ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಮಾತನಾಡುತ್ತಾ, “ ದೇಶದ ಗತಿಯನ್ನು ಬದಲಾಯಿಸುತ್ತಿರುವ ನಮ್ಮ ಪ್ರಧಾನಿ ಮೋದಿಯವರು ಒಬ್ಬ ಯೋಗಿ. ಸ್ವಾವಲಂಬಿ ಭಾರತ ಅವರ ಕನಸು. ವಿಶ್ವಕ್ಕೇ ಬಾಧಿಸುತ್ತಿರುವ ಈ ಕೊರೋನಾ ಸಂಕಷ್ಟ ಕಾಲದಲ್ಲಿ ಆತ್ಮನಿರ್ಭರ ಭಾರತವನ್ನು ಕಟ್ಟುವುದು ನಮ್ಮ ಪ್ರಧಾನಿಯವರ ಕನಸು. ಇದಕ್ಕೆ ಪೂರಕವಾದ ಉದ್ಯೋಗ ನೈಪುಣ್ಯ ತರಬೇತಿಯು ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ನಡೆಯುತ್ತಿದೆ. 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಅನೇಕ ದೇಶಭಕ್ತರು ಹಾಗೂ ಕ್ರಾಂತಿಕಾರಿಗಳನ್ನು ನೆನಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ನಮ್ಮ ರಕ್ಷಣೆಯನ್ನು ಮಾಡುತ್ತಿರುವ ದೇಶದ ಸೈನಿಕರು ಹಾಗೂ ಹಾಗೂ ಕೊರೋನಾ ವಾರಿಯರ್ಸ್ಗೆ ನಮ್ಮ ನಮನ” ಎಂದರು.
ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯರುಗಳಾದ ಮೋಹಿನಿ ದಿವಾಕರ್, ತ್ರಿವೇಣಿ ಪೆರುವೋಡಿ, ಪ್ರಾಚಾರ್ಯರಾದ ಎಂ.ಗೋಪಿನಾಥ್ ಶೆಟ್ಟಿ, ವಿಭಾಗ ಮುಖ್ಯಸ್ಥರು, ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿ ವರ್ಗ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.