News and Events
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ
“ಸೋಲನ್ನು ಕೂಡಾ ಗೆಲುವಿನ ಮೆಟ್ಟಲಾಗಿಸಿ ಮುನ್ನಡೆಯುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು”- ಶ್ರೀಮತಿ ವಸಂತಿ.ಕೆ ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ದಿನಾಂಕ 08-07-2024 ರಂದು ಗಣಪತಿಹೋಮ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು. ಪೂಜಾ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರಾದ ಶ್ರೀಮತಿ ವಸಂತಿ.ಕೆ. ರವರು ಮಾತನಾಡುತ್ತಾ “ವಿದ್ಯೆ ಎಂಬುದು ಬೇರೆ ಯಾರಿಗೂ ನಮ್ಮಿಂದ ಕಸಿದುಕೊಳ್ಳಲಾಗದಂತಹ ಅಮೂಲ್ಯ ಸಂಪತ್ತು. ಸೋಲನ್ನು ಕೂಡಾ ಗೆಲುವಿನ ಮೆಟ್ಟಲಾಗಿಸಿ ಮುನ್ನಡೆಯುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು, ಸಂಶೋಧನೆಗೆ ನಮ್ಮನ್ನು ನಾವು ಪ್ರೇರೇಪಿಸಿಕೊಳ್ಳಬೇಕು. ನಿಮ್ಮ ಮುಂದಿನ ಅಧ್ಯಯನ ಹೆಚ್ಚು ಪರಿಣಾಮಕಾರಿಯಾಗಿ ಉಜ್ವಲ ಭವಿಷ್ಯವನ್ನು ರೂಪಿಸುವಂತಾಗಲಿ” ಎಂದು ಹರಸಿ
Technical Seminar
Technical seminar under Neev Abhiyan by Engineers of Ambuja Cement at Vivekananda Polytechnic, Puttur for our students and contractors on 04/07/2024. Topics : Cement manufacturing, Reasons for failure of structure, Methods to be followed during construction.
ಶ್ರದ್ಧಾಂಜಲಿ
ಪುತ್ತೂರು:ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1998 ರಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎಲ್.ಎನ್. ಕುಡೂರು (66)ರವರು ದಿನಾಂಕ 30/06/2024 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ವಿಟ್ಲದ ಜೆ.ಸಿ. ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದು, ವಿಠಲ ಶೈಕ್ಷಣಿಕ ಸಂಸ್ಥೆಗಳ ಸಂಚಾಲಕರಾಗಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾಗಿಯೂ, ಜೆಸಿಐ ಇಂಡಿಯಾದ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ. ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರ ಬಗ್ಗೆ
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಶ್ರೀ ಧರಣಪ್ಪ ಗೌಡರಿಗೆ ಸೇವಾ ನಿವೃತ್ತಿ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1992 ರಿಂದ 2024 ರವರೆಗೆ ಪರಿಚಾರಕರಾಗಿ 32 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಶ್ರೀ ಧರಣಪ್ಪ ಗೌಡರನ್ನು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಅವರಿಗೆ ಶುಭವಿದಾಯ ಕೋರಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ ಹಾಗೂ ಸಹೋದ್ಯೋಗಿ ಬಂಧುಮಿತ್ರರು ಅವರ ನಿವೃತ್ತ ಜೀವನವು ಸುಖ ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿ ಶ್ರೀ ಮುರಳೀಧರ್.ಯಸ್
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರು ಶ್ರೀ ಚಂದ್ರಕುಮಾರ್ ರವರು ನಿವೃತ್ತಿಗೊಂಡ ಹಿನ್ನಲೆಯಲ್ಲಿ ನೂತನ ಪ್ರಭಾರ ಪ್ರಾಂಶುಪಾಲರಾಗಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳೀಧರ್.ಯಸ್. ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯ್ಕೆ ಮಾಡಿದೆ. ಇವರು ಮೇ.1 ರಂದು ಪ್ರಾಚಾರ್ಯರಾಗಿ ನಿಯುಕ್ತಿಗೊಂಡರು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್‌ನ ಪ್ರತಿನಿಧಿಯಾದ ಶ್ರೀ ವಾಮನ್ ಪೈ, ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರುಗಳಾದ ರವಿಮುಂಗ್ಲಿಮನೆ, ಈಶ್ವರಚಂದ್ರ ಹಾಗೂ
ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಂಶುಪಾಲರು ಶ್ರೀ ಚಂದ್ರಕುಮಾರ್ ಸೇವಾ ನಿವೃತ್ತಿ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಥಿತ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ಶ್ರೀ ಚಂದ್ರಕುಮಾರ್ ರವರು ನಿವೃತ್ತಿ ಹೊಂದಿದ್ದು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಅವರಿಗೆ ಶುಭವಿದಾಯ ಕೋರಿ ಶುಭ ಹಾರೈಸಿದರು. 1988 ರಂದು ಉಪನ್ಯಾಸಕರಾಗಿ ಸೇರಿ 2022ನೇ ಮೇ ತಿಂಗಳಲ್ಲಿ ಪ್ರಾಚಾರ್ಯರಾಗಿ ಬಡ್ತಿ ಹೊಂದಿ ಸುಮಾರು 36 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ,ವಿವೇಕಾನಂದ ಪಾಲಿಟೆಕ್ನಿಕ್‌ನ್ನು ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿ ಸಹಕಾರಿಯಾಗಿದ್ದರು.
