• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವರ್ಷಂಪ್ರತಿ ನಡೆಯುವಂತೆ ಆಯುಧ ಪೂಜಾ ಕಾರ್ಯಕ್ರಮವು ವೇದಮೂರ್ತಿ ನೂಜಿಮನೆ ರಾಮಕೃಷ್ಣ ಭಟ್ ಮಿತ್ತೂರು ಇವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ದೇವಿ ಆರಾಧನೆ, ದೇವಿಸ್ತೋತ್ರ ಪಠಣ, ಪ್ರಯೋಗಾಲಯಗಳ ಪೂಜೆ, ವಾಹನ ಪೂಜೆ ನಡೆದವು. ವಿದ್ಯಾರ್ಥಿಗಳ ನೇತೃತ್ವದಲ್ಲಿ “ಪಿಲಿಗೊಬ್ಬು” ಹಾಗೂ “ಚೆಂಡೆವಾದನ” ನಡೆದವು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರಾದ ಶ್ರೀ ರವಿಮುಂಗ್ಲಿಮನೆ, ಅಗರ್ತಬೈಲು ಕೃಷ್ಣನಾಯ್ಕ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು

Highslide for Wordpress Plugin