ಪುತ್ತೂರು: ಬೆಂಗಳೂರಿನ ಕೆಡೆನ್ಸ್ ಡಿಸೈನ್ ಸಿಸ್ಟಮ್ ಸಂಸ್ಥೆಯು 07/09/2019 ರಂದು ಭೇಟಿ ನೀಡಿ ಕ್ಯಾಂಪಸ್ ನೇಮಕಾತಿ ನಡೆಸಿತು. ಇದರಲ್ಲಿ ಸುತ್ತಮುತ್ತಲಿನ 11 ಪಾಲಿಟೆಕ್ನಿಕ್ಗಳಿಂದ ಬಂದ ಇಲೆಕ್ಟ್ರೋನಿಕ್ಸ್ & ಕಮ್ಯುನಿಕೇಷನ್ ಮತ್ತು ಇಲೆಕ್ಟ್ರಿಕಲ್ & ಇಲೆಕ್ಟ್ರೋನಿಕ್ಸ್ ವಿಭಾಗದ ಅರ್ಹ 160 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಕೆಡೆನ್ಸ್ ಸಂಸ್ಥೆಯ ಅಧಿಕಾರಿ ಶ್ರೀ ವೆಂಕಟೇಶ್ ಅವರು ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟರು. ಎರಡು ಸುತ್ತಿನ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಂತರ ಮೌಖಿಕ ಸಂದರ್ಶನ ನಡೆಸಲಾಯಿತು. ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಸಂಸ್ಥೆಯ ಉಪನ್ಯಾಸಕರುಗಳಾದ ಶ್ರೀಮತಿ ಉಷಾಕಿರಣ್ ಮತ್ತು ಶ್ರೀ ಕಿರಣ್ಪಾಲ್ ಸಂಯೋಜಿಸಿದರು. ಕಾಲೇಜಿನ ಉಪನ್ಯಾಸಕರುಗಳು ಸಹಕರಿಸಿದರು.