ಪುತ್ತೂರು:ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1998 ರಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಎಲ್.ಎನ್. ಕುಡೂರು (66)ರವರು ದಿನಾಂಕ 30/06/2024 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ವಿಟ್ಲದ ಜೆ.ಸಿ. ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದು, ವಿಠಲ ಶೈಕ್ಷಣಿಕ ಸಂಸ್ಥೆಗಳ ಸಂಚಾಲಕರಾಗಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾಗಿಯೂ, ಜೆಸಿಐ ಇಂಡಿಯಾದ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ. ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರ ಬಗ್ಗೆ ಆಡಳಿತಮಂಡಳಿಯವರು ಹಲವಾರು ಮಾಹಿತಿಗಳನ್ನು ಸಿಬ್ಬಂದಿವರ್ಗದವರಿಗೆ ನೀಡಿದರು. ಹಾಗೆಯೇ ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಕಾಲೇಜಿನ ಆಡಳಿತಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯರಾದ ರವಿ ಮುಂಗ್ಲಿಮನೆ, ನಿರ್ದೇಶಕರಾದ ಈಶ್ವರಚಂದ್ರ ಹಾಗೂ ಸಿಬ್ಬಂದಿವರ್ಗದವರು ಮೌನಪ್ರಾರ್ಥನೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.