News and Events
Seminar on AI & ML
A Technical Seminar on AI & ML by Dr. Govindaraj of Vivekananda College of Engineering and Technology was held on 26/09/2024 for final year students of Electronics and Communication.
Technical Seminar by Codelab Systems, Mangalore
A Technical Seminar on Full Stack Development and Industrial Trends was held on 25/09/2024 for final year Computer Science students of Vivekananda Polytechnic. Resource persons Mr. Prithviraj and Mr. Jezil from Codelab Systems, Mangalore, exposed the students to current trends in IT Industry and scope for Full Stack Development.
Industrial Visit to Satvam – Hardik Herbals
Industrial visit to Hardik Herbals – Satvam factory by 5th Sem CS students of Vivekananda Polytechnic, Puttur on 20/09/2024
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ “ರಕ್ತದಾನ ಶಿಬಿರ”.
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ದಿನಾಂಕ 11-9-2024ರ ಬುಧವಾರ ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ “ಯುವ ರೆಡ್ ಕ್ರಾಸ್ ಘಟಕ ವಿವೇಕಾನಂದ ಪಾಲಿಟೆಕ್ನಿಕ್” ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ ನೆರವೇರಿಸಿ “ರಕ್ತದ ಅಗತ್ಯವಿದ್ದಾಗ ರಕ್ತದಾನ ಮಾಡಿದರೆ ಅದನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡುವಲ್ಲಿ ಸಹಾಯವಾಗುತ್ತದೆ. ಇದೊಂದು ಉತ್ತಮ ಕಾರ್ಯ” ಎಂದು
Industrial Visit to Bindu Factory
Industrial Visit to Bindu Factory, Narimogaru by 5th Sem EC students of Vivekananda Polytechnic, Puttur on 11/09/2024.
Industrial Visit to Robotics Lab
Industrial Visit to Robotics Lab at ITI, Narimogaru by 5th sem EC students of Vivekananda Polytechnic, Puttur on 27/08/2024
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಆಚರಣೆ.
ಪುತ್ತೂರು : ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ದಿನಾಂಕ 15-08-2024 ರಂದು 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿಮನೆ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ “ದೇಶದ್ರೋಹವೆಸಗುವ ವೈರಿಗಳನ್ನು ಎದುರಿಸುವ ಧೈರ್ಯ ನಿಮಗೆ ಬರಲಿ ಎಂದು ನುಡಿದು ಶುಭಹಾರೈಸಿದರು. ಈ ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ್ ಎಸ್. ಉಪಸ್ಥಿತಿಯಲ್ಲಿ ಆಯೊಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಶಿಕ್ಷಕ-ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವಿವೇಕಾನಂದ ಸಮೂಹ ಸಂಸ್ಥೆಗಳ ಮೈದಾನದಲ್ಲೂ ಡಾ. ಪ್ರಭಾಕರ ಭಟ್, ಕಲ್ಲಡ್ಕ ಇವರಿಂದ ಧ್ವಜಾರೋಹಣ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಆಟಿದ ಕೂಟ ಹಾಗೂ ಸಾಂಪ್ರದಾಯಿಕ ದಿನದ ಆಚರಣೆ.
