• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ

Annual_Day_2023_1

ಪುತೂರು: “ನಮ್ಮ ಬದುಕಿಗೆ ಬುದ್ದಿ, ಧೈರ್ಯ, ಕೌಶಲ್ಯಅತೀ ಮುಖ್ಯ. ಧೈರ್ಯವಿದ್ದರೆ ಯಾವುದೇ ಕೆಲಸವನ್ನೂ ಭಯವಿಲ್ಲದೆ ಮುನ್ನುಗ್ಗಿ ಮಾಡಬಹುದು. ಬುದ್ದಿ ನಮಗೆ ಕೆಲಸವನ್ನು ಸರಿಯಾಗಿ ಮಾಡಲು ಅಗತ್ಯ ಹಾಗೆಯೇ ಕೌಶಲ್ಯ ನಮ್ಮ ಕೆಲಸವನ್ನು ಸುಲಭವಾಗಿಸುತ್ತದೆ. . ಪಾಲಿಟೆಕ್ನಿಕ್ನಲ್ಲಿ ಕಲಿಯುವ ವಿದ್ಯಾರ್ಥಿಗಳು ಕೌಶಲ್ಯಭರಿತ ಶಿಕ್ಷಣವನ್ನು ಪಡೆದು ಸ್ವಾವಲಂಬಿಗಳಾದಾಗ ಗ್ರಾಮ ಗ್ರಾಮಗಳು ಅಭಿವೃದ್ದಿ ಹೊಂದಿ ಆತ್ಮನಿರ್ಭರ ಭಾರತದ ಕನಸು ನನಸಾಗುತ್ತದೆ. ನಮಗೆ ನಾವೇ ಉದ್ಯೋಗ ಕಂಡುಕೊಂಡು ಸ್ವಾವಲಂಬಿಗಳಾದಾಗ ನಾವು ನಮಗೆ ಬೇಕಾದ ಬದುಕನ್ನು ಸಾಗಿಸಲು ಅನಕೂಲವಾಗುತ್ತದೆ. ಇಂತಹ ವಿಶಿಷ್ಟ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ನಿಮಗೆ ಯಶಸ್ಸು ಸಿಗಲಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಡಾ. ಸುಧಾ ರಾವ್ ಹಾರೈಸಿದರು. ಸಮಾರಂಭಕ್ಕೆ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಪಿ.ಜಿ. ಜಗನ್ನಿವಾಸ್ ರಾವ್ ಪ್ರಸ್ತುತ ಪುತ್ತೂರಿನಲ್ಲಿ ನಗರಸಭಾ ಅಧ್ಯಕ್ಷರಾಗಿದ್ದಾರೆ. ಇವರು ಮಾತನಾಡುತ್ತಾ ನನ್ನ ಎಲ್ಲಾ ಕಾರ್ಯಕ್ಷೇತ್ರದಲ್ಲೂ ಮುಂದುವರಿಯಲು ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಪಡೆದ ಅನುಭವ ಸಹಕಾರಿಯಾಗಿದೆ. ಮುಂದಿನ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸುವಂತಾಗಲಿಎಂದು ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದ್ದರು. ಇವರು ಮಾತನಾಡುತ್ತಾ ವಾರ್ಷಿಕೋತ್ಸವವನ್ನು ಕಲಿಕೆಯ ಜೊತೆಗೆ ವಿದ್ಯಾರ್ಥಿಯ ಸುಪ್ತಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯನ್ನಾಗಿ ಮಾಡಲು ಆಚರಿಸಲಾಗುತ್ತದೆ. ವಿವೇಕಾನಂದ ಪಾಲಿಟೆಕ್ನಿಕ್ ದಕ್ಷಿಣಕನ್ನಡ ಜಿಲ್ಲೆಯ ಅತ್ಯಂತ ಉತ್ತಮ ಶಿಕ್ಷಣಸಂಸ್ಥೆ. ಸುಶಿಕ್ಷಿತ, ಜಾಗೃತ ಇಂಜಿನಿಯರ್ ಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟರೆ ನಮ್ಮ ಶಿಕ್ಷಣ ಸಂಸ್ಥೆಯು ನೀಡುವ ಶಿಕ್ಷಣ ಸಾಕಾರವಾಗುತ್ತದೆಎಂದು ಶುಭಹಾರೈಸಿದರು.

ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂ ಕಾರ್ಯಕ್ರಮವು, ವಿದ್ಯಾರ್ಥಿನಿಯರಾದ ಕುಮಾರಿ ಶ್ರೀಮಾನಸ ಮತ್ತು ಕುಮಾರಿ ನಿಶ್ಮಿತ ಇವರ ಪ್ರಾರ್ಥನೆ ನಂತರ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕರಾದ ಮಣಿಲ ಸಿ. ಮಹದೇವಶಾಸ್ತ್ರಿ  ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಚಂದ್ರಕುಮಾರ್ ಪಾಲಿಟೆಕ್ನಿಕ್ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಕಲಿಕೆ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ರಾವ್, ಪ್ರೋ..ವಿ.ನಾರಾಯಣ್, ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ, ಹಾಗೂ ಸದಸ್ಯರುಗಳಾದ ಶ್ರೀ ಈಶ್ವರಚಂದ್ರ, ಶ್ರೀ ರವಿಮುಂಗ್ಲಿಮನೆ, ಶ್ರೀ ಅಚ್ಯುತಪ್ರಭು, ಶ್ರೀಮತಿ ಉಷಾಭಟ್ ಮುಳಿಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ಮುರಳೀಧರ್.ಎಸ್ ಹಾಗೂ ಶ್ರೀಮತಿ ಪುಷ್ಪಾ.ಬಿ.ಎನ್. ಹಾಗೂ, ಶಿಕ್ಷಕ ಶಿಕ್ಷಕೇತರ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ವಿದ್ಯಾರ್ಥಿನಾಯಕ ಅಸ್ಮಿತ್ಬಾರ್ಯ ಧನ್ಯವಾದ ಸಮರ್ಪಣೆ ಮಾಡಿದರು.ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Highslide for Wordpress Plugin