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ದಿನಾಂಕ 29-04-2024 ರಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭವನ್ನು ನಡೆಸಲಾಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಯುತ ಡಾ| ಮಹೇಶ್ ಪ್ರಸನ್ನ ಮಾತನಾಡುತ್ತಾ, “ಜೀವನದಲ್ಲಿ ಯಶಸ್ಸು ಸಿಗಬೇಕಾದರೆ 5 ಅಂಶಗಳಿರಬೇಕು ಅವು ಯಾವುದೆಂದರೆ ನಮ್ಮ ನಡವಳಿಕೆ ನಮ್ಮಲ್ಲಿ ನಮಗಿರುವ ನಂಬಿಕೆ, ಸಮಯಪ್ರಜ್ಞೆ, ತಂಡದೊಂದಿಗೆ ಕೆಲಸಮಾಡುವ ಹೊಂದಾಣಿಕೆ, ನಮ್ಮಲ್ಲಿರುವ ಕೌಶಲ್ಯ ಅಭಿವೃದ್ಧಿಗೊಳಿಸುವಿಕೆ, ತನ್ಮೂಲಕ ಹೆಚ್ಚಿನ ಕೌಶಲ್ಯ ಆಭಿವೃದ್ಧಿಯಿಂದ ಬದುಕುವುದು, ಯಾವಾಗಲೂ ಒಳ್ಳೆಯದನ್ನೇ
ಮತದಾರನ ಕರ್ತವ್ಯದ ಬಗ್ಗೆ ಜಾಗೃತಿ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಇಂದು 22-03-2024ರಂದು ವಿವೇಕಾನಂದ ಇಂಗ್ಲಿಷ್ ಮಾಧ್ಯಮ (central) ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು ಚುನಾವಣಾ ಕರ್ತವ್ಯದ ಬಗ್ಗೆ ಘೋಷಣೆ ಮಾಡಿದರು. ಶಾಲೆಯ ಸ್ಕೌಟ್ಸ್ ಅಧ್ಯಾಪಕಿ ಮಾಹಿತಿ ನೀಡಿದರು. ಪಾಲಿಟೆಕ್ನಿಕ್ ವತಿಯಿಂದ ಅವರಿಗೆ ಸಿಹಿ ಹಂಚಲಾಯಿತು. ಪಾಲಿಟೆಕ್ನಿಕ್ ನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಶ್ರೀ ಗೋಪಿನಾಥ ಶೆಟ್ಟಿಯವರಿಗ ಭಾವಪೂರ್ಣ ಶ್ರದ್ಧಾಂಜಲಿ.
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1987 ರಿಂದ 1990 ರವರೆಗೆ 3 ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ 1990 ರಿಂದ 2022 ರವರೆಗೆ 32 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಹಿರಿಮೆಯನ್ನು ಎತ್ತಿಹಿಡಿದ ದಕ್ಷ, ಪ್ರಾಮಾಣಿಕ ಹಾಗೂ ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ಗೋಪಿನಾಥ ಶೆಟ್ಟಿಯವರು ಅಕಾಲಿಕವಾಗಿ ದಿನಾಂಕ 13-03-2024ರಂದು ದೈವಾಧೀನರಾದರು. ಅವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಫಾರ್ಮಸಿ ಕಾಲೇಜು ಹಾಗೂ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು. ಸಭೆಗೆ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ
ಶ್ರದ್ಧಾಂಜಲಿ
ನಮ್ಮ ನೆಚ್ಚಿನ ನಿವೃತ್ತ ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ ಅವರು ನಿಧನರಾಗಿರುತ್ತಾರೆ. ಅವರ ಆತ್ಮಕ್ಕೆ ಸಾಯುಜ್ಯ ದೊರಕಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಓಂ ಶಾಂತಿ.