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ದಿನಾಂಕ 13-08-2024ರಂದು ಆಟಿದ ಕೂಟ ಹಾಗೂ ಸಾಂಪ್ರದಾಯಿಕ ದಿನದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟನೆಗೊಂಡು ಪ್ರಾರಂಭವಾದ ಈ ಕಾರ್ಯಕ್ರಮದ ಉದ್ಘಾಟಕರಾದ ಶಶಾಂಕ ನೆಲ್ಲಿತ್ತಾಯ, ಮಧ್ಯಸ್ಥರು, ಮಾತನಾಡುತ್ತಾ “ಹಿರಿಯರು ಬಾಳಿ ಬದುಕಿದ ದಿನದ ಅನಿವಾರ್ಯತೆಯನ್ನು ತಿಳಿಸುವ ತಿಂಗಳು ಆಟಿ. ನಮ್ಮ ಹಿರಿಯರು ಕಷ್ಟದ ಕಾಲದಲ್ಲಿ ಬದುಕು ಕಳೆದ ನೆನಪನ್ನು ಈ ಸಂದರ್ಭದಲ್ಲಿ ಮಾಡಿಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಮುಂದಿನ ಯುವಪೀಳಿಗೆಗೆ ತಿಳಿಸಿ ಉಳಿಸುವ ಕಾರ್ಯ ನಾವು ಮಡೋಣ. ಎಲ್ಲರಿಗೂ ಶುಭವಾಗಲಿ” ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊನ್ನಪ್ಪ ಕಲ್ಲೇಗ-ತುಳು ಸಾಹಿತಿ; ಅಧ್ಯಕ್ಷರು, ತುಡರ್ ಸಮಿತಿ ಶೇವಿರೆ ಕಲ್ಲೇಗ; ಮಾತನಾಡುತ್ತಾ “ಆಟಿ ತಿಂಗಳಲ್ಲಿ ಉಪಯೋಗಿಸುವ ಆಹಾರ ಪದಾರ್ಥಗಳು ಅರೋಗ್ಯ ಹಾಗೂ ಜೀರ್ಣಕ್ರಿಯೆ ವೃದ್ದಿಮಾಡಿ, ಜಠರ ಶುದ್ಧೀಕರಣ ಮಾಡುವ ತಿನಿಸುಗಳಾಗಿವೆ. ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಮೂಢನಂಬಿಕೆಗಳನ್ನು ಮೂಲನಂಬಿಕೆಗಳೆಂದು ಪರಿಗಣಿಸಿ ಉಳಿಸಿ ಬೆಳೆಸುವ ಕಾರ್ಯ ಮಡೋಣ, ನಮ್ಮ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ” ಎಂದು ಹೇಳಿ ಎಲ್ಲರಿಗೂ ಶುಭಹಾರೈಸಿದರು. ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ “ನಮ್ಮ ಸಂಸ್ಕೃತಿಯನ್ನು ಗುರುತಿಸಿ ಉಳಿಸಿಕೊಂಡು ಸಮಾಜದಲ್ಲಿ ಬಾಳಿ ಬದುಕಬೇಕು” ಎಂದು ಶುಭ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿಮನೆ, ಈಶ್ವರಚಂದ್ರ, ಅಚ್ಯುತ ಪ್ರಭು, ಸನತ್ ಕುಮಾರ್ ರೈ, ಶಿವಕುಮಾರ್ ಹಾಗೂ ಪ್ರಾಂಶುಪಾಲರಾದ ಮುರಳೀಧರ್ ಎಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರವಿರಾಮ.ಎಸ್ ಮತ್ತು ಸುಧಾಕುಮಾರಿ, ಉಪನ್ಯಾಸಕ ವೃಂದ,ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ನಾಯಕ ಅಂಶಿಕ್ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಹಾಗೂ ವಿದ್ಯಾರ್ಥಿ ಕಾರ್ಯದರ್ಶಿ ಹೃತ್ವಿಕ್ ಎ.ಸಿ. ವಂದನಾರ್ಪಣೆಗೈದರು. ಶೃಜನ್ಯ ತಂಡದವರು ಪ್ರಾರ್ಥಿಸಿದರು. ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಜ್ಯೋತಿಕಾ, ಶ್ರೀಮಾನಸ, ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನಲ್ಲಿ ಆಟಿಕೂಟದ ಪ್ರಯುಕ್ತ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ.
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಗಾಟನಾ ಕಾರ್ಯಕ್ರಮವು ದಿನಾಂಕ 10-08-2024 ರಂದು ನಡೆಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ರೈ.ಪಿ. ಇವರು ಮಾತನಾಡುತ್ತಾ “ಇಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದ್ದಾರೆ. ವಿಶ್ವವನ್ನು ಉಳಿಸಬೇಕಾದರೆ ಮೊದಲು ಭಾರತ ಉಳಿಬೇಕು ಅದಕ್ಕಾಗಿ ಭಾರತದ ಮೌಲ್ಯಗಳನ್ನು ಸಂರಕ್ಷಣೆ ಮಾಡಬೇಕು, ನಾಯಕನಿಗೆ ಸರಿಯಾದ ದಿಕ್ಕು ಸಿಕ್ಕಿದಾಗ ಸಮಾಜವನ್ನು ಸರಿಯಾಗಿ
ರೀಲ್ಸ್ ಸ್ಪರ್ಧೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಗೆ ತೃತೀಯ ಬಹುಮಾನ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಛೇರಿ ಮಂಗಳೂರು ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಿದ ತಾಲೂಕು ಮಟ್ಟದ “ವಿಶ್ವ ಜನಸಂಖ್ಯಾ ದಿನಾಚರಣೆ” 2024-2025 ಕಾರ್ಯಕ್ರಮಕ್ಕೆ ಸಂಬಧಿಸಿದಂತೆ ನಡೆಸಿದ ರೀಲ್ಸ್ ಸ್ಪರ್ಧೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರತೀಶ್ ಮತ್ತು ಸೃಜನ್ ತೃತೀಯ ಬಹುಮಾನ ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.