• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ಆವರಣದಲ್ಲಿ ವನಮಹೋತ್ಸವ

ಪುತ್ತೂರು: ಭೌತಿಕ, ಜೈವಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿಸರದ ಸುಧಾರಣೆ ಈಗ ಅತ್ಯಂತ ಅವಶ್ಯಕ ವಾಗಿರುವಂತಹುದು ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಕಾರ್ಯಪ್ರವೃತ್ತರಾಗ ಬೇಕಾಗಿದೆ. ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಶ್ರೀ ಶ್ರೀಧರ ಪಿ. ಹೇಳಿದ್ದಾರೆ. ಇವರು ವಿವೇಕಾನಂದ ಪಾಲಿಟೆಕ್ನಕ್ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ, ಮಂಗಳೂರು ವಿಭಾಗ, ರೋಟರಿ ಕ್ಲಬ್ ಪುತ್ತೂರು ಪೂರ್ವ ಹಾಗೂ ಪುತ್ತೂರು ಪಾಲಿಟೆಕ್ನಕ್ ಇದರ ಸಹಯೋಗದೊಂದಿಗೆ ಮಗುವಿಗೊಂದು ಮರ – ಶಾಲೆಗೊಂದು ವನ  ಎಂಬ ಶೀರ್ಷಿಕೆಯಡಿ ನಡೆಸಲ್ಪಟ್ಟ ವನಮಹೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಪರಿಸರ ಸಮತೋಲನವಾಗಿರಬೇಕಿದ್ದರೆ ಭೂಭಾಗದ 33 ಶೇಕಡಾ ಅರಣ್ಯ ಪ್ರದೇಶವಿರಬೇಕಾಗುತ್ತದೆ. ಆದರೆ ಭಾರತದ ಭೂಭಾಗದ ಕೇವಲ 22% ಮಾತ್ರ ಅರಣ್ಯ ಪ್ರದೇಶವಿರುವುದು. 16% ಭೂಮಿ ಬರಡಾಗಿರುತ್ತದೆ. ಅರಣ್ಯ ನಾಶದಿಂದಾಗುವ ಅನಾಹುತಗಳೇನು ಎಂಬುದನ್ನು ಎಲ್ಲರೂ ಅರಿತಿರುತ್ತಾರೆ.  ನಾವು ಗಿಡಗಳನ್ನು ನೆಟ್ಟು ಬೆಳೆಸಿದಾಗ ಅದು ಮುಂದಿನ ಜನಾಂಗದ ಉಳಿವಿಗೆ ಸಹಾಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಪುತ್ತೂರಾಯ ಮಾತನಾಡಿ 1950ರಲ್ಲಿ ಕೇಂದ್ರ ಸಚಿವರಾದ ಶ್ರೀ ಕೆ. ಯನ್. ಮುನ್ಸ್ಯಿಯವರಿಂದ ಪ್ರಾರಂಭವಾದ ವನಮಹೋತ್ಸವ ಕಾರ್ಯಕ್ರಮ ಪ್ರತಿ ವರ್ಷವೂ ಜುಲೈ ತಿಂಗಳಲ್ಲಿ ನಡೆಯುತ್ತಾ ಬಂದಿರುತ್ತಾ ಇದೆಯಾದರೂ ಭಾರತದಲ್ಲಿ ಇನ್ನೂ ಬರಡು ಭೂಮಿ ಇರುವಂತಹುದು ದುರದೃಷ್ಟಕರ. ಆದುದರಿಂದ ನಾವೆಲ್ಲರೂ ಪರಿಸರ ಸ್ನೇಹಿ ದೋರಣೆಯನ್ನು ಬೆಳಸಿಕೊಳ್ಲಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಆಧ್ಯಕ್ಷರಾದ ರೊ| ಕೆ. ಕೃಷ್ಣಪ್ಪ ನವರು ಮಾತನಾಡುತ್ತಾ ಪರಿಸರ ಸಂರಕ್ಷಣೆ ನಮ್ಮ ಮುಂದಿನ ದೊಡ್ಡ ಸವಾಲಾಗಿದೆ, ಭೌಗೋಳಿಕ ವಿಪರ್ಯಾಸಗಳಿಂದ ಅರಣ್ಯ ನಾಶ ಪುನರುತ್ಪತ್ತಿಯಾಗುತ್ತದೆ ಆದರೆ ಮಾನವನಿಂದಾದ ಅರಣ್ಯ ನಾಶ ಪುನರುಜ್ಜೀವನ ಕಷ್ಟ ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಾ ವಿವೇಕಾನಂದ ಪಾಲಿಟೆಕ್ನಿಕ್ ಮಂಡಳಿಯ ಪ್ರೋ. ಎ.ವಿ. ನಾರಾಯಣ ಅವರು ಅರಣ್ಯ ಇಲಾಖೆಯ ನಿರಂತರ ಪ್ರಯತ್ನದ ನಡುವೆಯು ಅರಣ್ಯ ಸಂಪತ್ತು ಕಡಿಮೆಯಾಗುತ್ತಿದೆ. ಕಾರಣ ನಿರಂತರ ಜನಸಂಖ್ಯಾ ವೃದ್ಧಿ ಉರುವಲು ಮರಮಟ್ಟುಗಾಗಿ ಅರಣ್ಯ ನಾಶವಾಗುತ್ತಿದೆ. ಈ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕನ ಸೇವೆಯನ್ನು ಸ್ಮರಿಸುತ್ತಾ ಮುಂದಿನ ಪೀಳಿಗೆಯ ಒಳಿತಿಗಾಗಿ ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.

