ವಿವೇಕಾನಂದ ಪಾಲಿಟೆಕ್ನಿಕ್ ಗ್ರಾಮ ವಿಕಾಸ ಹಾಗು ಬನ್ನೂರು ಗ್ರಾಮ ಪಂಚಾಯತ್ ಇದರ ವತಿಯಿಂದ ಪಡ್ನೂರು ಗ್ರಾಮದಲ್ಲಿ ಶೂನ್ಯ ಕಸ ನಿರ್ವಹಣೆ ಹಾಗು ಸ್ವಚ್ಛ ಪರಿಸರ ಇದರ ಬಗ್ಗೆ ಅರಿವು ಮೂಡಿಸಲು ಮನೆ ಮನೆ ಭೇಟಿ ಕಾರ್ಯಕ್ರಮ ದಿ. 04/02/2025 ರಂದು ಹಮ್ಮಿಕೊಳ್ಳಲಾಯಿತು.
ಮನೆಯ ಕಸದಲ್ಲಿ ವಿಂಗಡಣೆ, ಹಸಿಕಸ, ಒಣ ಕಸ ವಿಷಕಾರಿ ಕಸ ಪ್ಲಾಸ್ಟಿಕ್ ಇತ್ಯಾದಿಗಳನ್ನು ವಿಂಗಡಣೆ ಮಾಡಿ ಮರು ಬಳಕೆ ಅಥವಾ decompose ಮಾಡುವಂತಹ ವಿಧಾನ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.
ಈ ಕಾರ್ಯಕ್ರಮವನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿ ಆದಂತಹ ನವೀನ್ ಭಂಡಾರಿ ಇವರು ಕರಪತ್ರ ಹಂಚುವುದರ ಮೂಲಕ ಉದ್ಘಾಟನೆ ಮಾಡಿದರು. ಇವರ ಜೊತೆಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಬನ್ನೂರು ಗ್ರಾಮ ಪಂಚಾಯತಿ ಸದಸ್ಯರು, ಆರೋಗ್ಯ ಅಧಿಕಾರಿಗಳು ಮತ್ತು ಕಾಲೇಜಿನ ವತಿಯಿಂದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಉಪನ್ಯಾಸಕರಾದ ಶ್ರೀ ವಿನ್ಯಾಸ್ ಪಿ. ಕೆ, ಆಶಾ ಕಾರ್ಯಕರ್ತರು, ಊರಿನ ಗ್ರಾಮಸ್ಥರು ಹಾಗೂ ಮೂವತ್ತು ವಿದ್ಯಾರ್ಥಿಗಳು ಭಾಗವಹಿಸಿ, ಆರು ತಂಡಗಳನ್ನ ಮಾಡಿಕೊಂಡು ಒಟ್ಟು ಇನ್ನೂರ ಇಪ್ಪತೈದು ಮನೆಗಳಿಗೆ ಭೇಟಿ ಕೊಟ್ಟು ಅರಿವು ಮೂಡಿಸಲಾಯಿತು.