ಪುತ್ತೂರು: ರಕ್ಷಾ ಬಂಧನ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಕಾರ್ಯವಾಹ ಶ್ರೀ ಚಂದ್ರಶೇಖರ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡುತ್ತಾ ರಕ್ಷಾ ಬಂಧನ ಉತ್ಸವವನ್ನು ಆಚರಣೆ ಮಾಡುವುದು ಕೇವಲ ರಕ್ಷೆಯನ್ನು ಕಟ್ಟಲು ಮಾತ್ರವಲ್ಲ, ರಕ್ಷೆ ಕಟ್ಟುವುದರೊಂದಿಗೆ ಪರಸ್ಪರ ಪರಿಚಯ ವಿನಿಮಯವನ್ನು ಮಾಡಿಕೊಳ್ಳುವುದು ಬಹುಮುಖ್ಯ.
ಹಿಂದುತ್ವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗಳನ್ನು ಒಳಗೊಂಡಿರುವ ಜೀವನ ಶೈಲಿಯಾಗಿದೆ ಹಾಗಾಗಿ ವಿದ್ಯಾರ್ಥಿಗಳು ಭೇದ ಭಾವ ಮರೆತು ಎಲ್ಲರೂ ಒಂದು ಎಂಬ ಭಾವನೆಯೊಂದಿಗೆ ಬಾಳುವ ಸಂಕಲ್ಪ ಮಾಡಬೇಕಿದೆ. ನೀವೆಲ್ಲರೂ ತರುಣರು, ಈ ತಾರುಣ್ಯದ ದಿವಸಗಳನ್ನು ಸಮಾಜಕ್ಕಾಗಿ, ದೇಶಕ್ಕಾಗಿ ಮುಡಿಪಾಗಿಸುವ ಅಗತ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಉಪಸ್ಥಿತರಿದ್ದರು. ವಿವೇಕಾನಂದ ಪಾಲಿಟೆಕ್ನಿಕ್‌ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.