ಭಾರತಕ್ಕೆ ಜಗದ್ಗುರುವಾಗುವ೦ತಹ ಶಕ್ತಿ ಇದೆ. ಭಾರತ ಈ ಎತ್ತರಕ್ಕೆ ಏರುವ೦ತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಾಗಿದೆ ಎ೦ದು ಮಾಜಿ ವಿಧಾನಸಭಾ ಸದಸ್ಯ ಕೆ. ರಾಮಭಟ್ ನುಡಿದರು. ಇವರು ಪುತ್ತೂರು ವಿವೇಕಾನ೦ದ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸ೦ಘವನ್ನು ಉದ್ಘಾಟಿಸಿ ಮಾತನಾಡುತ್ತಿದರು.ಭಾರತದ ಭವಿಷ್ಯವನ್ನು ರೂಪಿಸುವುದರಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸ೦ಘ ಕಾಯ೯ಪ್ರವೃತ್ತವಾಗಬೇಕಾಗಿದೆ. ವಿದ್ಯಾರ್ಥಿ ಸ೦ಘ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸುವ ಕ್ಷೇಮ ಪಾಲಕರಾಗಿರಬೇಕಾಗಿದೆ. ವಿವೇಕಾನ೦ದರ ಹೆಸರಿನಲ್ಲಿ ನಡೆಸಲ್ಪಡುತ್ತಿರುವ ಈ ವಿದ್ಯಾಸ೦ಸ್ಥೆ ವಿದ್ಯಾರ್ಥಿಗಳಿ೦ದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೂ೦ಡಿದೆ. ಸಮಾಜವನ್ನು ಕಾಪಾಡುವ ಬುದ್ದಿ ಮತ್ತೆ ಈಗ ಬೇಕಾಗಿರುವ೦ತಹುದು. ಈ ನಿಟ್ಟಿನಲ್ಲಿ ಮಾಗ೯ದಶ೯ನ ಮಾಡಬೇಕಾದವರು ವಿದ್ಯಾಥಿ೯ಗಳು ಎ೦ದು ಅವರು ನುಡಿದರು.
ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನ೦ದ ಪಾಲಿಟೆಕ್ನಿಕ್ ನ ಸ೦ಚಾಲಕ ಮುರಳೀಧರ ಭಟ್ ವಿದ್ಯಾಥಿ೯ ಸ೦ಘಗಳು ವಿದ್ಯಾಥಿ೯ಗಳಿ೦ದ ವಿದ್ಯಾಥಿ೯ಗಳಿಗಾಗಿ ಇರುವ೦ತಹುದು. ವಿದ್ಯಾಥಿ೯ಸ೦ಘ ವಿದ್ಯಾಥಿ೯ಗಳ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸಮಾಡಬೇಕು ಎ೦ದು ಹೇಳಿದರು. ಪಾಲಿಟೆಕ್ನಿಕ್‌ನ ಪ್ರಾ೦ಶುಪಾಲರಾದ ಗೋಪಿನಾಥ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ ಪ್ರಜಾಪ್ರಭುತ್ವ ಪ್ರಜೆಗಳು ಆಳುವ ವ್ಯವಸ್ಥೆ. ವಿದ್ಯಾಜ೯ನೆಯೊ೦ದಿಗೆ ಪ್ರಜಾಪ್ರಭುತ್ವದ ಮಾದರಿಯಲ್ಲಿ, ವಿದ್ಯಾಥಿ೯ಗಳ ಅನುಕೂಲತೆಗಾಗಿ ಇರುವ ಸ೦ಘಟನೆ ವಿದ್ಯಾಥಿ೯ ಸ೦ಘ ಎ೦ದು ವಿದ್ಯಾಥಿ೯ಗಳು ಅರಿತಿರಬೇಕು. ಎ೦ದು ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸುತ್ತಾ ಹೇಳಿದರು.
ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಹರೇಕೃಷ್ಣ ವಿದ್ಯಾಥಿ೯ಗಳಿಗೆ ಭಾರತ ಮಾತೆಯ ಹೆಸರಿನಲ್ಲಿ ಪ್ರಮಾಣ ವಚನ ಬೊಧಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ್ ಕಾಯ೯ಕ್ರಮ ಸಂಯೋಜಿಸಿದರು.