ಸಮಾರಂಭದ ಅಧ್ಯಕ್ಷರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯವರಾದ ಶ್ರೀ ಶಿವಪ್ರಸಾದ್ ಇವರು ಅರಣ್ಯ ಇಲಾಖೆಯ ಇಂತಹ ಕಾರ್ಯಕ್ರಮಗಳನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಾಯೋಜಕತ್ವದಲ್ಲಿ ಬರುವ ಎಲ್ಲಾ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆಸಿಕೊಡಲು ವಿಂತಿಸಿಕೊಂಡರು.

ಪಾಲಿಟೆಕ್ನಕ್ ನ ಪ್ರಾಂಶುಪಾಲರಾದ ಶ್ರೀ ಗೋಪಿನಾಥ್ ಶೆಟ್ಟಿ ಯಂ. ಇವರು ಅಭ್ಯಾಗತರನ್ನು ಪರಿಚಯಿಸಿದರು ಹಾಗೂ ಉಪವಲಯ ಅರಣ್ಯಧಿಕಾರಿಗಳ ಸಂಘದ ಕಾರ್ಯದರ್ಶಿ ಶ್ರೀ ಮಂಜುನಾಥ್  ಇವರು ವಂದಿಸಿದರು. ಈ ಕಾರ್ಯಕ್ರಮವನ್ನು ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿರಾಮ್ ಇವರು ಸಂಯೋಜಿಸಿದರು.

ಸಬಾ ಕಾರ್ಯಕ್ರಮದ ಬಳಿಕ ಎಲ್ಲಾ ಅಬ್ಯಾಗತರು ಪಾಲಿಟಿಕ್ನಿಕ್ ಆವರಣದಲ್ಲಿ ಒಂದೊಂದು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಮೆರುಗನ್ನು ಕೊಟ್ಟರು ಬಳಿಕ ಅರಣ್ಯ ಇಲಾಖೆಯವರು ಒದಗಿಸಿಕೊಟ್ಟ ಸುಮಾರು ನೂರರಷ್ಟು ಗಿಡಗಳನ್ನು ಪಾಲಿಟೆಕ್ನಿಕ್ ಆವರಣದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ನಡಿಸಲಾಯಿತು.

Highslide for Wordpress Plugin