• 08251 231197
  • vptputtur@yahoo.co.in

ಕಾರ್ಗಿಲ್ ವಿಜಯ ದಿವಸ್

ಕಾರ್ಗಿಲ್ ವಿಜಯ ದಿವಸ್ ಒಂದು ದಿನದ ಸಂಭ್ರಮವಲ್ಲ – ಆದರ್ಶ ಗೋಖಲೆ

ಪುತ್ತೂರು: ಕಾರ್ಗಿಲ್ ವಿಜಯ ದಿವಸ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಆದರ್ಶ ಗೋಖಲೆ ನಡೆಸಿಕೊಟ್ಟರು. ಇವರು ಮಾತನಾಡುತ್ತಾ, 1999 ರ ಜುಲೈ 26 ರಂದು ಕಾರ್ಗಿಲ್ ಯುದ್ಧ ಗೆದ್ದ ದಿನ. ಈ ದಿನ ನಮ್ಮೆಲ್ಲಾ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ.

kday 1

kday-2

ಒಂದೆಡೆ ಶಾಂತಿ ಮಂತ್ರ ಜಪಿಸುತ್ತಲೇ ಮತ್ತೊಂದೆಡೆ ಪಾಕಿಸ್ತಾನ ಸೇನೆ ತನ್ನ ಸೈನಿಕರನ್ನು ದೇಶದ ಗಡಿಯೊಳಗೆ ನುಗ್ಗಿಸಿತ್ತು. ನಮ್ಮ ವೀರ ಸೈನಿಕರು ತಮ್ಮ ಪ್ರಾಣವನ್ನೇ ಪಣಕಿಟ್ಟು ಕಾರ್ಗಿಲ್ ಯುದ್ಧವನ್ನು ಜಯಿಸಿದ್ದರು. ಕಾರ್ಗಿಲ್ ವಿಜಯ ದಿವಸ್ ಒಂದು ದಿನದ ಸಂಭ್ರಮಾಚರಣೆ ಆಗದೆ, ಪ್ರತಿದಿನವೂ ನಮ್ಮೆಲ್ಲರ ಮನೆ ಮನಗಳಲ್ಲಿ ತುಂಬಿಕೊಂಡಿರಬೇಕು ಎಂದರು. ಭಾರತೀಯ ಸೇನೆಯ ಸೈನಿಕರೆಂದರೆ ಕೇವಲ ಯುದ್ದ ಮಾಡಿ ಗೆದ್ದವರು ಮಾತ್ರವಲ್ಲ ಇವರು ದೇಶದ ಜನರ ಹೃದಯವನ್ನು ಗೆದ್ದವರು. ನೇಪಾಳದಲ್ಲಿ ನಡೆದ ಭೂಕಂಪನದ ಸಮಯದಲ್ಲಿ ಭಾರತೀಯ ಸೈನಿಕರ ಸೇವೆ ಮತ್ತು ಪರಾಕ್ರಮವನ್ನು ನೆನಪಿಸಿಕೊಳ್ಳಬೇಕು. ಈ ಕಾರಣಕ್ಕಾಗಿ ನಾವು ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಡಬೇಕು ಎಂದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಸೌರಭ್ ಕಾಲಿಯಾ, ವಿಕ್ರಮ್ ಬಾತ್ರಾ, ಆಂಗ್ರೇಜ್ ಸಿಂಗ್‌ರಂತಹ ಸೈನಿಕರ ವೀರ ಬಲಿದಾನಗಳನ್ನು ನೆನಪಿಸಿಕೊಂಡರು. ಪಾಲಿಟೆಕ್ನಿಕ್‌ನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಬ್ಯಾಸದ ನಂತರ ದೇಶ ಹಾಗೂ ಸೈನ್ಯಕ್ಕೆ ಕೊಡುಗೆ ನೀಡುವಂತಹ ಎನಾದರೂ ಆವಿಸ್ಕಾರಗಳನ್ನು ಮಾಡಿ. ದೇಹಕ್ಕೋಸ್ಕರ ಅಲ್ಲ ದೇಶಕ್ಕೋಸ್ಕರ ಬದುಕುವ. ನಾನು ಒಬ್ಬ ಸೈನಿಕ, ಈ ದೇಶದ ನೈಜ ರಕ್ಷಕ ಅನ್ನುವ ಭಾವನೆಯೊಂದಿಗೆ ಈ ದೇಶದ ಸೈನಿಕರನ್ನು ನೆನಪಿಸಿಕೊಳ್ಳಲು ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಚಂದ್ರಕುಮಾರ್ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಉಷಾಕಿರಣ್. ಎಸ್.ಎಂ ಕಾರ್ಯಕ್ರಮ ನಿರೂಪಿಸಿದರು, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪುಷ್ಪಾ ಬಿ ಎನ್ ವಂದಿಸಿದರು.

Highslide for Wordpress Plugin