News and Events
ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಆಭಿಯಾನ
ಪುತ್ತೂರು: 150ನೇ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಕಾಲೇಜಿನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ಗೊಳಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ, ವಿಭಾಗ ಮುಖ್ಯಸ್ಥರು, ಎಲ್ಲಾ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿ ಸಂಘ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನೆ
21ನೇ ಶತಮಾನ ಭಾರತೀಯರ ಶತಮಾನ – ಎಸ್ ಆರ್ ರಂಗಮೂರ್ತಿ ಪುತ್ತೂರು: ವಿದ್ಯಾರ್ಥಿ ಸಂಘ ಮತ್ತು ಯುವ ರೆಡ್‌ಕ್ರಾಸ್ ಘಟಕವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್ ಆರ್ ರಂಗಮೂರ್ತಿ ಇವರು ಎಲ್ಲರೂ ನಾಯಕರಾಗಲು ಸಾದ್ಯವಿಲ್ಲ, ಆದರೆ ಭಗವಂತ ನಮಗೊಂದು ಜವಾಬ್ದಾರಿ ಕೊಟ್ಟಿರುತ್ತಾನೆ, ಅದು ಏನು ಎಂಬುದನ್ನು ತಿಳಿದುಕೊಂಡು ನಾವು ಪ್ರಮಾಣಿಕವಾಗಿ ಜೀವನ ನಡೆಸಬೇಕು. 21ನೇ ಶತಮಾನ ಭಾರತೀಯರ ಶತಮಾನ ಈಗ ಜಗತ್ತೇ ಭಾರತಕ್ಕೆ ಗೌರವ ಕೊಡುತ್ತಿದೆ. ಇಂತಹ ನಾಯಕತ್ವ ನಮಗೆ ಬೇಕಾಗಿದೆ, ಇಂತಹ ಆದರ್ಶವನ್ನು
ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ತರಬೇತಿ ಕಾರ್ಯಾಗಾರ
ಪ್ರಥಮ ಚಿಕಿತ್ಸೆ ಮೂಲಕ ಮನುಷ್ಯ ಮನುಷ್ಯನಿಗೆ ನೆರವಾಗಲಿ – ಡಾ| ರಾಮಚಂದ್ರ ಭಟ್ ಪುತ್ತೂರು: ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಎಂಬ ವಿಷಯಕ್ಕೆ ಸಂಬಂದಿಸಿದ ಒಂದು ದಿನದ ತರಬೇತಿ ಕಾರ್ಯಾಗಾರವು ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರವವನ್ನು ಇಂಡಿಯನ್ ರೆಡ್ ಕ್ರಾಸ್ ಬೆಂಗಳೂರು ಹಾಗೂ ಸೈಂಟ್ ಜಾನ್ ಅಂಬ್ಯುಲೆನ್ಸ್ ಅಸೋಸಿಯೆಸನ್ ನ್ಯೂ ಡೆಲ್ಲಿ ಇದರ ಹಿರಿಯ ತರಬೇತುದಾರರಾದ ಡಾ| ರಾಮಚಂದ್ರ ಭಟ್ ನಡೆಸಿಕೊಟ್ಟರು. ಪ್ರಥಮ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ
ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗ ಸಂದರ್ಶನ ಎದುರಿಸುವ ಕುರಿತು ಮಾಹಿತಿ ಕಾರ್ಯಗಾರ
ಪುತ್ತೂರು: ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರದ ವತಿಯಿಂದ ತೃತೀಯ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಸಂದರ್ಶನ ಎದುರಿಸುವ ಕುರಿತು ಒಂದು ದಿನದ ಮಾಹಿತಿ ಕಾರ್ಯಗಾರ ಏರ್ಪಡಿಸಲಾಯಿತು. ಈ ಕಾರ್ಯಗಾರದಲ್ಲಿ ಸಂದರ್ಶನಕ್ಕೆ ಹೊರಡುವ ಮೊದಲಿನ ತಯಾರಿ ಹಾಗೂ ಸಂದರ್ಶನ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರದ ಅಧಿಕಾರಿ ವಿವೇಕ್ ಭಂಡಾರಿ ಸವಿವರವಾಗಿ ತಿಳಿಸಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗೋಪಿನಾಥ
ತಾಂತ್ರಿಕ ಮಾಹಿತಿ ಕಾರ್ಯಗಾರ
ಪುತ್ತೂರು: ಅಸೋಸಿಯೇಷನ್ ಆಪ್ ಕನ್ಸಲ್‌ಟಿಂಗ್ ಸಿವಿಲ್ ಇಂಜಿನಿಯರ್‍ಸ್ (ಇಂಡಿಯಾ), ಮಂಗಳೂರು ವಿಭಾಗ ಮತ್ತು ರ್‍ಯಾಮ್ಕೋ ಸಿಮೆಂಟ್ ಇದರ ಸಹಕಾರದೊಂದಿಗೆ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಮಳೆ ನೀರು ಕೊಯ್ಲು ಹಾಗೂ ಮಾರ್ವೆಲ್ ಇನ್ ಸಿವಿಲ್ ಇಂಜಿನಿಯರಿಂಗ್ ಎಂಬ ವಿಷಯದ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಖ್ಯಾತ ಸಿವಿಲ್ ಇಂಜಿನಿಯರ್ ಅನಿಲ್ ಬಾಳಿಗ ಮತ್ತು ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ರಕ್ಷಿತ್ ಆರ್ ಶೆಟ್ಟಿ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ರ್‍ಯಾಮ್ಕೋ ಸಿಮೆಂಟ್ ಇಂಜಿನಿಯರ್ ಶಿವರಾಜ್
ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭೆ ಸರ್ ಎಂ. ವಿಶ್ವೇಶ್ವರಯ್ಯ – ಪ್ರಸನ್ನ ಎನ್ ಭಟ್
ಪುತ್ತೂರು: ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಯಿತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭೆ. ಕಠಿಣ ಪರಿಶ್ರಮ ಮತ್ತು ಶಿಸ್ತು ಅವರ ದ್ಯೇಯವಾಗಿತ್ತು, ಔದ್ಯೋಗಿಕರಣವೇ ದೇಶದ ಆಭಿವೃದ್ದಿಗೆ ಕಾರಣ ಎಂಬ ನಿಲುವು ಅವರಲ್ಲಿತ್ತು. ಆತ್ಮಗೌರವಕ್ಕೆ ಚ್ಯುತಿ ಬಾರದಂತೆ ಗೌರವದಿಂದ ಶಿಸ್ತಿನಿಂದ ಅವರು ಬಾಳಿದರು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ
ಪುತ್ತೂರಿನಲ್ಲಿ ಓಣಂ ಆಚರಣೆ
ಪುತ್ತೂರು: ‘ಓಣಂ’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಚಂದ್ರಕುಮಾರ್ ಅವರು ದೀಪ ಬೆಳಗಿಸಿ ಓಣಂ ಆಚರಣೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಸಿವಿಲ್ ಗುತ್ತಿಗೆದಾರರಾದ ಗೋಪಾಲ್ ಸೂರಿಕುಮೇರು ಉಪಸ್ಥಿತರಿದ್ದರು. ಈ ಹಬ್ಬವನ್ನು ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ಕಾಲೇಜಿನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರುಗಳು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.
ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ಕೆಡೆನ್ಸ್ ಡಿಸೈನ್ ಸಿಸ್ಟಮ್ ಸಂಸ್ಥೆಯು 07/09/2019 ರಂದು ಭೇಟಿ ನೀಡಿ ಕ್ಯಾಂಪಸ್ ನೇಮಕಾತಿ ನಡೆಸಿತು. ಇದರಲ್ಲಿ ಸುತ್ತಮುತ್ತಲಿನ 11 ಪಾಲಿಟೆಕ್ನಿಕ್‌ಗಳಿಂದ ಬಂದ ಇಲೆಕ್ಟ್ರೋನಿಕ್ಸ್ & ಕಮ್ಯುನಿಕೇಷನ್ ಮತ್ತು ಇಲೆಕ್ಟ್ರಿಕಲ್ & ಇಲೆಕ್ಟ್ರೋನಿಕ್ಸ್ ವಿಭಾಗದ ಅರ್ಹ 160 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಕೆಡೆನ್ಸ್ ಸಂಸ್ಥೆಯ ಅಧಿಕಾರಿ ಶ್ರೀ ವೆಂಕಟೇಶ್ ಅವರು ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟರು. ಎರಡು ಸುತ್ತಿನ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಂತರ ಮೌಖಿಕ ಸಂದರ್ಶನ ನಡೆಸಲಾಯಿತು. ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ
ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಈ ಕೆಳಗಿನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ತೃತೀಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಆಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ತೃತೀಯ ಮೆಕ್ಯಾನಿಕಲ್ ವಿಭಾಗದ ಆನಂದ ರಾಜ್, ಸಹಕಾರ್ಯದರ್ಶಿಯಾಗಿ ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ರಂಜಿತ್ ಪಿ.ವಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಸಿವಿಲ್ ಇಂಜಿನಿಯರಿಂಗ್‌ನ ನವನೀತ್ ಕೆ, ಆಯುಧ ಪೂಜಾ ಕಾರ್ಯದರ್ಶಿಯಾಗಿ ತೃತೀಯ ಅಟೋಮೊಬೈಲ್ ಇಂಜಿನಿಯರಿಂಗ್‌ನ ಅಕ್ಷಯ್ ಕುಮಾರ್, ವಿದ್ಯಾರ್ಥಿನಿಯರ ಪ್ರತಿನಿಧಿಯಾಗಿ ತೃತೀಯ ಕಂಪ್ಯೂಟರ್ ಸೈನ್ಸ್‌ನ ಪಲ್ಲವಿ ಬಿ. ಜೆ. ಮತ್ತು ಕ್ರೀಡಾ
ರಕ್ಷಾ ಬಂಧನ ಕಾರ್ಯಕ್ರಮ
ಪುತ್ತೂರು: ರಕ್ಷಾ ಬಂಧನ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಕಾರ್ಯವಾಹ ಶ್ರೀ ಚಂದ್ರಶೇಖರ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡುತ್ತಾ ರಕ್ಷಾ ಬಂಧನ ಉತ್ಸವವನ್ನು ಆಚರಣೆ ಮಾಡುವುದು ಕೇವಲ ರಕ್ಷೆಯನ್ನು ಕಟ್ಟಲು ಮಾತ್ರವಲ್ಲ, ರಕ್ಷೆ ಕಟ್ಟುವುದರೊಂದಿಗೆ ಪರಸ್ಪರ ಪರಿಚಯ ವಿನಿಮಯವನ್ನು ಮಾಡಿಕೊಳ್ಳುವುದು ಬಹುಮುಖ್ಯ. ಹಿಂದುತ್ವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗಳನ್ನು ಒಳಗೊಂಡಿರುವ ಜೀವನ ಶೈಲಿಯಾಗಿದೆ ಹಾಗಾಗಿ ವಿದ್ಯಾರ್ಥಿಗಳು ಭೇದ ಭಾವ ಮರೆತು ಎಲ್ಲರೂ ಒಂದು ಎಂಬ ಭಾವನೆಯೊಂದಿಗೆ