ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕರ‍್ಯಕ್ರಮವು ದಿನಾಂಕ 19-11-2022 ರಂದು ನಡೆಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕರ‍್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ಮಾತನಾಡುತ್ತಾ “ನಾಯಕತ್ವದ ಗುಣ ವಿದ್ಯಾರ್ಥಿ ದೆಸೆಯಲ್ಲಿಯೇ ರೂಪುಗೊಳ್ಳುತ್ತದೆ.ವಿದ್ಯಾ ಸಂಸ್ಸ್ಥೆಯ ಹುಟ್ಟು ಹಾಗು ಬೆಳವಣಿಗೆಗೆ ವಿದ್ಯಾರ್ಥಿಗಳು ಆದರ್ಶರಾಗಬೇಕು, ಸಾಮಾಜಿಕ ಮೌಲ್ಯಗಳ ಕಲ್ಪನೆ,ಕಾರ‍್ಯಕ್ರಮಗಳನ್ನು ಓದಿನ ಜೊತೆಗೆ ಜೋಡಿಸಿಕೊಂಡು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು” ಎಂದು ಶುಭಹಾರೈಸಿದರು.
ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದಅಸ್ಮಿತ್ ಆಚಾರ್ಯ,ಮಹೇಶ್ ಬಾಬು,ವಿಖ್ಯಾತ್ ಶೆಟ್ಟಿ, ಕಿಶನ್‌ಕುಮಾರ್,ಆಶ್ರಯ್ ಹಾಗೂ ಚೈಶ್ಮಾ ಇವರಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳಿಧರ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
2021-22ನೇ ಸಾಲಿನಲ್ಲಿ ನಡೆದ ತಾಂತ್ರಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಟೋಮೊಬೈಲ್ ವಿಭಾಗದ ವಿದ್ಯಾರ್ಥಿ ಅಂಕಿತ್ ಶೆಟ್ಟಿ ಇವರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಸನ್ಮಾನಿಸಿದರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಶ್ರಮಪಟ್ಟಲ್ಲಿ ಏನನ್ನೂ ಸಾಧಿಸಬಹುದು, ವ್ಯಕ್ತಿತ್ವ ನಿರ್ಮಾಣಮಾಡಲು ನಿರಂತರ ಪ್ರಯತ್ನ ಮಾಡಿದರೆ ಜೀವನ ಸುಖಮಯವಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಿಂದ ವಿವೇಕಾನಂದ ಪಾಲಿಟೆಕ್ನಿಕ್‌ಗೆ “ಕಲರ್-ಪ್ರಿಂಟರ್”ನ್ ನು ಹಸ್ತಾಂತರಿಸಲಾಯಿತು.
ಕಾರ‍್ಯಕ್ರಮದ ಅದ್ಯಕ್ಷರಾದ ಆಡಳಿತ ಮಂಡಳಿಯ ಖಜಾಂಜಿ ಶ್ರೀ ನರಸಿಂಹ ಪೈ ಇವರು ಮಾತನಾಡುತ್ತಾ “ಗುರಿ, ನಾಯಕತ್ವ ಹಾಗೂ ಕ್ರೀಯಾಶೀಲತೆ”ಯನ್ನು ಬೆಳೆಸಿಕೊಳ್ಳಿ, ಒಳ್ಳೆಯ ವಿದ್ಯಾರ್ಥಿಗಳಾಗಿ ಎಂದು ಶುಭಹಾರೈಸಿದರು. ಉದ್ಗಾಟನಾ ಕಾರ‍್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರುತಿಕ ಕಾರ‍್ಯಕ್ರಮ ನಡೆಯಿತು. ಈ ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕರಾದ ಮಹದೇವ ಶಾಸ್ತ್ರಿ, ಸದಸ್ಯರಾದ ಈಶ್ವರಚಂದ್ರ,ಅಚ್ಯುತ ಪ್ರಭು ಭಾಗವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಶೀಮತಿ ಪುಷ್ಪಾ ಬಿ.ಎನ್. ವಂದನಾರ್ಪಣೆಗೈದರು.ಸಿವಿಲ್ ವಿದ್ಯಾರ್ಥಿನಿಯರಾದ ಶೀಮಾನಸ ತಂಡದವರು ಪ್ರಾರ್ಥಿಸಿದರು, ಈ ಕಾರ‍್ಯಕ್ರಮದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಯ ಹೆತ್ತವರಾದ ಶ್ರೀ ಪುರಂದರ ಶೆಟ್ಟಿ,, ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ನಿರೂಪಣೆಯನ್ನು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾ ಸಕರಾದ ಶ್ರೀ ಗುರುಪ್ರಸನ್ನ ಇವರು ನೆರವೇರಿಸಿದರು.