ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಹಮ್ಮಿಕೊಂಡ ಒಂದು ವಾರದ ಉದ್ಯೋಗ ನೈಪುಣ್ಯ ತರಬೇತಿಯು ದಿನಾಂಕ 29-04-2023ರಂದು ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್, ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ, ಸದಸ್ಯರಾದ ರವಿ ಮುಂಗ್ಲಿಮನೆ ಉಪಸ್ಥಿತರಿದ್ದರು. ಶಿಭಿರಾರ್ಥಿಗಳ ಹಾಗೂ ತರಬೇತುದಾರರನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಸ್ವಾಗತಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ಸೇವೆಯ ರೂಪದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದ ಶಿಭಿರಾರ್ಥಿಗಳು ತರಬೇತಿಯನ್ನು ವಿಸ್ತಾರಗೊಳಿಸಿಕೊಂಡು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಅದರ ಸಂಪೂರ್ಣ ಪ್ರಯೋಜನ ಪಡೆದಂತಾಗುತ್ತದೆ” ಎಂದರು.
ಕಾಲೇಜಿನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಾತನಾಡುತ್ತಾ “ಈ ತರಬೇತಿಯ ಪ್ರಯೋಜನವನ್ನು ಪಡೆದು ಸ್ವ ಉದ್ಯೋಗವನ್ನು ಮಾಡುವುದೇ ನಮ್ಮ ತರಬೇತಿಯ ಯಶಸ್ಸು, ಎಲ್ಲರಿಗೂ ಅಭಿನಂದನೆಗಳು” ಎಂದು ಶುಭ ಹಾರೈಸಿದರು.
ಸದಸ್ಯರಾದ ಶ್ರೀ ರವಿ ಮುಂಗ್ಲಿಮನೆ ಮಾತನಾಡುತ್ತಾ “ಉತ್ತಮ ತರಬೇತಿಯನ್ನು ಉತ್ತಮ ಜೀವನಕ್ಕೆ ಅಳವಡಿಸಿಕೊಂಡು ದೇಶಕ್ಕೆ ಮಾದರಿ ಪ್ರಜೆಗಳಾಗಿ” ಎಂದು ನುಡಿದರು.
ಈ ಸಂದರ್ಭದಲ್ಲಿ ಶಿಭಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಿಭಿರಾರ್ಥಿಗಳಾದ ಅಚಲ್, ಮಹದೇವಸ್ವಾಮಿ, ಅಭಯ್, ಆಕಾಶ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವಂದನಾರ್ಪಣೆಯನ್ನು ಶ್ರೀ ವಿನ್ಯಾಸ್, ಉಪನ್ಯಾಸಕರು ಆಟೋಮೋಬೈಲ್ ವಿಭಾಗ, ನೇರವೇರಿಸಿದರು. ಜಯಲಕ್ಷ್ಮಿ, ಹಿರಿಯ ಉಪನ್ಯಾಸಕಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ, ಪ್ರಾರ್ಥಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮುರಳೀಧರ್ ಎಸ್, ಮುಖ್ಯಸ್ಥರು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ, ನೆರವೇರಿಸಿದರು.