ಪುತ್ತೂರು: ಪೋಳ್ಯ ಸಮೀಪ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು, ಮಂಗಳೂರು ಗ್ರಾಮ ವಿಕಾಸ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬರಿಗಾಲಿನ ಸಂತ, ದಣಿವಿರದ ಸಂಘಟಕರಾದ ವೆಂಕಟರಮಣ ಹೊಳ್ಳ ಇವರಿಗೆ ವಿವೇಕಾನಂದ ಪಾಲಿಟೆಕ್ನಿಕ್ನ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇವರು ಕಳೆದ 6-7 ತಿಂಗಳುಗಳಿಂದ ವಿವೇಕಾನಂದ ಪಾಲಿಟೆಕ್ನಿಕ್ ಪ್ರವರ್ತಿತ ಉದ್ಯೋಗ ನೈಪುಣ್ಯ ಶಿಬಿರದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಉತ್ತಮ ಸಂಘಟಕ ಹಾಗೂ ಸರಳ ವ್ಯಕ್ತಿತ್ವದ ಇವರು ಜನಾನುರಾಗಿಯಾಗಿದ್ದರು.
ಈ ಸಂತಾಪ ಸೂಚಕ ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ| ಕೃಷ ಭಟ್, ನಿರ್ದೇಶಕರಾದ ವಾಮನ ಪೈ, ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಎನ್. ಭಟ್, ಸಂಚಾಲಕರಾದ ಮಣಿಲ ಮಹಾದೇವ ಶಾಸ್ತ್ರಿ, ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಹಾಗೂ ಪಾಲಿಟೆಕ್ನಿಕ್ನ ವಿವಿಧ ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.