ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಗಾಟನಾ ಕಾರ್ಯಕ್ರಮವು ದಿನಾಂಕ 10-08-2024 ರಂದು ನಡೆಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ರೈ.ಪಿ. ಇವರು ಮಾತನಾಡುತ್ತಾ “ಇಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದ್ದಾರೆ. ವಿಶ್ವವನ್ನು ಉಳಿಸಬೇಕಾದರೆ ಮೊದಲು ಭಾರತ ಉಳಿಬೇಕು ಅದಕ್ಕಾಗಿ ಭಾರತದ ಮೌಲ್ಯಗಳನ್ನು ಸಂರಕ್ಷಣೆ ಮಾಡಬೇಕು, ನಾಯಕನಿಗೆ ಸರಿಯಾದ ದಿಕ್ಕು ಸಿಕ್ಕಿದಾಗ ಸಮಾಜವನ್ನು ಸರಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯ ಎಂದು ಕಾಲೇಜಿನ ವಿದ್ಯಾರ್ಥಿ ನಾಯಕರುಗಳಿಗೆ ಅವರ ಜವಾಬ್ದಾರಿಯನ್ನು ಮನದಟ್ಟು ಮಾಡಿದರು”. ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಅಭಿವೃದ್ದಿಗೆ ನಾಂದಿಯಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ಸಂಸ್ಥೆಯ ಗೌರವಕ್ಕೆ ಚ್ಯುತಿಬಾರದಂತೆ ನಡೆಯತ್ತೇವೆ ಎಂದು ಮಾತು ಕೊಟ್ಟಂತೆ ನಡೆದು ಸಂಸ್ಥೆಯ ಅಭಿವೃಧ್ದಿಗೆ ಶ್ರಮಿಸುವವರಾಗಿ” ಎಂದು ನುಡಿದು ಶುಭಹಾರೈಸಿದರು.
ವಿದ್ಯಾರ್ಥಿಸಂಘದ ಪ್ರತಿನಿಧಿಗಳಾದ ಅಂಶಿಕ್ ಜಿ.ಕೆ, ಹೃತ್ವಿಕ್ ಪಿ.ಸಿ., ಸುಮನ್ ಡಿ., ವರ್ಷಿತ್ ಬಿ., ದೀವಿತ್ ಶೆಟ್ಟಿ,, ಶ್ರಾವ್ಯ ಇವರಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಸಿವಿಲ್ ವಿಭಾಗ ಮುಖ್ಯಸ್ಥರಾದ ರವಿರಾಮ ಎಸ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ ಹಾಗೂ ಸದಸ್ಯರಾದ ಈಶ್ವರಚಂದ್ರ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ್ ಎಸ್ ಅತಿಥಿಗಳನ್ನು ಸ್ವಾಗತಿಸಿದರು.
ವಿದ್ಯಾರ್ಥಿ ನಾಯಕ ಅಂಶಿಕ್ ಜಿ.ಕೆ. ವಂದನಾರ್ಪಣೆ ಗೈದರು. ವಿದ್ಯಾರ್ಥಿಗಳಾದ ಶೃಜನ್ಯ ತಂಡದವರು ಪ್ರಾರ್ಥಿಸಿದರು, ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ನಿರೂಪಣೆಯನ್ನು ಕಂಪ್ಯೂಟರ್ ಸೈನ್ಸ ವಿಭಾಗದ ವಿದ್ಯಾರ್ಥಿನಿ ವಿಜೇತ ನೆರವೇರಿಸಿದರು.