• 08251 231197
  • vptputtur@yahoo.co.in

ಅಮೃತ ಮಹೋತ್ಸವದ ಸಂದೇಶ ಹಾಗೂ ರಕ್ಷಾ ಬಂಧನ ಕಾರ್‍ಯಕ್ರಮ

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಮೃತ ಮಹೋತ್ಸವದ ಸಂದೇಶ ಹಾಗೂ ರಕ್ಷಾ ಬಂಧನ ಕಾರ್‍ಯಕ್ರಮ ಆಚರಿಸಲಾಯಿತು. ದಿಕ್ಸೂಚಿ ಭಾಷಣವನ್ನು ಮಾಡಿದ ಶ್ರೀರಂಗ ಶಾಸ್ತ್ರಿ, ನಿವೃತ್ತ ಸೈನಿಕರು, ಭಾರತೀಯ ನೌಕದಳ ಇವರು ಮಾತನಾಡುತ್ತಾ, ಉತ್ತಮ ನಾಗರಿಕನಾಗಿ ರೂಪುಗೊಳ್ಳುವಲ್ಲಿ ಶಿಸ್ತು ಮುಖ್ಯ. ಸಂಯಮ, ಬದ್ಧತೆ, ಸಮಯಪರಿಪಾಲನೆ, ಜವಾಬ್ದಾರಿಯನ್ನು ಪೂರ್ಣಗೊಳಿಸುವುದು. ಸಹಾಯಹಸ್ತ ನೀಡುವುದು, ಪ್ರಾಮಾಣಿಕ ಶುದ್ಧ ಹಸ್ತರಾಗಿರುವುದು ನಮ್ಮ ಜವಾಬ್ದಾರಿ. ರಾಷ್ಟ್ರಪ್ರೇಮ ಹಾಗೂ ಸ್ವಚ್ಛ ಭಾರತಕ್ಕೆ ನಮ್ಮ ಕೊಡುಗೆ ಸದಾ ಇರಬೇಕು ಎಂದು ಯುವ ಪೀಳಗೆಯಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಕಾರ್‍ಯಕ್ರಮದಲ್ಲಿ ಉಪಸ್ಥಿತಿಯಿದ್ದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಜೆ.ಕೆ. ಮಾತನಾಡುತ್ತಾ, ಶ್ರಾವಣ ಹುಣ್ಣಿಮೆಯ ದಿನ ರಕ್ಷಾಬಂಧನ ಕಾರ್‍ಯಕ್ರಮವನ್ನು ವಿಶೇಷ ಹಬ್ಬವನ್ನಾಗಿ ಆಚರಿಸುತ್ತಾರೆ. ಇದು ಸೋದರತೆಯ ಸಂಕೇತ. ಜಾತಿ, ಮತ, ಬೇಧ ಮರೆತು ರಕ್ಷಾಬಂಭನವನ್ನು ಸಂಭ್ರಮದಿಂದ ಆಚರಿಸೋಣ ಎಂದು ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಳಿಕ ಎಲ್ಲರೂ ಪರಸ್ಪರ ರಕ್ಷೆಯನ್ನು ಕಟ್ಟಿಕೊಳ್ಳುವುದರ ಮೂಕ ರಕ್ಷಾಬಂಧನ ಕಾರ್‍ಯಕ್ರಮವನ್ನು ನಡೆಸಲಾಯಿತು.

ಕಾರ್‍ಯಕ್ರಮದ ಅಧ್ಯಕ್ಷರಾದ ರವಿ ಮುಂಗ್ಲಿಮನೆ ಮಾತನಾಡುತ್ತಾ, ಗುರು, ರೈತ, ಕಾರ್ಮಿಕವರ್ಗ, ಸೈನಿಕವರ್ಗ ರಾಷ್ಟ್ರಲಾಂಛನದ ನಾಲ್ಕು ಸಿಂಹಗಳಿದ್ದಂತೆ. ಇವರ ಮಧ್ಯದಲ್ಲಿ ನಾವು ರಾಷ್ಟ್ರಧ್ವಜವನ್ನು ಹಾರಿಸೋಣ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ದೇಶಕ್ಕೆ ಯಾವ ಆಪತ್ತೂ ಇರದು. ಮಾನವ ಕುಲದ ಸೇವೆಯೇ ದೇಶದ ಅತ್ಯುತ್ತಮ ಸೇವೆ. ದೇಶ ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳೋಣ ಎಂದರು.

ಈ ಕಾರ್‍ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಮಹದೇವ ಶಾಸ್ತ್ರಿ, ಸದಸ್ಯರಾದ ಅಚ್ಚುತ ಪ್ರಭು, ಮುಳಿಯ ಉಷಾ ಭಟ್ , ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶ್ರೀಮಾನಸ ಹಾಗೂ ಸೌಪರ್ಣಿಕಾ ಶಾರದ ಪ್ರಾರ್ಥಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಮುರಳೀಧರ್ ಧನ್ಯವಾದ ಸಮರ್ಪಣೆ ಮಾಡಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಕಾರ್‍ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin