ಸ್ವಾಮಿ ವಿವೇಕಾನಂದರ ೧೫೦ ನೇ ಹುಟ್ಟು ಹಬ್ಬವನ್ನು ಅದ್ದೂರಿಯಿಂದ ನೆರವೇರಿಸುವ ನಿಟ್ಟಿನಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿ, ಅಧ್ಯಾಪಕವೃಂದ ಹಾಗೂ ಅಧ್ಯಾಪಕೇತರ ಜಂಟಿ ಸಭೆ ತಾರೀಖು ೨೪-೦೮-೨೦೧೨ ನೇ ಶುಕ್ರವಾರ ಅಪರಾಹ್ನ ೪-೩೦ಕ್ಕೆ ಕೊಠಡಿ ಸಂಖ್ಯೆ೦೦೫ ರಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೋ| ಎ.ವಿ.ನಾರಾಯಣ ಇವರು ವಹಿಸಿದ್ದರು. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀಯುತ ಗೋಪಿನಾಥ್ ಶೆಟ್ಟಿ ಯವರು ಪ್ರಾಸ್ತಾವಿಕ ಭಾಷಣವನ್ನು ಮಾಡಿ ವಿವೇಕಾನಂz ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳ, ಎಲ್ಲಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳೀಯ ಸದಸ್ಯರು, ಪ್ರಾಂಶುಪಾಲರು ಹಾಗೂ ಹಿರಿಯ ಉಪನ್ಯಾಸಕರ ಸಭೆಯಲ್ಲಿ ಪ್ರಾಸ್ತಾವಿಸಿದ ಸಲಹೆ ಸೂಚನೆಗಳನ್ನು ಓದಿ ಹೇಳಿದರು. ಬಳಿಕ ನಡೆದ ಚರ್ಚೆಯಲ್ಲಿ ಸೂಚಿಸಲ್ಪಟ್ಟ ವಿಷಯಗಳಾದ ರಕ್ತದಾನ ಶಿಬಿರ ಏರ್ಪಡಿಸುವುದು, ತಾಂತ್ರಿಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ನಡೆಸುವುದು ಹಾಗೂ ಉದ್ಯೋಗ ಮೇಳವನ್ನು ನಡೆಸುವ ಸಲಹೆಗಳನ್ನು ವಿದ್ಯಾವರ್ಧಕ ಸಂಘದ ಸಭೆಯಲ್ಲಿ ಪ್ರಾಸ್ತಾವಿಸುವುದಾಗಿ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ಮುರಲೀಧರ ಭಟ್ ತಿಳಿಸಿದರು.
ಬಳಿಕ ಮಾತನಾಡಿದ ಪ್ರೋ| ಎ.ವಿ. ನಾರಾಯಣ ಇವರು ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸುವ ಜತೆಗೆ ಪಾಠ ಪ್ರವಚನಗಳಿಗೆ ಆಧ್ಯತೆಯನ್ನು ನೀಡುವಂತೆ ಉಪನ್ಯಾಸಕರಿಗೆ ಸಲಹೆ ಇತ್ತರು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತರುವಂತಾಗಬೇಕು. ಆ ನಿಟ್ಟಿನಲ್ಲಿ ಅಧ್ಯಾಪಕರು ಕಾರ್ಯಪ್ರವೃತ್ತರಾಗಬೇಕು. ಉತ್ತಮ ಫಲಿತಾಂಶ ಬಂದಾಗ ವಿದ್ಯಾ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ. ಹಾಗೂ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅದು ಹೆಚ್ಚು ಅನುಕೂಲವಾಗುವುದು ಎಂದು ತಿಳಿಸಿದರು.
ಅಧ್ಯಾಪಕ ಪ್ರತಿನಿಧಿ ಶ್ರೀಯುತ ಹರೀಶ್ ಭಟ್ ಇವರು ವಂದಿಸಿದರು.