ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ, ಕರ್ನಾಟಕ ಪ್ರಾಂತ ಇದರ ಆಶ್ರಯದಲ್ಲಿ, ಭಾರತೀಯ ಜ್ಞಾನ ಪರಂಪರೆಯ ಕುರಿತು ’ವಿವೇಕ ವಿಕಾಸ ಉಪನ್ಯಾಸ ಮಾಲಿಕೆ’ ಸರಣಿಯ ಮೂರನೇ ಕಾರ್ಯಕ್ರಮ ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಶೋಭಿತಾ ಸತೀಶ್ ಅವರು ವ್ಯಕ್ತಿತ್ವ ವಿಕಸನದಲ್ಲಿ ಭಾರತೀಯ ಕಲೆಯ ಪಾತ್ರ ಎಂಬ ವಿಷಯದಲ್ಲಿ ಮಾತನಾಡುತ್ತಾ, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಶಿಕ್ಷಣದ ಬಹು ಮುಖ್ಯ ಉದ್ದೇಶ. ವ್ಯಕ್ತಿತ್ವ ಎಂದರೆ ಒಬ್ಬ ವ್ಯಕ್ತಿಯನ್ನು ಅವನ ಗುಣ ವಿಶೇಷಗಳಿಂದ ಗುರುತಿಸಿಕೊಳ್ಳುವುದು. ಸೃಜನಶೀಲತೆ, ಕುತೂಹಲ, ಆತ್ಮಸ್ಥೈರ್ಯ ಮೊದಲಾದವುಗಳು ವ್ಯಕ್ತಿತ್ವದ ಮಾಪನಗಳಾಗಿದೆ. ಮಕ್ಕಳ ಬೆಳವಣಿಗೆಗೆ ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳು ತುಂಬಾ ಸಹಾಯಕ. ಕಲೆಯನ್ನು ಅಭ್ಯಾಸ ಮಾಡಿಕೊಂಡವರಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಸಾದ್ಯ. ಪ್ರತಿಯೊಬ್ಬರಲ್ಲಿಯೂ ಯಾವುದಾದರೊಂದು ಸಾಮರ್ಥ್ಯ ಇರುತ್ತದೆ. ಅದನ್ನು ಬೆಳೆಸಿಕೊಳ್ಳುವುದಕ್ಕೆ ವಿದ್ಯಾರ್ಥಿ ಜೀವನ ಸೂಕ್ತ ಕಾಲ. ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯರಾದ ಶ್ರೀ ರವಿ ಮುಂಗ್ಲಿಮನೆ, ಶ್ರೀಮತಿ ಉಷಾ ಭಟ್ ಮುಳಿಯ, ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರವಿರಾಮ ಸಿದ್ದಮೂಲೆ ಕಾರ್ಯಕ್ರಮ ನಿರ್ವಹಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಮುರಳೀಧರ ಯಸ್ ಸ್ವಾಗತಿಸಿದರು. ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ರೋಹಿತ್ ಎಚ್ ಪಿ ವಂದಿಸಿದರು.