ಪುತ್ತೂರು: ತೃತೀಯ ಅಟೋಮೋಬೈಲ್ ಮತ್ತು ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ಶರಾವತಿಯ ವಿವಿಧ ಜಲ ವಿದ್ಯುತ್ ಕೇಂದ್ರಗಳ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮ, ಜೊಗ್‌ಫಾಲ್ಸ್ ಇದರ ಸಹಾಯಕ ಇಂಜಿನಿಯರ್ ನಾಗರಾಜ್ ಎಂ. ಜೋಶಿ ಇವರು ಉಪನ್ಯಾಸ ನಡೆಸಿಕೊಟ್ಟರು. ಶರಾವತಿಯ ವಿವಿಧ ಜಲ ವಿದ್ಯುತ್ ಕೇಂದ್ರಗಳು ಮತ್ತು ಅಲ್ಲಿ ವಿದ್ಯುತ್ ಹೇಗೆ, ಎಷ್ಟು ಉತ್ಪಾದನೆಯಾಗುತ್ತದೆ, ಅಲ್ಲಿ ಬಳಸುವ ವಿವಿಧ ಟರ್‌ಬೈನ್‌ಗಳು ಹಾಗೂ ವಿದ್ಯುತ್‌ನ ಮಿತ ಬಳಕೆಯ ಅಗತ್ಯತೆ ಮತ್ತು ವಿದ್ಯುತ್ ದುರ್ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟೋಮೋಬೈಲ್ ಮತ್ತು ಮೆಕಾನಿಕಲ್ ವಿಭಾಗ ಮುಖ್ಯಸ್ಥರು, ಉಪನ್ಯಾಸಕರುಗಳು ಹಾಗೂ ತೃತೀಯ ಅಟೋಮೋಬೈಲ್ ಮತ್ತು ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆಕಾನಿಕಲ್ ವಿಭಾಗದ ಉಪನ್ಯಾಸಕರಾದ ಶ್ರೀಕರ್ ಆಚಾರ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕರಾದ ಪ್ರಶಾಂತ್ ಧನ್ಯವಾದ ನೀಡಿದರು.