ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ಹಾಗೂ ವಕೀಲರ ಸಂಘ (ರಿ). ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ “ಮಾದಕವ್ಯಸನ ಹಾಗೂ ಸಿಗರೇಟು ಉತ್ಪನ್ನಗಳ ಕಾಯಿದೆ” ಹಾಗೂ “ವಿಶ್ವಭೂದಿನ”ದ ಅಂಗವಾಗಿ ಒಂದು ದಿನದ ಕಾನೂನು ಮಾಹಿತಿ ಕಾರ್ಯಾಗಾರವನ್ನು ದಿನಾಂಕ ೧೯/೪/೨೦೨೩ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ. ಮನೋಹರ್. ಕೆ. ವಿ., ಅಧ್ಯಕ್ಷರು, ವಕೀಲರ ಸಂಘ(ರಿ.) ಪುತ್ತೂರು. ಇವರು ಮಾತನಾಡುತ್ತಾ “ಹದಿಹರೆಯದಲ್ಲಿ ವ್ಯಸನಿಗಳಾಗುವುದು ಬಹಳ ಸುಲಭ. ಈ ಹಂತದಲ್ಲಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಿದಲ್ಲಿ ಜೀವನದಲ್ಲಿ ಬರುವ ಅನೇಕ ತೊಂದರೆಗಳನ್ನು ಹೋಗಲಾಡಿಸಬಹುದು”. ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಯಾದ ಶ್ರೀ. ಬಿ. ನರಸಿಂಹಪ್ರಸಾದ
ವಕೀಲರು, ಪುತ್ತೂರು., ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಸಾಮಜಿಕ ಅರಿವು, ಜವಾಬ್ದಾರಿಯೂ ಇರಬೇಕು. ಮಾದಕ ದ್ರವ್ಯಗಳು, ಅವುಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿ ನಾವೆಲ್ಲೂರು ಸಮಾಜವನ್ನು ಜಾಗೃತಗೊಳಿಸೋಣ” ಎಂದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ. ಮುರಳೀಧರ್. ಯಸ್. ಸ್ವಾಗತಿಸಿದರು
ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀಮತಿ. ಸಂಗೀತ, ಉಪನ್ಯಾಸಕಿ, ಪ್ಯಾರಾಲೀಗ್ ವಾಲೆಂಟಿಯರ್, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು., ನಡೆಸಿದರು.
ಶ್ರೀಮತಿ. ಪ್ರಮೀಳ, ಪ್ಯಾನೆಲ್ ವಕೀಲರು, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಶ್ರೀಮತಿ. ಪ್ರಿಯ. ಪಿ.ವಿ. ಪ್ಯಾನೆಲ್ ವಕೀಲರು, ತಾಲೂಕು ಕಾನೂನು ಸೇವೆಗಳ ಸಮಿತಿ ಉಪಸ್ಥಿತರಿದ್ದರು.
ಧನ್ಯವಾದ ಸಮರ್ಪಣೆಯನ್ನು ಶ್ರೀಮತಿ. ಉಷಾಕಿರಣ್. ಎಸ್. ಎಂ., ಹಿರಿಯ ಉಪನ್ಯಾಸಕಿ, ಇಲೆಕ್ಟ್ರಾನಿಕ್ಸ್ ವಿಭಾಗ, ನೆರವೇರಿಸಿದರು ಹಾಗೂ ನಿರೂಪಿಸಿದರು. ಹಿರಿಯ ಉಪನ್ಯಾಸಕರು, ವಿದ್ಯಾಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.