• 08251 231197
  • vptputtur@yahoo.co.in

ಆಟಿ ಉತ್ಸವ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್­ನಲ್ಲಿ ಆಟಿ ಉತ್ಸವವನ್ನು ವಿದ್ಯಾರ್ಥಿಗಳು ಸಂಭ್ರಮದಿಂದ ಆಚರಿಸಿದರು. ಈ ಕಾರ್ಯಕ್ರಮವನ್ನು ಸಂಪ್ರಾದಾಯಿಕ ರೀತಿಯಲ್ಲಿ ಉದ್ಘಾಟಿಸಿದ ತುಳು ಅಕಾಡಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್‌ಸಾರ್ ಮಾತನಾಡುತ್ತಾ, ಆಟಿ ತಿಂಗಳ ಪದ್ಧತಿಗಳನ್ನು ವಿವರಿಸುತ್ತಾ ಕಷ್ಟದ ತಿಂಗಳಾದ ಆಟಿ ತಿಂಗಳನ್ನು ಉತ್ಸವವೆಂಬಂತೆ ಆಚರಿಸಲಾಗುತ್ತಿದೆ. ಓಂಕಾರದ ಮೂಲಕ ಜಗತ್ತಿಗೆ ತಾಕತ್ತನ್ನು ತೋರಿಸಿಕೊಟ್ಟು ಭಾರತ ಎಂಬ ಹೆಸರಿನಿಂದ ಕರೆಯಲ್ಪಡುವ ನಮ್ಮ ದೇಶದಲ್ಲಿ ಸ್ವಾಸ್ಥ್ಯ ಸಮಾಜ, ಸ್ವಸ್ಥ ಮನಸ್ಸು ನಿರ್ಮಾಣವಾಗಬೇಕಾದರೆ ದುಶ್ಚಟಮುಕ್ತವಾದ ದುಕು ನಮ್ಮದಾಗಬೇಕು. ನಿಮ್ಮನ್ನು ನೀವು ಶಚಿ ಮಾಡಿಕೊಂಡಾಗ ಇಡೀ ದೇಶವೇ ಶುಚಿಯಾಗುವುದು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತುಳು ಸಾಹಿತಿ ಶ್ರೀಮತಿ ರಾಜಶ್ರೀ ಟಿ.ಪೆರ್ಲ ಮಾತನಾಡುತ್ತಾ, ನಮ್ಮ ಪ್ರತಿಯೊಂದು ಆಚರಣೆಗಳಲ್ಲೂ ಸತ್ವವಿದೆ. ತುಳುವರು ಸರಳವಾದ ರೀತಿಯಲ್ಲಿ ಅದನ್ನು ತಮ್ಮ ಜೀವನದಲ್ಲಿ ಅನುಸರಿಸುತ್ತಿದ್ದರು. ನಮ್ಮ ಎಲ್ಲಾ ತಿಂಗಳುಗಳ ವಿಶೇಷಗಳನ್ನು ತಿಳಿದುಕೊಳ್ಳಿ. ವಿಪುಲ ಅವಕಾಶಗಳನ್ನು ಹಿರಿಯರ ಮಾರ್ಗದರ್ಶನವನ್ನು ಉಪಯೋಗಿಸಿಕೊಂಡು ನಮ್ಮ ಸಂಸ್ಕೃತಿಯನ್ನು ನಾವು ತಿಳಿದುಕೊಳ್ಳಬೇಕು. ನಮ್ಮೊಳಗಿನ ದನಿಗೆ ನಾವು ಕಿವಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿಗಳಾದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಇದರ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ನಿರಂಜನ ರೈ ಇವರು ಮಾತನಾಡುತ್ತಾ, ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿಗೆ ಹೋಗುವಂತೆ ಪ್ರೇರಪಿಸುವ ನಂದಾದೀಪದಂತೆ ನಿಮ್ಮ ಬಾಳು ಬೆಳಗಲಿ, ಪ್ರಕೃತಿಯನ್ನು ಆರಾಧನೆ ಮಾಡುವವರು ತುಳುವರು. ತುಳುವಿನೊಂದಿಗೆ ಎಲ್ಲಾ ಬಾಷೆಗಳ ಜ್ಞಾನವನ್ನು ಅರಿತುಕೊಂಡು ಒಂದೇ ತಾಯಿಯ ಮಕ್ಕಳಂತೆ ಬೆಳೆಯೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷರಾದ ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ ವಿವೇಕಾನಂದ ಉಕ್ಕಿನ ತೋಳಿನ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುತ್ತಾ ಇದೆ. ಸಮಾನ ಮನಸ್ಸಿನ ಸಮಾನ ಸಂಸ್ಕೃತಿಯಿಂದ ದೇಶದ ಸಂಸ್ಕೃತಿಯನ್ನು ವೃದ್ಧಿಸೋಣ. ಈ ಸಂದಂರ್ಭದಲ್ಲಿ ಕಾರ್ಗಿಲ್ ವಿಜಯದ ವಿಜಯೋತ್ಸವವನ್ನು ಇಂದು ಸಂಭ್ರಮದಿಂದ ಆಚರಿಸುತ್ತಾ ಇದ್ದೇವೆ. ಎಂದರು.

ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್­ನ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯರುಗಳಾದ ನರಸಿಂಹ ಪೈ, ರವಿ ಮುಂಗ್ಲಿಮನೆ, ಈಶ್ವರಚಂದ್ರ, ಕಾಲೇಜಿನ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸ್ವಾಗತವನ್ನು ವಿವೇಕಾನಂದ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾದ ಶ್ರೀ ಚಂದ್ರಕುಮಾರ್ ನಡೆಸಿಕೊಟ್ಟರು. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್‌ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಥಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿ ಶಮಂತ್ ಧನ್ಯವಾದ ಸಮರ್ಪಿಸಿದನು. ಅಂತಿಮ ವರ್ಷದ ಅಟೋಮೊಬೈಲ್ ವಿದ್ಯಾರ್ಥಿಗಳಾದ ಚರಣ್ ಹಾಗೂ ಕಾರ್ತಿಕ್ ಪಿ. ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin