆ. ಇದನ್ನು ಇಂಡಸ್ಟ್ರಿಗಳಲ್ಲಿ ಸಾಮಾಗ್ರಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಲು
ಗ್ರೀಸ್ ಮಂಕಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳ ಸಾಧನೆ
ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 26-05-2022 ರಂದು ನಡೆದ ಗ್ರೀಸ್ ಮಂಕಿ ಎಂಬ ವಿಷಯದಲ್ಲಿ ಆಟೋಮೋಬೈಲ್ ಇಂಡಸ್ಟ್ರಿಯವರು ಒಂದು ಟಿಕ್ನಿಕಲ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದರು. ಕರ್ನಾಟಕದ ವಿವಿಧ ಪಾಲಿಟೆಕ್ನಿಕ್‌ಗಳ ಸುಮಾರು 33 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಸ್ಪರ್ಧೆಯನ್ನು ಮೆಕ್ಯಾನಿಕಲ್ ಹಾಗೂ ಆಟೋಮೋಬೈಲ್ ವಿದ್ಯಾರ್ಥಿಗಳಿಗೆ ಮಾತ್ರ ಆಯೋಜಿಸಲಾಗಿತ್ತು. ಒಂದು ತಂಡದಲ್ಲಿ ಕೇವಲ 2 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿತ್ತು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನ 5 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ದ್ವೀತಿಯ
ನೂತನ ಪ್ರಾಂಶುಪಾಲರಾಗಿ ಶ್ರೀ ಚಂದ್ರಕುಮಾರ್
ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಪ್ರಾಂಶುಪಾಲರಾಗಿದ್ದ ಗೋಪಿನಾಥ ಶೆಟ್ಟಿಯವು ನಿವೃತ್ತಿಗೊಂಡ ಹಿನ್ನಲೆಯಲ್ಲಿ ನೂತನ ಪ್ರಭಾರ ಪ್ರಾಂಶುಪಾಲರಾಗಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಶ್ರೀ ಚಂದ್ರಕುಮಾರ್ ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯ್ಕೆ ಮಾಡಿರುತ್ತದೆ. ಇವರು ತಾರೀಕು 1-6-2022 ರಂದು ಪಾಚಾರ್ಯರಾಗಿ ನಿಯುಕ್ತಿಗೊಂಡರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿಗಳಾದ ಕೃಷ್ಣ ಭಟ್ ಕೊಂಕೋಡಿ, ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರುಗಳಾದ ರವಿ ಮುಂಗ್ಲಿಮನೆ, ನವೀನ ಕೈಕಾರ
ಸೇವಾ ನಿವೃತ್ತಿ
ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1987 ಆಗಸ್ಟ್ 13 ರಂದು ಉಪನ್ಯಾಸಕರಾಗಿ ಸೇರಿ 1990 ನೇ ಜನವರಿಯಲ್ಲಿ ಪ್ರಾಚಾರ್ಯರಾಗಿ ಬಡ್ತಿ ಹೊಂದಿ 32 ವರ್ಷಗಳ ದಕ್ಷ ಆಡಳಿತ ಮತ್ತು ಸುದೀರ್ಘ ಸೇವೆಯನ್ನು ಸಲ್ಲಿಸಿ ವಿವೇಕಾನಂದ ಪಾಲಿಟೆಕ್ನಿಕ್‌ನ್ನು ರಾಜ್ಯದ ಮಾದರಿ ಪಾಲಿಟೆಕ್ನಿಕ್ ಆಗಿ ರೂಪುಗೊಳ್ಳುವಲ್ಲಿ ಶ್ರಮಿಸಿರುವ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿಯವರು ದಿನಾಂಕ 31-5-2022 ರಂದು ತಮ್ಮ ವೃತ್ತಿ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. ಇವರ ಮುಂದಿನ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು