• 08251 231197
  • vptputtur@yahoo.co.in

ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ

ಪುತ್ತೂರು: ವಿದ್ಯಾರ್ಥಿಗಳು ಸರಕಾರಿ ಪಾಲಿಟೆಕ್ನಿಕ್, ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 43ನೇ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಎರಡನೇ ಬಾರಿ ಅಮೋಘ ಸಾಧನೆ ಮಾಡಿದ್ದಾರೆ.

ಈ ಕ್ರೀಡಾಕೂಟದಲ್ಲಿ ತೃತೀಯ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾದ ಲೋಹಿತ್ 100 ಮೀ ಓಟದ ಸ್ಪರ್ಧೆ, 200 ಮೀ ಓಟದ ಸ್ಪರ್ಧೆ ಹಾಗೂ 4×100 ಮೀ ರಿಲೇಯಲ್ಲಿ ಚಿನ್ನದ ಪದಕ ಮತ್ತು 4×400 ಮೀ ರಿಲೇಯಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಪ್ರಜೀತ್ ಜೈನ್ ಟೇಬಲ್ ಟೆನಿಸ್ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಹಾಗೂ ಟೇಬಲ್ ಟೆನಿಸ್ ಡಬಲ್ಸ್‌ನಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ ಮೆಕಾನಿಕಲ್ ವಿಭಾಗದ ಮಹಾಂದ್ರ ಶಂಕರ್ ಬಿಲ್ಲವ 4×100 ಮೀ ರಿಲೇಯಲ್ಲಿ ಚಿನ್ನದ ಪದಕ ಮತ್ತು 4×400 ಮೀ ರಿಲೇಯಲ್ಲಿ ಬೆಳ್ಳಿ ಪದಕ, ತೃತೀಯ ವರ್ಷದ ಸಿವಿಲ್ ವಿಭಾಗದ ತ್ರಿವೇಣಿ 100 ಮೀ ಓಟದ ಸ್ಪರ್ಧೆ ಮತ್ತು 200 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ ಅಟೋಮೋಬೈಲ್ ವಿಭಾಗದ ಬಾಲಾಜಿ ಜಿ ಟೇಬಲ್ ಟೆನಿಸ್ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಅಖಿಲ ಭಾರತ ದಕ್ಷಿಣ ಪ್ರಾಂತದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ.

DSC_0393

ತೃತೀಯ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದ ರಂಜಿತ್ ಪಿ.ವಿ. 4×100 ಮೀ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ ಸಿವಿಲ್ ವಿಭಾಗದ ವಿಶ್ವಾಸ್ ರೈ 4×100 ಮೀ ರಿಲೇಯಲ್ಲಿ ಚಿನ್ನದ ಪದಕ ಮತ್ತು 4×400 ಮೀ ರಿಲೇಯಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ ಇಲೆಕ್ಟ್ರಾನಿಕ್ಸ್ ವಿಭಾಗದ ಸನತ್ ಶೆಟ್ಟಿ ಪಿ. 4×400 ಮೀ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ದ್ವಿತೀಯ ವರ್ಷ ಸಿವಿಲ್ ವಿಭಾಗದ ಸುಪರ್ಣ ಎನ್ ಎಸ್, ದ್ವಿತೀಯ ವರ್ಷ ಸಿವಿಲ್ ವಿಭಾಗದ ಪೂಜಾ, ತೃತೀಯ ವರ್ಷ ಇಲೆಕ್ಟ್ರಾನಿಕ್ಸ್ ವಿಭಾಗದ ಯಶ್ಮಿತಾ, ಪ್ರಥಮ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದ ದೀಪ್ತಾ ರೈ ಜಿ, ದ್ವಿತೀಯ ವರ್ಷ ಅಟೋಮೋಬೈಲ್ ವಿಭಾಗದ ಜಿತೇಶ್ ಬಿ, ದ್ವಿತೀಯ ವರ್ಷ ಅಟೋಮೋಬೈಲ್ ವಿಭಾಗದ ಯಶವಂತ ಕೆ, ದ್ವಿತೀಯ ವರ್ಷ ಮೆಕಾನಿಕಲ್ ವಿಭಾಗದ ಉದಯ್ ಕಿಶೋರ್, ಪ್ರಥಮ ವರ್ಷ ಮೆಕಾನಿಕಲ್ ವಿಭಾಗದ ಪ್ರಜ್ವಲ್, ತೃತೀಯ ವರ್ಷ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖೇಶ್ ಕುಮಾರ್ ಬಿ, ತೃತೀಯ ವರ್ಷ ಸಿವಿಲ್ ವಿಭಾಗದ ಕೀರ್ತಿರಾಜ ಹೆಚ್, ತೃತೀಯ ವರ್ಷ ಸಿವಿಲ್ ವಿಭಾಗದ ಸ್ವರೂಪ್ ಯಂ, ದ್ವಿತೀಯ ವರ್ಷ ಮೆಕಾನಿಕಲ್ ವಿಭಾಗದ ರಾಜೇಶ್ ಕೆ, ದ್ವಿತೀಯ ವರ್ಷ ಮೆಕಾನಿಕಲ್ ವಿಭಾಗದ ಶೋಬಿತ್ ಸಾಲಿಯಾನ್ ಇವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.

ವಿಜೇತರಾದ ಮತ್ತು ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಕಾಲೇಜಿನ ವತಿಯಿಂದ ಆಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಮಾತನಾಡುತ್ತಾ ವಿದ್ಯಾರ್ಥಿಗಳ ಈ ಸಾಧನೆಯಿಂದ ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ಎರಿಗೂ ತುಂಬು ಹೃದಯದ ಅಭಿನಂದನೆಗಳು ಎಂದರು. ಸಂಚಾಲಕರಾದ ಮಹದೇವ ಶಾಸ್ತ್ರಿ, ಸದಸ್ಯರುಗಳಾದ ಕೆ.ಟಿ.ಮುರಳಿ, ಸೂರ್ಯನಾಥ ಆಳ್ವ, ಸಂತೋಷ್ ಕುಮಾರ್ ಎ., ಮೋಹನ್ ಕೆ.ಎಸ್., ಮೋಹಿನಿ ದಿವಾಕರ್, ತ್ರಿವೇಣಿ ಪೆರುವೋಡಿ, ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಯಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಹಾಗೂ ದೈಹಿಕ ಶಿಕ್ಷಕರಾದ ನವೀನ್ ಕುಮಾರ್ ಯಂ ಕೆ. ಉಪಸ್ಥಿತರಿದ್ದರು. ಈ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಯಂ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಕರಾದ ನವೀನ್ ಕುಮಾರ್ ಯಂ ಕೆ. ತರಭೇತಿ ನೀಡಿದ್ದರು.

Highslide for Wordpress Plugin