ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರಿನಲ್ಲಿ ಲಘು–ಉದ್ಯೋಗ ಭಾರತಿ ಕರ್ನಾಟಕ ಇದರ ಪುತ್ತೂರು ಘಟಕದ ವಾರ್ಷಿಕ ದಿನಾಚರಣೆಯನ್ನು ದಿನಾಂಕ 26-04-2023ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಗಾಟಿಸಿದ ಮುಖ್ಯ ಅತಿಥಿಗಳಾದ ಶ್ರೀ ಮಹಾದೇವ ಶಾಸ್ತ್ರಿ, ಸಂಚಾಲಕರು, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇವರು ಮಾತನಾಡುತ್ತಾ “ಬೇರೆ ಊರಿಗೆ ಹೋಗಿ ಬೇರೆಯವರ ಕೈಕೆಳಗೆ ಕೆಲಸ ಮಾಡುವುದರ ಬದಲು ನಮ್ಮದೇ ಊರಲ್ಲಿ ಸ್ವಂತ ಉದ್ಯೋಗ ಕೈಗೊಳ್ಳುವಂತೆ ಸಾಧನೆ ಮಾಡಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಲಘು–ಉದ್ಯೋಗ ಭಾರತಿ ಕರ್ನಾಟಕ ಇದರ ಪುತ್ತೂರು ಘಟಕದ ಅಧ್ಯಕ್ಷರಾದ ಎಸ್.ಆರ್.ಕೆ.ಲ್ಯಾಡರ್ಸ್ ನ ಮಾಲಿಕರಾದ ಶ್ರೀ ಕೇಶವ ಅಮೈ ಇವರು ಮಾತನಾಡುತ್ತಾ ಸ್ವಂತ ಉದ್ಯೋಗ ಕೈಗೊಳ್ಳುವಲ್ಲಿ ಪಡುವ ಸಾಧನೆ ಸಂಕಷ್ಟಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಲಘು–ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಪ್ರಸನ್ನ ಕುಮಾರ್ ಪಾದೆ ಕೋಡಿಂಬಾಳ, ಕಡಬ ಹಾಗೂ ಶ್ರೀಮತಿ ಮಹಾಲಕ್ಷ್ಮಿ, ಮಂಗಳ ಎಂಟರ್ಪ್ರೈಸಸ್ ಪುತ್ತೂರು ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಾಧಕರ ಕಿರುಪರಿಚಯವನ್ನು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ನಡೆಸಿಕೊಟ್ಟರು.
ಹಾಗೆಯೇ ಸ್ವ ಉದ್ಯೋಗಿಗಳಾದ ಶ್ರೀ ಸುರೇಶ್ ಕಮಿಲ, ಕಮಿಲ ಕೆಮಿಕಲ್ಸ್, ಸುಳ್ಯ ಹಾಗೂ ಶ್ರೀ ಮಹೇಶ್ ಕುಮಾರ್ ಪಿ.ಬಿ., ವಿಮೇಡ್ ಪಾಲಿ ಪ್ರೋಡಕ್ಟ್, ಪುತ್ತೂರು ತಮ್ಮ ಅನುಭವ ಹಾಗೂ ಸಾಧನೆಯ ಪಯಣದ ಶ್ರಮವನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳ ಸ್ವಾಗತವನ್ನು ಶ್ರೀ ವೆಂಕಟಕೃಷ್ಣ ಯಂ.ಎನ್., ಕಾರ್ಯದರ್ಶಿಗಳು, ಲಘು–ಉದ್ಯೋಗ ಭಾರತಿ ಕರ್ನಾಟಕ ಇವರು ನೆರವೇರಿಸಿದರು. ಶ್ರೀ ಮುರಳೀಧರ್ ಕೆ. ಸಂಚಾಲಕರು ಲಘು–ಉದ್ಯೋಗ ಭಾರತಿ ಅತಿಥಿಗಳನ್ನು ಪರಿಚಯಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಇವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಮೇಘನಾ ಪಾಣಾಜೆ ನಡೆಸಿಕೊಟ್ಟರು.