ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಭಾರತ ಮಾತಾ ಪೂಜನ ಕಾರ್ಯಕ್ರಮ ದಿ. 04/02/2025 ರಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಬೌದ್ಧಿಕ್ ನಡೆಸಿಕೊಟ್ಟ ಶ್ರೀ ಶಮಂತ್. ಕೆ. ಪಿ. – ಹಿರಿಯ ವಿದ್ಯಾರ್ಥಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಪ್ರಚಾರ ಟೋಲಿ ಹಾಗು ವಸತಿ ಕಾರ್ಯವಾಹ ಅವರು ಅಖಂಡ ಭಾರತದ ಭೂಪಟದ ಪರಿಚಯ ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದರು. ಅತಿಥಿಗಳ ಪರಿಚಯವನ್ನು ಉಪನ್ಯಾಸಕರಾದ ಶ್ರೀ ಪ್ರಶಾಂತ್. ಕೆ ನಡೆಸಿಕೊಟ್ಟರು. ಪ್ರಾಂಶುಪಾಲರಾದ ಶ್ರೀ ಮುರಳಿಧರ ಎಸ್, ಶಿಕ್ಷಕ – ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.