ವಿದ್ಯಾಭಾರತಿ ಉಚ್ಛಶಿಕ್ಷಾ ಸಂಸ್ಥಾನ್ ಮತ್ತು ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಜಂಟಿಯಾಗಿ ಆಯೋಜಿಸಿರುವ “ಭಾರತ್ ಬೋಧ್ ಮಾಲಾ” ಉಪನ್ಯಾಸ ಸರಣಿಗಳ 8ನೇ ಉಪನ್ಯಾಸ 21 ಮಾರ್ಚ್ 2025, ಶುಕ್ರವಾರದಂದು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ A.V ಸಭಾಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಶೋಭಿತ ಸತೀಶ್ – ರಾಷ್ತ್ರೀಯ ಮಂತ್ರಿ, ವಿದ್ಯಾಭಾರತಿ ಉಚ್ಛಶಿಕ್ಷಾ ಸಂಸ್ಥಾನ್, ಅವರು ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತದ ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದ್ದ “ಪಂಚಕೋಶ ಶಿಕ್ಷಣ ಪದ್ಧತಿ”ಯ ಮಹತ್ವದ ಬಗ್ಗೆ ಕೂಲಂಕುಶವಾಗಿ ತಿಳಿಸಿಕೊಟ್ಟರು.
ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರವಿ ಮುಂಗ್ಲಿಮನೆ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮುರಳಿಧರ ಎಸ್ ನೆರೆದವರನ್ನು ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಶ್ರೀ ಪ್ರಶಾಂತ್ ಕೆ ವಂದನಾರ್ಪಣೆ ನೆರವೇರಿಸಿದರು. ಆಟೋಮೊಬೈಲ್ ವಿಭಾಗದ ಶ್ರೀ ಗುರುರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.