ಪುತ್ತೂರು: ಬೆಂಗಳೂರಿನ ’ಟಫೇ – ಇ.ಪಿ.ಡಿ. ಲಿಮಿಟೆಡ್’ ಸಂಸ್ಥೆಯು ಭೇಟಿ ನೀಡಿ ಪೂಲ್ ಕ್ಯಾಂಪಸ್ ನೇಮಕಾತಿ ನಡೆಸಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಪಿ.ಎ. ಪಾಲಿಟೆಕ್ನಿಕ್ ಮಂಗಳೂರು, ಪ್ರಸನ್ನ ಪಾಲಿಟೆಕ್ನಿಕ್ ಬೆಳ್ತಂಗಡಿ, ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ ಮೊದಲಾದ ಪಾಲಿಟೆಕ್ನಿಕ್ಗಳಿಂದ ಬಂದ ಇಲೆಕ್ಟ್ರೋನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಅರ್ಹ ೨೨೫ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಫೇ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೆಜರ್ (ಹೆಚ್.ಆರ್. ಆಡ್ಮಿನ್) ಸದಾಶಿವ ಎನ್ ಇವರು ಕಂಪೆನಿಯ ಬಗ್ಗೆ ವಿವರವಾದ ಮಾಹಿತಿ ನೀಡಿ ನೇಮಕಾತಿ ಸಂದರ್ಶನ ನಡೆಸಿದರು. ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಸಂಸ್ಥೆಯ ಉದ್ಯೋಗ ಮಾಹಿತಿ ಹಾಗೂ ತರಬೇತಿ ವಿಭಾಗದ ನಿಯೋಜನ ಅಧಿಕಾರಿಗಳಾದ ಶ್ರೀಮತಿ ಉಷಾಕಿರಣ್ ಮತ್ತು ಶ್ರೀ ಕಿರಣ್ಪಾಲ್ ಸಂಯೋಜಿಸಿದರು. ಕಾಲೇಜಿನ ಉಪನ್ಯಾಸಕರುಗಳು ಸಹಕರಿಸಿದರು.