ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಗ್ರಾಮವಿಕಾಸ ಸಮಿತಿ ಪಡ್ಡಾಯೂರು ಮತ್ತು ಪಡ್ನೂರು ಸ್ವಚ್ಛ ಭಾರತ ಅಭಿಯಾನದ ಸಹಯೋಗತ್ವದಲ್ಲಿ “ಶೂನ್ಯ ಕಸ ನಿರ್ವಹಣೆ” ಸ್ವಯಂ ಘೋಷಣೆ ಕಾರ್ಯಕ್ರಮ ದಿ. 24/01/2025 ರಂದು ನಡೆಯಿತು. ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಕೃಷ್ಣ ಮೂಲ್ಯ ನಿರ್ದೇಶಕರು ಜನ ಶಿಕ್ಷಣ ಟ್ರಸ್ಟ್ ಮಾತನಾಡುತ್ತಾ “ಪ್ಲಾಷ್ಟಿಕ್ ಎಷ್ಟು ಹಾನಿಕಾರಕ ಅಂತ ನಮಗೆಲ್ಲ ಗೊತ್ತಿದೆ. ಆದರೆ ಅದರ ಬಗ್ಗೆ ಶಿಸ್ತು ರೂಢಿಸುವ ಕಲ್ಚರ್ ನಮ್ಮಲ್ಲಿಲ್ಲ. ನಮ್ಮೆಲ್ಲರ ದೇಹದಲ್ಲಿ ಮೈಕ್ರೋ ಪ್ಲಾಷ್ಟಿಕ್ ಕಣಗಳು ತುಂಬಿ ಹೋಗಿದೆ. ಅದು ಕ್ಲಾಟಿಂಗ್ ಹಾಗೂ ಕ್ಯಾನ್ಸರ್ ಬರಲೂ ಕಾರಣ ಅಗ್ತದೆ ಆದ್ದರಿಂದ ಪ್ಲಾಸ್ಟಿಕ್ ನ್ನು ನಿರ್ವಹಣೆ ಮಾಡುವುದು ಅತೀ ಅಗತ್ಯ. ಇದೊಂದು ಗ್ಲೋಬಲ್ ಚಾಲೆಂಜ್ ಎಂದು ಹೇಳುತ್ತಾ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿದರು ಹಾಗೂ ಪ್ಲಾಸ್ಟಿಕ್ ಕಸದ ಸೃಷ್ಟಿಯನ್ನು ಕಡಿಮೆ ಮಾಡಬೇಕು. ಪ್ರತಿಯೊಂದು ಮನೆಯಲ್ಲೂ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ನಾವು ಮಾಡಬೇಕು” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಎನ್ ಶೀನ ಶೆಟ್ಟಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಮಾಜಿ ಓಂಬುಡ್ಸ್ ಮೆನ್ ಮಾತನಾಡುತ್ತಾ “ಅಂತರಂಗ ಬಹಿರಂಗ ಶುದ್ಧತೆ ನಮ್ಮನ್ನು ದೈವತ್ವಕ್ಕೆ ಕೊಂಡೊಯ್ಯುತ್ತದೆ. ನಾವು ಮಾಲಿನ್ಯ ಮುಕ್ತ ಭಾರತ ಕಟ್ಟಬೇಕು. ಅದಕ್ಕಾಗಿ ಮೊದಲು ನಮ್ಮ ಮನೆ, ಗ್ರಾಮ ಸ್ವಚ್ಛವಾಗಬೇಕು ಸ್ವಚ್ಛತೆಯೇ ನಮ್ಮ ಸಮೃದ್ಧಿ ಸಂಪೂರ್ಣ ಸ್ವಚ್ಛತೆ ನಮ್ಮ ಗುರಿಯಾಗಬೇಕು” ಎಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ವಹಿಸಿದ್ದರು. ಇವರು ಮಾತನಾಡುತ್ತಾ “ವಿವೇಕಾನಂದ ಪಾಲಿಟೆಕ್ನಿಕ್ ಕೂಡ ತ್ಯಾಜ್ಯ ನಿರ್ವಹಣೆಯಲ್ಲಿ ತನ್ನ ಕೈಜೋಡಿಸಿದೆ. ವಿದ್ಯಾರ್ಥಿಗಳಾದ ನೀವು ಕೂಡ ನಿಮ್ಮ ನಿಮ್ಮ ಮನೆಗಳಲ್ಲಿ ಕಸದ ನಿರ್ವಹಣೆ ಮಾಡವಲ್ಲಿ ಭಾಗಿಗಳಾಗಿ” ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ , ಪಡ್ನೂರು ಗ್ರಾಮ ವಿಕಾಸ ಸಮಿತಿಯ ಸಂಚಾಲಕರಾದ ಶ್ರೀನಿವಾಸ ಪೆರುವೋಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರವಿ ಮುಂಗ್ಲಿ ಮನೆ ಹಾಗೂ ಶ್ರೀ ಈಶ್ವರ ಚಂದ್ರ ಭಾಗವಹಿಸಿದ್ದರು. ಅತಿಥಿಗಳ ಪರಿಚಯ ಹಾಗೂ ಸ್ವಾಗತವನ್ನು ಪ್ರಾಂಶುಪಾಲರಾದ ಶ್ರೀ ಮುರಳೀಧರ್ ಯಸ್ ನೆರವೇರಿಸಿದರು. ವಿದ್ಯಾರ್ಥಿನಿಯರಾದ ಸುಜನ್ಯ ತಂಡದವರು ಪ್ರಾರ್ಥಿಸಿದರು. ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ವಿನ್ಯಾಸ್ ಧನ್ಯವಾದ ನೆರವೇರಿಸಿದರು ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಕಾರ್ಯಕ್ರಮ ನಿರೂಪಿಸಿದರು