ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಯುವ ರೆಡ್‌ಕ್ರಾಸ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಇದರ ಸಹಯೋಗದಲ್ಲಿ ದಿನಾಂಕ 15-7-2022 ರಂದು ಸುಮಾರು 70 ವಿದ್ಯಾರ್ಥಿಗಳಿಂದ ಸ್ವಯಂಪ್ರೇರಿತ ರಕ್ತದಾನ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ನಿರ್ದೇಶಕರಾದ ಉಷಾ ಭಟ್ ಮುಳಿಯ ಮಾತನಾಡುತ್ತಾ, ರಕ್ತದಾನ ಅತೀ ದೊಡ್ಡ ದಾನ ಹಾಗೂ ಅತೀ ಶ್ರೇಷ್ಠ ದಾನ. ರಕ್ತದಾನ ಮಾಡಿದ ಎಲ್ಲರಿಗೂ ಶುಭವಾಗಲಿ ಎಂದರು.
ಕಾರ್‍ಯಕ್ರಮದ ಅತಿಥಿಗಳಾದ ಡಾ| ರಾಮಚಂದ್ರ ಭಟ್, ಮೆಡಿಕಲ್ ಆಫೀಸರ್ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ರಕ್ತದಾನ ಮಾಡುವುದರ ಬಗ್ಗೆ ಇರುವ ಸರಕಾರದ ನಿಯಮ, ಅದರ ಶೇಖರಣೆ, ಸಂಸ್ಕರಣೆ ಹಾಗೂ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಪ್ರಶಾಂತ್ ಶೆಣೈ ಅಧ್ಯಕ್ಷರು ರೋಟರಿ ಸಿಟಿ ಇವರು ಮಾತನಾಡುತ್ತಾ, ಒಂದು ಹನಿ ರಕ್ತದಾನ ಕೂಡಾ ಅಮೂಲ್ಯವಾದದ್ದು. ಪ್ರತಿಯೊಬ್ಬ ದಾನಿಯೂ ಜೀವರಕ್ಷಕ. ನಾವೆಲ್ಲರೂ ಒಂದೇ. ನಮ್ಮ ದೇಹದಲ್ಲಿ ಹರಿಯುವ ರಕ್ತವೂ ಒಂದೇ. ರಕ್ತದಾನ ಮಾಡಿ ಜೀವ ಉಳಿಸಿ ಎಂದರು.
ಈ ಕಾರ್‍ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ವಿಕ್ಟರ್ ಮಾರ್ಟಿಸ್ ಸದಸ್ಯರು ರೋಟರಿ ಸಿಟಿ ಹಾಗೂ ಬ್ಲಡ್ ಡೊನೋಷನ್ ಕ್ಯಾಂಪ್, ಹಾಗೂ ಅನೇಕ ರೋಟರಿ ಸಂಸ್ಥೆಯ ಪದಾದಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್‍ಯಕ್ರಮದ ಪ್ರಾಸ್ತವಿಕ ಭಾಷಣವನ್ನು ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಣೆಯನ್ನು ಪ್ರಮೋದ್ ಮಲ್ಲಾರ್ ಹಾಗೂ ಜಯಗುರು ಆಚಾರ್‍ಯ ನಡೆಸಿಕೊಟ್ಟರು. ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಯಸ್ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕಾರ್‍ಯಕ್ರವದ ನಿರೂಪಣೆಯನ್ನು ವಿವೇಕಾನಂದ ಪಾಲಿಟೆಕ್ನಿಕ್‌ನ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಶ್ರೀ ಗುರುಪ್ರಸನ್ನ ನೆರವೇರಿಸಿದರು.