ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ “ಸಂದರ್ಶನವನ್ನು ಎದುರಿಸುವ ಬಗ್ಗೆ ಮಾಹಿತಿ ಹಾಗೂ ಉದ್ಯಮಶೀಲತೆಯಲ್ಲಿ ಹಣಕಾಸಿನ ಹೊಂದಾಣಿಕೆ ಮತ್ತು ಯೋಜನೆ” ಗಳ ಬಗ್ಗೆ ಒಂದು ದಿನದ ಮಾಹಿತಿ ಕರ್ಯಾಗಾರವನ್ನು ನಡೆಸಲಾಯಿತು.ಈ ಕರ್ಯಕ್ರಮದಲ್ಲಿ ಮಂಗಳೂರಿನ “ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್”ನ ಮಾಲಕರಾದ ಶ್ರೀಶ.ಕೆ. ಇವರು ಸಂಪನ್ಮೂಲ ವ್ಯಕ್ತಿಯಾಗಿ ಬಂದು ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿಯನ್ನು ನೀಡಿದರು.
ಈ ಕರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಂಶುಪಾಲರು,ಶಿಕ್ಷಕವೃಂದ ಹಾಗೂ ಅಂತಿಮವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉದ್ಯೋಗ ಮಾಹಿತಿಕೇಂದ್ರದ ನಿಯೋಜನ ಅಧಿಕಾರಿಯಾದ ಶೀಮತಿ ಉಷಾಕಿರಣ್.ಎಸ್.ಎಂ. ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.